ಹೊಸದಿಲ್ಲಿ : ದಿಲ್ಲಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಉದ್ಯೋಗದಲ್ಲಿರುವ 27ರ ಹರೆಯದ ವೈದ್ಯೆ ಸೋಮವಾರ ಬೆಳಗ್ಗೆ 7.30ರ ಹೊತ್ತಿಗೆ ಗುರು ದ್ರೋಣಾಚಾರ್ಯ ಮೆಟ್ರೋ ರೈಲ್ವೆ ಸ್ಟೇಶನ್‌ನಲ್ಲಿ ರೈಲಿನ ಮುಂದಿ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ವರದಿಯಾಗಿದೆ.
ಸಮಯಪುರಬದ್‌ಲೀ ಎಂಬಲ್ಲಿಗೆ ಹೋಗುತ್ತಿದ್ದ ಮೆಟ್ರೋ ರೈಲಿನ ಮುಂದೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ಎಫ್ ನಿಶಾತ್ ಎಂದು ಗುರುತಿಸಲಾಗಿದೆ. ಬಲಗೈ ಮೂಳೆ ಮುರಿತಕ್ಕೆ ಗುರಿಯಾಗಿರುವ ಆಕೆಯನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಅಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆಕೆಗೆ ಪ್ರಾಣಾಪಾಯ ಇಲ್ಲವೆಂದು ವೈದ್ಯರು ತಿಳಿಸಿದ್ದಾರೆ.
ಮಹಿಳೆಯು ಆತ್ಮಹತ್ಯೆಗೆ ಯತ್ನಿಸಲು ಕಾರಣವೇನೆಂಬುದನ್ನು ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಮಹಿಳೆಯ ಆತ್ಮಹತ್ಯೆ ಯತ್ನದಿಂದಾಗಿ ಸುಮಾರು ಹತ್ತು ನಿಮಿಷಗಳ ಕಾಲ ಮೆಟ್ರೋ ರೈಲು ಸಂಚಾರ ಬಾಧಿತವಾಯಿತು.