Advertisement

Spirit Airlines;ವಿಮಾನದಲ್ಲೇ ಮೂತ್ರ ವಿಸರ್ಜಿಸಿದ ಮಹಿಳೆ!

12:11 AM Jul 24, 2023 | Team Udayavani |

ವಾಷಿಂಗ್ಟನ್‌: ಇತ್ತೀಚೆಗೆ ವಿಮಾನದಲ್ಲಿ ವಿಚಿತ್ರ ಘಟನೆಗಳು ಹೆಚ್ಚು ವರದಿಯಾಗುತ್ತಿದೆ. ಅಮೆರಿಕ ಮೂಲದ ಸ್ಪಿರಿಟ್‌ ಏರ್‌ಲೈನ್ಸ್‌ನಲ್ಲಿ ಮಹಿಳೆಯೊಬ್ಬರು ವಿಮಾನದ ನೆಲದ ಮೇಲೆಯೇ ಮೂತ್ರ ವಿಸರ್ಜಿಸಿದ ಘಟನೆ ನಡೆದಿದೆ.

Advertisement

“ಎರಡು ಗಂಟೆಗಳು ಕಾದರೂ ವಿಮಾನದ ಶೌಚಾಲಯವನ್ನು ಸಿಬಂದಿ ತೆರೆಯಲಿಲ್ಲ. ಹಾಗಾಗಿ ತಡೆದುಕೊಳ್ಳಲು ಸಾಧ್ಯವಾಗದೇ ವಿಮಾನದ ನೆಲದ ಮೇಲೆ ಮೂತ್ರ ವಿಸರ್ಜಿಸಿದೆ’ ಎಂದು ಮಹಿಳೆ ಸಮಜಾಯಿಷಿ ನೀಡಿದ್ದಾರೆ.

ಜು.20ರಂದು ನಡೆದ ಈ ಘಟನೆಯನ್ನು ವಿಮಾನದ ಸಿಬಂದಿ ವೀಡಿಯೋ ಮಾಡಿದ್ದಾರೆ. “ಸ್ಪಿರಿಟ್‌ ಏರ್‌ಲೈನ್ಸ್‌ನಲ್ಲಿ ಆಫ್ರಿಕನ್‌-ಅಮೆರಿಕನ್‌ ಮಹಿಳೆಯೊಬ್ಬಳು ವಿಮಾನದ ನೆಲದ ಮೇಲೆ ಮೂತ್ರ ವಿಸರ್ಜಿಸಿದ್ದಾಳೆ.

ವಿಮಾನ ಟೇಕ್‌ಆಫ್ ಆದ ಅನಂತರ ಸಿಬಂದಿ ಶೌಚಾಲಯದ ಬಾಗಿಲು ತೆರೆಯುವವರೆಗೆ ಕಾಯುವ ತಾಳ್ಮೆ ಆಕೆಗಿಲ್ಲ’ ಎಂದು ವೀಡಿಯೋ ಸಮೇತ ಟ್ವೀಟ್‌ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next