Advertisement

ಫ್ಲೈ ಓವರ್ ಮೇಲಿಂದ ಕಾರು ಉರುಳಿ ಬಿದ್ದು ಮಹಿಳೆ ಸಾವು

09:52 AM Nov 24, 2019 | Sriram |

ಹೈದರಾಬಾದ್‌: ನಗರದ ರಾಯದುರ್ಗಮ್‌ ಸರ್ಕಲ್‌ ಬಳಿಯ ಬಯೋಡೈವರ್ಸಿಟಿ ಫ್ಲೈಓವರ್‌ನಲ್ಲಿ ಸಂಚರಿಸುತ್ತಿದ್ದ ಕಾರೊಂದು ಏಕಾಏಕಿ ಫ್ಲೈಓವರ್‌ನಿಂದ ನೆಗೆದಿದ್ದು, ಕೆಳಗೆ ನಿಂತಿದ್ದ ಮಹಿಳೆಯ ಮೇಲೆ ಬಿದ್ದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Advertisement

ಈ ದಾರುಣ ಘಟನೆ ಶನಿವಾರ ನಡೆದಿದ್ದು, ಆರು ಮಂದಿ ಗಾಯಗೊಂಡಿದ್ದಾರೆ. ಫ್ಲೈ ಓವರ್‌ನಲ್ಲಿ ಕಾರು ಸಂಚರಿಸುತ್ತಿದ್ದ ವೇಳೆ ನಿಯಂತ್ರಣ ಕಳೆದುಕೊಂಡು ಕೆಳಕ್ಕೆ ನೆಗೆದಿದೆ. ಈ ವೇಳೆ ಸತ್ಯವಾಣಿ(40) ಕೆಳಗಡೆ ರಸ್ತೆಯೊಂದರಲ್ಲಿ ನಿಂತಿದ್ದರು.

ಗಾಯಗೊಂಡವರು ಕಾರಿನೊಳಗೆ ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕೂಡಲೇ ಅವರನ್ನು ಪಕ್ಕದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮೃತ ಮಹಿಳೆಯ ಕುಟುಂಬಕ್ಕೆ 5 ಲಕ್ಷ ಪರಿಹಾರವನ್ನು ಹೈದರಾಬಾದ್‌ ಮೇಯರ್‌ ಅವರು ಘೋಷಿಸಿದ್ದಾರೆ. ಪ್ರಕರಣ ಹಿನ್ನೆಲೆಯಲ್ಲಿ ಫ್ಲೈಓವರ್‌ ಅನ್ನು ಮೂರು ದಿನಗಳ ಕಾಲ ಬಂದ್‌ ಮಾಡಲಾಗಿದೆ. ಪೊಲೀಸರು ಕೇಸು ದಾಖಲಿಸಿದ್ದು ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next