Advertisement

Atal ಸೇತುವೆಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ… Cab ಚಾಲಕನಿಂದ ಉಳಿಯಿತು ಜೀವ

11:14 AM Aug 17, 2024 | Team Udayavani |

ಮುಂಬೈ: ಅಟಲ್ ಸೇತುವೆ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಮಹಿಳೆಯನ್ನು ಕ್ಯಾಬ್ ಚಾಲಕ ಮತ್ತು ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ಸಮಯಪಜ್ಞೆಯಿಂದ ರಕ್ಷಿಸಿದ ಘಟನೆ ಶುಕ್ರವಾರ (ಆಗಸ್ಟ್ 16) ರಂದು ನಡೆದಿದೆ.

Advertisement

ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ರೀಮಾ ಮುಖೇಶ್ ಪಟೇಲ್ (56 ವರ್ಷ) ಎಂದು ಗುರುತಿಸಲಾಗಿದ್ದು, ಈಕೆ ಮುಂಬೈನ ಈಶಾನ್ಯ ಭಾಗದಲ್ಲಿರುವ ಮುಲುಂಡ್‌ನ ಉಪನಗರ ನಿವಾಸಿಯಾಗಿದ್ದಾರೆ ಎನ್ನಲಾಗಿದೆ.

ಶುಕ್ರವಾರ ಸಂಜೆ ಬಾಡಿಗೆ ಕಾರು ಗೊತ್ತುಪಡಿಸಿ ಅಟಲ್ ಸೇತುವೆ ಮಧ್ಯೆ ಕಾರು ನಿಲ್ಲಿಸಿ ಸೇತುವೆಯ ತಡೆಗೋಡೆ ಹತ್ತಿದ ಮಹಿಳೆ ಹಾರಲು ಯತ್ನಿಸಿದ್ದಾರೆ ಈ ವೇಳೆ ಸಮಯಪ್ರಜ್ಞೆ ಮೆರೆದ ಕಾರು ಚಾಲಕ ಮಹಿಳೆಯ ಕೂದಲು ಹಿಡಿದು ರಕ್ಷಣೆಗೆ ಮುಂದಾಗಿದ್ದಾರೆ ಅದೇ ಸಮಯಕ್ಕೆ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಸಂಚಾರಿ ಪೊಲೀಸರು ಕೂಡಲೇ ಮಹಿಳೆಯ ರಕ್ಷಣೆಗೆ ಕೈಜೋಡಿಸಿದ್ದಾರೆ, ಕೆಲ ಹೊತ್ತು ಕಾರ್ಯಾಚರಣೆ ನಡೆಸಿ ಮಹಿಳೆಯನ್ನು ಮೇಲಕ್ಕೆ ಎತ್ತಿ ರಕ್ಷಣೆ ಮಾಡಿದ್ದಾರೆ.

ಘಟನೆಯ ದೃಶ್ಯ ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಕಾರು ಚಾಲಕನ ಸಮಯಪ್ರಜ್ಞೆಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement

ವರಸೆ ಬದಲಿಸಿದ ಮಹಿಳೆ:
ಇತ್ತ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ರಕ್ಷಣೆ ಮಾಡಿದ ಬೆನ್ನಲ್ಲೇ ಮಹಿಳೆ ತಾನು ತನ್ನ ಮನೆಯಲ್ಲಿದ್ದ ಹಳೆಯ ದೇವರ ಫೋಟೋಗಳನ್ನು ನೀರಿಗೆ ಬಿಡಲು ಇಲ್ಲಿಗೆ ಬಂದಿದ್ದು ಹಾಗಾಗಿ ಸೇತುವೆಯ ದಂಡೆಯ ಮೇಲೆ ಕುಳಿತು ದೇವರ ಪ್ರಾರ್ಥನೆ ಮಾಡುವ ವೇಳೆ ಆಯತಪ್ಪಿ ನೀರಿಗೆ ಬಿದ್ದೆ ಎಂದು ಹೇಳಿಕೊಂಡಿದ್ದಾರೆ.

ಟ್ರಾಫಿಕ್ ಪೊಲೀಸ್ ಕಾರ್ಯಕ್ಕೆ ಕಮಿಷನರ್ ಮೆಚ್ಚುಗೆ:
ಅಟಲ್ ಸೇತುನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಘಟನೆಗೆ ತಕ್ಷಣ ಸ್ಪಂದಿಸಿದ ಕರ್ತವ್ಯ ನಿರತ ಅಧಿಕಾರಿಗಳಾದ ಲಲಿತ್ ಶಿರಸತ್, ಕಿರಣ್ ಮಹ್ತ್ರೆ, ಯಶ್ ಸೋನಾವಾನೆ ಮತ್ತು ಮಯೂರ್ ಪಾಟೀಲ್ ಅವರ ಕಾರ್ಯ ಶ್ಲಾಘನೀಯ ಎಂದು ಮುಂಬೈ ಪೊಲೀಸ್ ಕಮಿಷನರ್ ವಿವೇಕ್ ಫನ್ಸಾಲ್ಕರ್ ‘X’ ನಲ್ಲಿನ ಪೋಸ್ಟ್‌ ಮಾಡಿದ್ದಾರೆ.

ಇದನ್ನೂ ಓದಿ: Vinesh Phogat: ಹೋರಾಟ ಮುಂದುವರಿಯುತ್ತದೆ..; ಕುತೂಹಲ ಮೂಡಿಸಿದ ಪೋಗಾಟ್‌ ಪತ್ರ

 

Advertisement

Udayavani is now on Telegram. Click here to join our channel and stay updated with the latest news.

Next