Advertisement

ಅರೆಪ್ರಜ್ಞಾವಸ್ಥೆಯಲ್ಲಿದ್ದ ಮಹಿಳೆ ಆಸ್ಪತ್ರೆಗೆ

03:57 PM Feb 04, 2021 | Team Udayavani |

ಶ್ರೀನಿವಾಸಪುರ: ತಲೆಗೆ ಪೆಟ್ಟು ಬಿದ್ದು ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಅಪರಿಚಿತ ಮಹಿಳೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ ನಂತರ ಹೆಚ್ಚಿನ ಚಿಕಿತ್ಸೆಗೆ ಕೋಲಾರ ಆಸ್ಪತ್ರೆಗೆ ರವಾನಿಸಲಾಗಿದೆ ತಿಳಿದು ಬಂದಿದೆ.

Advertisement

ಈ ಅಪರಿಚಿತ ಮಹಿಳೆಗೆ ಸುಮಾರು 32 ವರ್ಷ ವಯಸ್ಸಾಗಿದೆ. ಬುಧವಾರ ತಾಲೂಕಿನ ಲಕ್ಷ್ಮೀಸಾಗರ ಗ್ರಾಪಂ ವ್ಯಾಪ್ತಿಯ ಬೀರಗಾನಹಳ್ಳಿ ಗೇಟ್‌ ಸಮೀಪದ ಹಳ್ಳವೊಂದರಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದರು.

ಈಕೆಯನ್ನು ಕಂಡವರು ಆ್ಯಂಬುಲೆನ್ಸ್‌  ಮೂಲಕ ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈಕೆ ಆಂಧ್ರಪ್ರದೇಶದವರು ಇರಬಹುದು ಎಂದು ಕೆಲವರು ಶಂಕಿಸಿದ್ದಾರೆ.

ಸ್ಥಳಕ್ಕೆ ಕೋಲಾರ ಜಿಲ್ಲಾ ಎಸ್ಪಿ ಕಾರ್ತೀಕ್‌ರೆಡ್ಡಿ, ಅಡಿಷನಲ್‌ ಎಸ್ಪಿ ಜಾಹ್ನವಿ, ಸಿಪಿಐ ರಾಘವೇಂದ್ರ, ಪ್ರಕಾಶ್‌, ಪಿಎಸ್‌ಐ ವಿಠಲ್‌ ತಳವಾರ ಭೇಟಿ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next