Advertisement

ಆರ್ಡರ್ ಮಾಡಿದ್ದು 1.5 ಲಕ್ಷ ಬೆಲೆಯ ಐಫೋನ್ 13 ಪ್ರೋ ಮ್ಯಾಕ್ಸ್, ಮನೆಗೆ ಬಂದಿದ್ದು ಸೋಪು!

10:13 AM Feb 08, 2022 | Team Udayavani |

ಲಂಡನ್: ಇ-ಕಾಮರ್ಸ್ ವೆಬ್‌ ಸೈಟ್‌ ಗಳ ಮೂಲಕ ದುಬಾರಿ ವಸ್ತುಗಳನ್ನು ಆರ್ಡರ್ ಮಾಡಿದಾಗ ಬಹಳಷ್ಟು ಜನರು ಬೇರೆ ಕಡಿಮೆ ಬೆಲೆಯ ಉತ್ಪನ್ನವನ್ನು ಪಡೆದ ಘಟನೆಗಳು ಈ ಹಿಂದೆಯೂ ನಡೆದಿದೆ. ಈ ರೀತಿಯ ಘಟನೆಗಳು ಅಪರೂಪವಾಗಿ ಸಂಭವಿಸಿದರೂ, ಆನ್‌ ಲೈನ್‌ನಲ್ಲಿ ಉತ್ಪನ್ನಗಳನ್ನು ಆರ್ಡರ್ ಮಾಡುವಲ್ಲಿ ವ್ಯಕ್ತಿಯು ಆತ್ಮವಿಶ್ವಾಸವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ.

Advertisement

ಯುಕೆ ಮೂಲದ ಮಹಿಳೆಯೊಬ್ಬರು ಆ್ಯಪಲ್‌ ನ ಅತ್ಯಂತ ದುಬಾರಿ ಸ್ಮಾರ್ಟ್‌ಫೋನನ್ನು ಆರ್ಡರ್ ಮಾಡಿದ್ದರು ಆದರೆ ಮನೆ ಬಾಗಿಲಿಗೆ ಬಂದಿದ್ದು ಸಾಬೂನು!

ಕೆಲವು ತಿಂಗಳ ಹಿಂದೆ, ಕೇರಳದ ವ್ಯಕ್ತಿಯೊಬ್ಬರು ಆ್ಯಪಲ್ ಐಫೋನ್ 12 ಆರ್ಡರ್ ಮಾಡಿದ್ದರು, ಆದರೆ ಬದಲಿಗೆ ಪಾತ್ರೆ ತೊಳೆಯುವ ಸೋಪ್ ಮತ್ತು 5 ರೂಪಾಯಿ ನಾಣ್ಯವು ಅವರಿಗೆ ತಲುಪಿತ್ತು. ಯುಕೆಯಲ್ಲಿ ಮಹಿಳೆಯೊಬ್ಬರಿಗೆ ಇದೇ ರೀತಿ ಐಫೋನ್ ಬದಲು ಸೋಪು ಮನೆಗೆ ಬಂದಿದೆ.

ಇದನ್ನೂ ಓದಿ:4 ತಿಂಗಳಲ್ಲಿ 4 ಸಾವಿರ ಮಕ್ಕಳಿಗೆ ಅಪೌಷ್ಟಿಕತೆ; ಉತ್ತರ ಕರ್ನಾಟಕದಲ್ಲಿ ಹೆಚ್ಚಿದೆ ಸಮಸ್ಯೆ

ಖೌಲಾ ಲಫಾಯ್ಲಿ ಎಂಬ ಮಹಿಳೆ ಸ್ಥಳೀಯ ಇ-ಕಾಮರ್ಸ್ ಸೈಟ್ ಮೂಲಕ ಐಫೋನ್ 13 ಪ್ರೋ ಮ್ಯಾಕ್ಸ್ ಆರ್ಡರ್ ಮಾಡಿದ್ದರು. ಕೆಲವು ದಿನಗಳು ಕಾದ ನಂತರ ಮನೆ ಬಾಗಿಲಿಗೆ ಒಂದು ಬಾಟಲ್ ಹ್ಯಾಂಡ್ ವಾಶ್ ಸೋಪ್ ತಲುಪಿದೆ.

Advertisement

ಆ್ಯಪಲ್ ಇನ್ಸೈಡರ್ ನ ವರದಿಯ ಪ್ರಕಾರ, ವಿತರಣೆಯ ಸಮಯದಲ್ಲಿ ವಂಚನೆ ಸಂಭವಿಸಿರಬಹುದು. ಮೊಬೈಲ್ ನ್ನು 36 ತಿಂಗಳ ಒಪ್ಪಂದದ ಮೇಲೆ ಸ್ಕೈ ಮೊಬೈಲ್ ಮೂಲಕ ಖರೀದಿಸಲಾಗಿದೆ. ಐಫೋನ್ ನ 13 ಪ್ರೋ ಮ್ಯಾಕ್ಸ್ ನ ಬೆಲೆ ಸುಮಾರು ಸರಿಸುಮಾರು 1.5 ಲಕ್ಷ ರೂ ಆಗಿದೆ. ಆದರೆ ಮಹಿಳೆ ಇದರ ಸಂಪೂರ್ಣ ಮೊತ್ತವನ್ನು ಪಾವತಿ ಮಾಡಿಲ್ಲ. ಭಾರತದಲ್ಲಿ ಇದೇ ಸ್ಮಾರ್ಟ್ ಫೋನ್ ಗೆ ಭಾರತದಲ್ಲಿ 1,29,900 ರೂ. ಬೆಲೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next