ವಾಡಿ: ನೊಂದ ಮಹಿಳೆಯರ ರಕ್ಷಣೆಗಾಗಿ ಸಂವಿಧಾನದಲ್ಲಿ ವಿಶೇಷ ಕಾನೂನುಗಳಿವೆ. ಆದರೂ ಹೆಣ್ಣಿನ ಶೋಷಣೆ ಮತ್ತು ದೌರ್ಜನ್ಯಗಳಿಗೆ ಕಡಿವಾಣ ಬಿದ್ದಿಲ್ಲ ಎಂದು ಇಂಗಳಗಿ ಗ್ರಾಪಂ ಅಧ್ಯಕ್ಷ, ಕಾಂಗ್ರೆಸ್ ಹಿರಿಯ ಮುಖಂಡ ಸುಭಾಷಚಂದ್ರ ಯಾಮೇರ ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕು ಕಾನೂನು ಸೇವಾ ಸಮಿತಿ, ಇಂಗಳಗಿ ಗ್ರಾಪಂ ಆಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಬುಧವಾರ ಇಂಗಳಗಿ ಗ್ರಾಪಂ ಆವರಣದಲ್ಲಿ ಏರ್ಪಡಿಸಲಾಗಿದ್ದ ದೌರ್ಜನ್ಯ ಮುಕ್ತಿ ವಿಶೇಷ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಮಹಿಳೆಯರು ತಮ್ಮ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಿಂದ ಮುಕ್ತಿ ಹೊಂದಬೇಕಾದರೆ ಶಿಕ್ಷಣ ಎಂಬ ಅಸ್ತ್ರದಿಂದ ಶೋಷಣೆಯ ಸಂಕೋಲೆ ಕತ್ತರಿಸಲು ಸಜ್ಜಾಗಬೇಕು. ಬಡಾವಣೆಗಳಲ್ಲಿ ಮಹಿಳೆಯರ ಸಭೆಗಳನ್ನು ಆಯೋಜಿಸುವ ಮೂಲಕ ಕಾನೂನಿನಲ್ಲಿ ಮಹಿಳೆಯರಿಗಿರುವ ಹಕ್ಕುಗಳನ್ನು ಅರ್ಥ ಮಾಡಿಸಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ಸಾಯಬಣ್ಣ ಗುಡುಬಾ ಮಾತನಾಡಿದರು. ಪಿಡಿಒ ರೇಷ್ಮಾ ಕೊತ್ವಾಲ್, ಇಂಗಳಗಿ ಆರೋಗ್ಯ ಉಪ ಕೇಂದ್ರದ ಕಿರಿಯ ಆರೋಗ್ಯ ಸಹಾಯಕಿ ತ್ರೀವೇಣಿ ಜಾಧವ, ಕಾರ್ಯದರ್ಶಿ ರುದ್ರುಗೌಡ ಸಾಹು ಅಳ್ಳೊಳ್ಳಿ, ರವಿ ಅಳ್ಳೊಳ್ಳಿ, ಗ್ರಾಪಂ ಸದಸ್ಯರಾದ ಮಹ್ಮದ್ ಗೌಸ್ ದುಧನಿ, ಮಲ್ಲಪ್ಪ ನಾಟೀಕಾರ, ಶರಣಬಸು ರಾವೂರ, ಮಾಳಿಗೆಪ್ಪ, ನಬಿ ಪಠಾಣ, ಅಂಗನವಾಡಿ ಕಾರ್ಯಕರ್ತೆಯರಾದ ಪಾರ್ವತಿ ಕಟ್ಟಿಮನಿ, ಮಲ್ಲಮ್ಮ ಹಿಂದಿನಕೇರಿ, ಅಣೆಮ್ಮ ಬಡಿಗೇರ, ಲಕ್ಷ್ಮೀ, ಆಶಾ ಕಾರ್ಯಕರ್ತೆಯರಾದ ಮಂಜುಳಾ, ಮಲ್ಲಮ್ಮ, ರಾಜೇಶ್ವರಿ, ಸಾವಿತ್ರಿ, ಶಕುಂತಲಾ ಪಾಲ್ಗೊಂಡಿದ್ದರು. ಶೇಖಮ್ಮ ಕುರಿ ಸ್ವಾಗತಿಸಿದರು. ಪಾರ್ವತಿ ಕಟ್ಟಿಮನಿ ವಂದಿಸಿದರು.