Advertisement

ಕೌಟುಂಬಿಕ ವಿವಾದದಲ್ಲಿ ಪತಿಯಿಂದಲೇ ಪತ್ನಿಯ ಕೊಲೆ

09:36 AM May 18, 2019 | Team Udayavani |

ಮುಜಫ‌ರನಗರ : ಕೌಟುಂಬಿಕ ವಿವಾದದಲ್ಲಿ ಮಹಿಳೆಯನ್ನು ಆಕೆಯ ಪತಿಯೇ ಕೊಂದ ಘಟನೆ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಗಢೀ ಪುಕ್ತಾ ಎಂಬಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಸೋನಮ್‌ ಳನ್ನು ಆಕೆಯ ಪತಿ ಅಬ್ದುಲ್‌ ಕಲಾಂ (40) ತನ್ನ ಮನೆಯ ಇತರರೊಡಗೂಡಿ ಕುತ್ತಿಗೆ ಬಿಗಿದು ಕೊಂದನೆಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ತಲೆಮರೆಸಿಕೊಂಡಿರುವ ಕೊಲೆ ಆರೋಪಿಗಾಗಿ ಪೊಲೀಸರೀಗ ಶೋಧ ಕಾರ್ಯ ನಡೆಸಿದ್ದಾರೆ ಎಂದು ಎಸ್‌ಎಚ್‌ಓ ವಿಜಯ್‌ ಕುಮಾರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next