ನವದೆಹಲಿ: ಮಹಿಳೆಯೊಬ್ಬರು ಝೋಮ್ಯಾಟೋ ಆಫ್ ಮೂಲಕ ಸಸ್ಯಾಹಾರಿ ಊಟಕ್ಕೆಆರ್ಡರ್ ಮಾಡಿ ನಾನ್ ವೆಜ್ ಊಟ ಪಾರ್ಸೆಲ್ ಬಂದಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.
ನಿರುಪಮಾ ಸಿಂಗ್ ಎಂಬ ಮಹಿಳೆಯೊಬ್ಬರು ಝೋಮ್ಯಾಟೋ ಆಫ್ ಮೂಲಕ ಸಸ್ಯಾಹಾರಿ ಊಟಕ್ಕೆಆರ್ಡರ್ ಮಾಡಿದ್ದಾರೆ ಕೆಲ ಸಮಯದ ಬಳಿಕ ಊಟ ಪಾರ್ಸೆಲ್ ಬಂದಿದ್ದು ಇನ್ನೇನು ಊಟ ಮಾಡುವ ಎಂದು ಪೊಟ್ಟಣ ತೆರೆದಾಗ ಮಹಿಳೆಗೆ ಶಾಕ್ ಆಗಿದೆ… ಮಹಿಳೆ ತೆರೆದ ಆಹಾರ ಪೊಟ್ಟಣದಲ್ಲಿ ಸಸ್ಯಾಹಾರಿ ಬದಲು ಕೋಳಿ ಪದಾರ್ಥ ಹಾಕಲಾಗಿದೆ.
ಮಹಿಳೆ ಪದಾರ್ಥವನ್ನು ಪ್ಲೇಟ್ ಗೆ ಹಾಕಿಕೊಂಡಿದ್ದಾರೆ ಇನ್ನೇನು ತಿನ್ನಬೇಕು ಎಂದು ನೋಡುವಾಗ ಇದು ಸಸ್ಯಹಾರಿಯಲ್ಲ ಎಂಬುದು ಗೊತ್ತಾಗಿದೆ, ಕೂಡಲೇ ಅದರ ಫೋಟೋ ತೆಗೆದ ಮಹಿಳೆ ಟ್ವಿಟರ್ ಮೂಲಕ ಝೋಮ್ಯಾಟೋ ಸಂಸ್ಥೆಯ ಯಡವಟ್ಟಿನ ಕುರಿತು ಪೋಸ್ಟ್ ಮಾಡಿದ್ದಾರೆ. ಇದನ್ನು ಗಮನಿಸಿದ ಝೋಮ್ಯಾಟೋ ಸಂಸ್ಥೆ ಮಹಿಳೆಗೆ ಕರೆ ಮಾಡಿ ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳಿದೆ.
ನಿರುಪಮಾ ಸಿಂಗ್ ಮಾಡಿರುವ ಪೋಸ್ಟ್ ಗೆ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ, ಅಲ್ಲದೆ ತಮಗಾದ ಕೆಲವು ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಝೋಮ್ಯಾಟೋ ಕೇವಲ ಆಹಾರ ವಿತರಿಸುವ ಕೆಲಸ ಮಾಡುತ್ತಿದೆ ಇಲ್ಲಿ ತಪ್ಪು ಮಾಡಿರುವುದು ಹೋಟೆಲ್ ಸಿಬ್ಬಂದಿಗಳು ಹಾಗಾಗಿ ಝೋಮ್ಯಾಟೋ ವನ್ನು ದೂರಿ ಪ್ರಯೋಜನವಿಲ್ಲ ಎಂದು ಓರ್ವ ವ್ಯಕ್ತಿ ಬರೆದುಕೊಂಡಿದ್ದರೆ, ಇನ್ನೊಬ್ಬರು ಟ್ವೀಟ್ ಮಾಡಿ ಕಳೆದ ವಷ ಓರ್ವ ವ್ಯಕ್ತಿ ಟೀ ಆರ್ಡರ್ ಮಾಡಿದ್ದು ಟೀ ಕುಡಿಯುವ ವೇಳೆ ಅದರಲ್ಲಿ ಮಾಂಸ ಪತ್ತೆಯಾಗಿತ್ತು ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ರಾಹುಲ್ ಮದುವೆ ಆಗುವುದಿಲ್ಲ ಯಾಕೆ ಗೊತ್ತಾ?… ; ನಳಿನ್ ಹೇಳಿಕೆ ವೈರಲ್