ಗುಜರಾತ್: ಬಿರುಸಿನ ಗಾಳಿಗೆ ಮರವೊಂದು ಬೈಕ್ ಮೇಲೆ ಬಿದ್ದು, ಪತ್ನಿ ಸಾವನ್ನಪ್ಪಿ, ಆಕೆಯ ಪತಿ ಗಾಯಗೊಂಡಿರುವ ಘಟನೆ ಗುಜರಾತ್‌ನ ರಾಜ್‌ಕೋಟ್ ಜಿಲ್ಲೆಯ ಜಸ್ದಾನ್ ತಾಲೂಕಿನ ರಾಜ್ಯ ಹೆದ್ದಾರಿಯಲ್ಲಿ ಸೋಮವಾರ (ಜೂ.12 ರಂದು) ನಡೆದಿದೆ.
ಬೈಪರ್ ಜಾಯ್ ಚಂಡಮಾರುತದ ಪರಿಣಾಮ ಗುಜರಾತ್‌ನ ಹಲವು ಭಾಗಗಳಲ್ಲಿ ಬಿರುಸಿನ ಗಾಳಿ ಬೀಸುತ್ತಿದೆ. ಸೋಮವಾರ ಮುಂಜಾನೆ11:30 ರ ಸುಮಾರಿಗೆ ಬೃಹತ್ ಮರವೊಂದು ಬಿರುಸಿನ ಗಾಳಿಗೆ ಉರುಳಿ ಬಿದ್ದು ಒಬ್ಬರ ಪ್ರಾಣ ಹಾನಿಗೆ ಕಾರಣವಾಗಿದೆ.
ಇದನ್ನೂ ಓದಿ: ಲೈಫ್‌ಗಾರ್ಡ್ ಎಚ್ಚರಿಕೆಗೆ ನಿರ್ಲಕ್ಷ್ಯ: ಜುಹು ಬೀಚ್‌ನಲ್ಲಿ ಮುಳುಗಿದ ನಾಲ್ವರು ಬಾಲಕರು
ಕಮಲಾಪುರ-ಭಡ್ಲಾ ರಾಜ್ಯ ಹೆದ್ದಾರಿಯಲ್ಲಿ ವರ್ಷಾ ಬವಲಿಯಾ ತನ್ನ ಪತಿ ಭವೀಶ್ ಅವರೊಂದಿಗೆ ಬೈಕ್ ನಲ್ಲಿ ತೆರಳುತ್ತಿದ್ದರು. ಈ ವೇಳೆ ವೇಗವಾಗಿ ಗಾಳಿ ಬೀಸಿದ ಪರಿಣಾಮ ಬೃಹತ್ ಮರವೊಂದು ಅವರ ಬೈಕ್ ಮೇಲೆಯೇ ಬಿದ್ದಿದೆ. ಪರಿಣಾಮ ವರ್ಷಾ ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ಮರದಡಿಯಿಂದ ಹೊರ ತೆಗೆದು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಕೆಲವೇ ನಿಮಿಷದಲ್ಲಿ ಅವರು ಮೃತಪಟ್ಟಿದ್ದಾರೆ. ಅವರ ಪತಿ ಭವೀಶ್ ಗೆ ಗಾಯಗಳಾಗಿವೆ ಎಂದು ಘಟನೆ ಬಗ್ಗೆ ಜಸದನ್ ತಾಲೂಕು ಮಮ್ಲತಾರ್ (ವಿಪತ್ತು ವಿಭಾಗ) ಅಶ್ವಿನ್ ಪದನಿ ಹೇಳಿದರು.