Advertisement

ಆರ್ಡರ್ ಮಾಡಿದ್ದು ಐಪೋನ್ 12 ಮ್ಯಾಕ್ಸ್ ಪ್ರೋ: ಬಂದ ವಸ್ತುವನ್ನು ನೋಡಿ ಹೌಹಾರಿದ ಮಹಿಳೆ !

10:38 AM Mar 03, 2021 | Team Udayavani |

ಬೀಜಿಂಗ್: ಮಹಿಳೆಯೊಬ್ಬರು ಆನ್ ಲೈನ್ ಮೂಲಕ ಐಪೋನ್ 12 ಮ್ಯಾಕ್ಸ್ ಪ್ರೋ ಆರ್ಡರ್ ಮಾಡಿದ್ದರು. ಆದರೆ ಐಪೋನ್ ಬದಲಿಗೆ ಆ್ಯಪಲ್ ರುಚಿಯಿರುವ ಮೊಸರಿನ ಪಾನೀಯ ಮನೆಗೆ ಕೊರಿಯರ್ ಮೂಲಕ ಬಂದು ತಲುಪಿದ ಘಟನೆ ಚೀನಾದಲ್ಲಿ ನಡೆದಿದೆ.

Advertisement

ಲಿಯು ಎಂಬ ಮಹಿಳೆ ಫೆಬ್ರವರಿ 16ರಂದು ಆ್ಯಪಲ್ ನ ಅಧಿಕೃತ ವೆಬ್ ಸೈಟ್ ನಲ್ಲಿ 1500 ಡಾಲರ್ ಪಾವತಿಸಿ ಐಪೋನ್ 12 ಮ್ಯಾಕ್ಸ್ ಪ್ರೋ ಖರೀದಿಸಿದ್ದರು. ಆದರೆ ಶಾಂಘೈ ಮತ್ತು ಅನುಯ್ ಮಾರ್ಗದ ನಡುವೆ ಕೊರಿಯರ್ ನೀಡುವ ವ್ಯಕ್ತಿ ಐಪೋನ್ ಅನ್ನು ಎಗರಿಸಿ ಅದರ ಬದಲಿಗೆ ಮೊಸರಿನ ಪಾನೀಯವನ್ನು ಪಾರ್ಸೆಲ್ ನಲ್ಲಿ ಇರಿಸಿದ್ದಾನೆ.

ಫೆಬ್ರವರಿ 16ರಂದು ಪಾರ್ಸೆಲ್ ತೆರದಾಗ ಲಿಯು ಆಘಾತಗೊಂಡಿದ್ದಾರೆ. ಘಟನೆಯ ಕುರಿತು ಚೀನಾದ ಸಾಮಾಜಿಕ ಜಾಲತಾಣ Weibo ನಲ್ಲಿ ಚಿತ್ರಸಹಿತ ಮಾಹಿತಿ ನೀಡಿದ್ದರು. ಈ ಪೋಸ್ಟ್ ಹಲವರ ಗಮನವನ್ನು ಸೆಳೆದಿತ್ತು. ಇದೀಗ ಚೀನಾ ಪೊಲೀಸರು ಲಂಗ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದು, ಈತನೇ ಕೊರಿಯರ್ ತಲುಪಿಸುವ ಸಮಯದಲ್ಲಿ ಐಫೋನ್ ಎಗರಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನಿಡಿದ್ದಾರೆ.

ಇದನ್ನೂ ಓದಿ: ಬಿಜೆಪಿ ಸಂಸದ ಕೌಶಲ್ ಕಿಶೋರ್ ಪುತ್ರನ ಮೇಲೆ ಅಪರಿಚಿತ ದುಷ್ಕರ್ಮಿಗಳಿಂದ ಗುಂಡಿನ ದಾಳಿ

ಈ ಕುರಿತು ಮಾಹಿತಿ ನೀಡಿದ ಲಿಯು, ಆ್ಯಪಲ್ ನ ಅಧಿಕೃತ ವೆಬ್ ಸೈಟ್ ನಲ್ಲೆ ಐಪೋನ್ ಕೊಂಡುಕೊಳ್ಳಲಾಗಿದೆ. ಇದಕ್ಕಾಗಿ ಯಾವುದೇ ಥರ್ಡ್ ಪಾರ್ಟಿ ಸೆಲ್ಲರ್ ಗಳನ್ನು ಅವಲಂಬಿಸಿಲ್ಲ. ಆದರೇ ಕೊರಿಯರ್ ಮೂಲಕ ಪಾರ್ಸೆಲ್ ತಲಪುವಾಗ ಮೊಸರಿನ ಪಾನೀಯ ಬಂದಿತ್ತು ಎಂದು ತಿಳಿಸಿದ್ದಾರೆ.

Advertisement

ಘಟನೆಗೆ ಆ್ಯಪಲ್ ಹಾಗೂ ಎಕ್ಸ್ ಪ್ರೆಸ್ ಮೇಲ್ ಸರ್ವಿಸ್  ಕೂಡ ಪ್ರತಿಕ್ರಿಯೆ ನೀಡಿದ್ದು, ಐಫೋನ್ ನನ್ನು ಕೊರಿಯರ್ ತಲುಪಿಸುವ ವ್ಯಕ್ತಿ ಎಗರಿಸಿರುವುದು ತಿಳಿದುಬಂದಿದೆ. ಆತ ತಾತ್ಕಲಿಕವಾಗಿ ಕಾರ್ಯನಿರ್ವಹಿಸುತ್ತಿದ್ದ. ಘಟನೆಯ ಕುರಿತು ತನಿಖೆ ನಡೆಸಲಾಗುವುದು ಎಂದಿದೆ.

ಐಪೋನ್ 12 ಮ್ಯಾಕ್ಸ್ ಪ್ರೋ ಭಾರತದಲ್ಲಿ 2020ರ ನವೆಂಬರ್ ನಲ್ಲಿ ಬಿಡುಗಡೆಗೊಂಡಿತ್ತು. ಇದರ ಮೂಲ ಬೆಲೆ 1,29,00  ರೂ. ಗಳು.

ಇದನ್ನೂ ಓದಿ: ಇಂದಿರಾಗಾಂಧಿ ತುರ್ತುಪರಿಸ್ಥಿತಿ ಹೇರಿಕೆ ತಪ್ಪುನಿರ್ಧಾರ; ಆದರೆ RSS ಇಂದು.. :ರಾಹುಲ್ ಗಾಂಧಿ

Advertisement

Udayavani is now on Telegram. Click here to join our channel and stay updated with the latest news.

Next