Advertisement

ಅತ್ತೆ, ಮಾವನನ್ನು ಹತ್ಯೆಗೈದಿದ್ದ ಮಹಿಳಾ ಕೈದಿ ತಿಹಾರ್ ಜೈಲಿನಲ್ಲಿ ನೇಣಿಗೆ ಶರಣು

09:47 AM Apr 29, 2020 | Team Udayavani |

ನವದೆಹಲಿ: ಕೊಲೆ ಆರೋಪದಲ್ಲಿ ಜೈಲುಶಿಕ್ಷೆ ಅನುಭವಿಸುತ್ತಿದ್ದ 35 ವರ್ಷದ ಮಹಿಳಾ ಕೈದಿ ತಿಹಾರ್ ಜೈಲಿನಲ್ಲಿ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಮೃತಳನ್ನು ಪ್ರವೀಣಾ ಅಲಿಯಾಸ್ ಕವಿತಾ ಎಂದು ಗುರುತಿಸಲಾಗಿದೆ. ಈಕೆ ತಿಹಾರ್ ಸೆಂಟ್ರಲ್ ಜೈಲಿನ ನಂಬರ್ 6ರ ಸೆಲ್ ನಲ್ಲಿ ಕೈದಿಯಾಗಿದ್ದಿರುವುದಾಗಿ ವರದಿ ತಿಳಿಸಿದೆ.

Advertisement

ತನ್ನ ಗಂಡನ ಜತೆಗೂಡಿ ಈಕೆ ಅತ್ತೆ, ಮಾವನನ್ನು ಕೊಂದ ಆರೋಪದಲ್ಲಿ ಏಪ್ರಿಲ್ 25ರಂದು ಬಂಧಿಸಲಾಗಿತ್ತು.. ಏಪ್ರಿಲ್ 26ರ ರಾತ್ರಿ ಜೈಲ್ ನಂಬರ್ 6ರ ಎಕ್ಸ್ ಹೌಸ್ಟ್ ಫ್ಯಾನ್ ಗೆ ತನ್ನ ದುಪ್ಪಟ್ಟ ಬಿಗಿದು ನೇಣಿಗೆ ಶರಣಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ಕೈದಿ ಅತ್ತೆ ಮತ್ತು ಮಾವನನ್ನು ಕೊಂದ ಆರೋಪ ಎದುರಿಸುತ್ತಿದ್ದಳು ಎಂದು ಡೆಪ್ಯುಟಿ ಪೊಲೀಸ್ ಕಮಿಷನರ್ ದೀಪಕ್ ಪುರೋಹಿತ್ ಪಿಟಿಐಗೆ ವಿವರಿಸಿದ್ದಾರೆ. ಮಹಿಳೆ ಕವಿತಾ ಹಾಗೂ ಆಕೆಯ ಗಂಡ ಸತೀಶ್ ವಿರುದ್ಧ ಚಾವ್ಲಾ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ ಕಾಯ್ದೆ 302, 309, 120(ಬಿ), 201 ಮತ್ತು 34ರ ಅಡಿ ದೂರು ದಾಖಲಿಸಲಾಗಿತ್ತು ಎಂದು ತಿಳಿಸಿದ್ದಾರೆ.

ಘಟನೆಯಲ್ಲಿ ಪತಿ ಸತೀಶ್ ನನ್ನು ಬಂಧಿಸಲಾಗಿತ್ತು. ಈತ ನಿರುದ್ಯೋಗಿಯಾಗಿದ್ದು, ಆರ್ಥಿಕವಾಗಿ ಪೋಷಕರ ಮೇಲೆ ಅವಲಂಬಿತನಾಗಿದ್ದ. ಪೊಲೀಸರ ಪ್ರಕಾರ, ಆಸ್ತಿ ವಿಚಾರದಲ್ಲಿ ಈ ಜೋಡಿ ಪೋಷಕರನ್ನು ಕೊಂದಿರುವುದಾಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next