Advertisement

SIT ಅಧಿಕಾರಿಗಳಿಗೆ ಮನೆಯಲ್ಲಿ ತನಿಖೆಗೆ ಲಭ್ಯವಾಗದ ಭವಾನಿ ರೇವಣ್ಣ

06:51 PM Jun 01, 2024 | Team Udayavani |

ಹಾಸನ: ಮಹಿಳೆಯ ಅಪಹರಣ ಪ್ರಕರಣದ ತನಿಖೆಯಲ್ಲಿಎಸ್‌ಐಟಿ ಹಿನ್ನಡೆ ಅನುಭವಿಸಿದ್ದು ಸಂಸದ ಪ್ರಜ್ವಲ್ ರೇವಣ್ಣ ಅವರ ತಾಯಿ ಭವಾನಿ ರೇವಣ್ಣ ಅವರಿಗೆ ನಿವಾಸದಲ್ಲೇ ತನಿಖೆ ಎದುರಿಸುವಂತೆ ನೋಟಿಸ್ ಜಾರಿ ಮಾಡಿದ್ದರೂ, ಹೊಳೆನರಸೀಪುರದ ಮನೆಗೆ ಎಸ್‌ಐಟಿ ಆಗಮಿಸಿದಾಗ ಅವರು ಲಭ್ಯವಾಗಲಿಲ್ಲ.

Advertisement

ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಮನೆಯಲ್ಲಿಯೇ ಇರುವಂತೆ ನೋಟಿಸ್‌ನಲ್ಲಿ ಕೋರಲಾಗಿತ್ತು. ಆದರೆ, ಎಸ್‌ಐಟಿ ಅಧಿಕಾರಿಗಳು ‘ಚೆನ್ನಾಂಬಿಕಾ ನಿಲಯ’ಕ್ಕೆ ಬಂದಾಗ ಅವರು ಇರಲಿಲ್ಲ.

ಭವಾನಿ ಪತ್ತೆಗಾಗಿ ಶೋಧ ತಂಡಗಳನ್ನು ರಚಿಸಲು ಮುಂದಾಗಿದ್ದಾರೆ ಎಂದು ಎಸ್‌ಐಟಿ ಮೂಲಗಳು ಸೂಚಿಸಿವೆ. ಸಂಬಂಧಿತ ಬೆಳವಣಿಗೆಯಲ್ಲಿ, ಜರ್ಮನಿಯಿಂದ ಹಿಂತಿರುಗಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಗಾದ ಪ್ರಜ್ವಲ್ ರೇವಣ್ಣ ಅವರು ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ.

ಮೈಸೂರಿನ ಕೆಆರ್ ನಗರದಲ್ಲಿ ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಭವಾನಿ ಬುಧವಾರ ನಿರೀಕ್ಷಣಾ ಜಾಮೀನು ಕೋರಿದ್ದರು. ಜಾಮೀನು ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶುಕ್ರವಾರ ತಿರಸ್ಕರಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next