Advertisement

ವೈದ್ಯೆಯ ಹತ್ಯೆಯ ಬೆನ್ನಲ್ಲೇ ಪ್ರತಿಭಟನೆ; ಕೇರಳ ಸರಕಾರದಿಂದ ತುರ್ತು ಸಭೆ

02:45 PM May 11, 2023 | Team Udayavani |

ತಿರುವನಂತಪುರಂ:ಕೊಲ್ಲಂ ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾದಕ ವ್ಯಸನಿಯೊಬ್ಬ ಯುವ ವೈದ್ಯೆಯೊಬ್ಬರನ್ನು ಹತ್ಯೆಗೈದ ನಂತರ ಅವರ ಸುರಕ್ಷತೆಯ ಕುರಿತು ಕೇರಳದಲ್ಲಿ ವೈದ್ಯರ ಪ್ರತಿಭಟನೆಯ ನಡುವೆ, ಕೇರಳ ಸರಕಾರವು ಗುರುವಾರ ರಾಜ್ಯದ ವೈದ್ಯಕೀಯ ವೃತ್ತಿಗಾರರ ಸುರಕ್ಷತೆಯನ್ನು ಖಾತ್ರಿಪಡಿಸುವ ಮಾರ್ಗಗಳನ್ನು ಚರ್ಚಿಸಲಿದೆ.

Advertisement

23 ವರ್ಷದ ವೈದ್ಯೆ ವಂದನಾ ದಾಸ್ ಹತ್ಯೆಯ ವಿರುದ್ಧ ವೈದ್ಯರು ತಮ್ಮ ಆಂದೋಲನವನ್ನು ತೀವ್ರಗೊಳಿಸುತ್ತಿರುವ ಹಿನ್ನೆಲೆಯಲ್ಲಿ ತುರ್ತು ಸಭೆಯನ್ನು ನಿಗದಿಪಡಿಸಲಾಗಿದೆ.

ಕೊಲ್ಲಂ ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ ಕಾಲಿಗೆ ಗಾಯವಾಗಿದ್ದ ಮಾದಕ ವ್ಯಸನಿಯೊಬ್ಬ ಬುಧವಾರ ಮಹಿಳಾ ವೈದ್ಯೆಯನ್ನು ಚಾಕುವಿನಿಂದ ಇರಿದು ಹತ್ಯೆಗೈದಿದ್ದ.

ಬಹುತೇಕ ವೈದ್ಯರು ಕಳೆದ 24 ಗಂಟೆಗಳಿಂದ ಕೆಲಸಕ್ಕೆ ಹಾಜರಾಗಿಲ್ಲ ಎಂದು ಒತ್ತಾಯಿಸಿ ಸರ್ಕಾರ ತಕ್ಷಣದಿಂದ ಜಾರಿಗೆ ಬರುವಂತೆ ಆಸ್ಪತ್ರೆಗಳ ರಕ್ಷಣೆಗೆ ಹೊಸ ಕಾನೂನು ತರಬೇಕು ಎಂದು ಒತ್ತಾಯಿಸಲಾಗಿದೆ. ಇಲ್ಲಿನ ಮುಖ್ಯಮಂತ್ರಿಗಳ ಕಚೇರಿಯ ಕಾನ್ಫರೆನ್ಸ್ ಹಾಲ್‌ನಲ್ಲಿ ನಡೆಯಲಿರುವ ತುರ್ತು ಸಭೆಯಲ್ಲಿ ಕರ್ತವ್ಯ ನಿರತ ವೈದ್ಯರ ಮೇಲಿನ ಹಲ್ಲೆಗಳನ್ನು ತಡೆಯಲು ಹೊಸ ಕಾನೂನು ರಚನೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಲಾಗುವುದು ಎಂದು ಸಿಎಂಒ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next