Advertisement

ಶೀಘ್ರ ಯುದ್ಧಾಂಗಣದಲ್ಲೂ ಮಹಿಳೆ: ಜ. ರಾವತ್‌

03:45 AM Jun 05, 2017 | Team Udayavani |

ನವದೆಹಲಿ: ಸೇನಾ ಪಡೆಯಲ್ಲಿ ಪುರುಷರಿಗೆ ಮಾತ್ರ ಅವಕಾಶ ಎನ್ನುವ ಅಲಿಖೀತ ನಿಯಮಕ್ಕೆ ಭಾರತೀಯ ಸೇನೆ ಈಗಾಗಲೇ ಬ್ರೇಕ್‌ ಹಾಕಿದೆ. ಈ ಮೂಲಕ ಭಾರತ ಸೇನೆಯಲ್ಲಿ ಮಹಿಳೆಯರಿಗೆ ಅವಕಾಶ ನೀಡಿದ ಕೆಲವೇ ಕೆಲವು ರಾಷ್ಟ್ರಗಳ ಪೈಕಿ ಒಂದು ಎನಿಸಿಕೊಂಡಿದೆ. ಮುಂಬರುವ ದಿನಗಳಲ್ಲಿ ಯುದ್ಧ ಪಡೆಗಳ ವ್ಯಾಪ್ತಿಯ ಪ್ರಮುಖ ಜವಾ ಬ್ದಾರಿಗಳನ್ನೂ ಮಹಿಳೆಯರು ನಿಭಾಯಿ ಸುವಂಥ ಅವಕಾಶ ತೆರೆದುಕೊಳ್ಳಲಿದೆ ಎಂದು ಸೇನಾ ಪಡೆ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಹೇಳಿದ್ದಾರೆ.

Advertisement

ಭಾರತೀಯ ಸೇನಾ ಪಡೆಯ ಅನೇಕ ವಿಭಾಗಗಳಲ್ಲಿ ಮಹಿಳೆಯರ ನೇಮಕಾತಿ ಆಗಿದೆ. ಮಹಿಳೆಯರೂ ಕೆಲವೊಂದು ವಿಭಾಗಗಳ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. ಮಿಲಿಟರಿ ಪೊಲೀಸ್‌ ಆಗಿಯೂ ಮಹಿಳೆಯರ ನೇಮಕ ಮಾಡಿಕೊಳ್ಳಲಾಗಿದೆ ಎಂದು ಹೇಳಿರುವ ಜ. ಬಿಪಿನ್‌ ರಾವತ್‌, “ಮಹಿಳೆ ಜವಾನೆ ಯಾಗಿಯೂ ಕಾಣಿಸಿಕೊಳ್ಳಬೇಕೆನ್ನುವುದು ನಮ,¾ ಆಶಯ. ಶೀಘ್ರದಲ್ಲಿಯೇ ಇದನ್ನೂ ಸಾಧ್ಯ ವಾಗಿಸುತ್ತೇವೆ. ಮಹಿಳೆಯರಲ್ಲಿ ಈ ಸಾಮರ್ಥ್ಯ ಇದೆ. ಆರಂಭಿಕವಾಗಿ “ಪೊಲೀಸ್‌ ಜವಾನ್‌’ ಹುದ್ದೆಗೆ ನೇಮಕ ಮಾಡಿಕೊಳ್ಳುವ ಮೂಲಕ ಈ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದಿದ್ದಾರೆ.

ಭಾರತೀಯ ಸೇನಾ ಪಡೆಯ ವೈದ್ಯಕೀಯ, ಕಾನೂನು, ಶಿಕ್ಷಣ, ತರಂಗ ಹಾಗೂ ಎಂಜಿನಿ ಯರಿಂಗ್‌ ವಿಭಾಗಗಳಲ್ಲಿ ಈಗಾಗಲೇ ಮಹಿಳೆ ಯರು ಕಾರ್ಯನಿರ್ವಹಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next