Advertisement

Maharashtra: ಕಂದಕಕ್ಕೆ ಉರುಳಿದ ಮದುವೆ ಮನೆಯ ಬಸ್: ಮಹಿಳೆ ಸಾವು, ಹಲವರಿಗೆ ಗಾಯ

01:54 PM May 13, 2023 | Team Udayavani |

ಮಹಾರಾಷ್ಟ್ರ: ಮದುವೆ ಮನೆಯ (ಬಾರಾತಿಗಳು) ಅತಿಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ಸೊಂದು ಕಂದಕಕ್ಕೆ ಉರುಳಿ ಬಿದ್ದು ಮಹಿಳೆ ಮೃತಪಟ್ಟು, ಹಲವರು ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

Advertisement

ಸುಂಧಾ ಹರಿದಾಸ್ ಮಾಧವಿ ಮೃತ ಮಹಿಳೆ.

ಮದುವೆ ಮನೆಯ 60 ಅತಿಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ನಂದಗಾಂವ್‌ನಿಂದ ರಾಜೂರಾಗೆ ಹಿಂತಿರುಗುತ್ತಿದ್ದಾಗ ಬಲ್ಲಾರ್‌ಪುರ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದಿದೆ. ಮಹಿಳೆ ಮೃತಪಟ್ಟಿದ್ದು, ಒಟ್ಟು 24  ಮಂದಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಗ್ರಾಮಸ್ಥರು ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next