ಪಟ್ಟಣಂತಿಟ್ಟ: ಮಕ್ಕಳನ್ನು ಬಳಸಿ ಮಾಟ ಮಂತ್ರ ಆಚರಣೆಯಲ್ಲಿ ತೊಡಗಿದ್ದ ಮಹಿಳೆಯೊಬ್ಬರನ್ನು ಪೊಲೀಸರು ಬಂಧಿಸಿದ ಘಟನೆ ಕೇರಳ ರಾಜ್ಯದ ಪಟ್ಟಣಂತಿಟ್ಟ ಜಿಲ್ಲೆಯಲ್ಲಿ ನಡೆದಿದೆ. ಇದೇ ಜಿಲ್ಲೆಯಲ್ಲಿ ನಡೆದ ಅಮಾನುಷ ನರಬಲಿ ಘಟನೆಯ ಕೆಲ ದಿನಗಳ ಬಳಿಕ ಈ ಪ್ರಸಂಗ ನಡೆದಿದೆ.
ಬಂಧಿತ ಮಹಿಳೆಯನ್ನು ಶೋಭನಾ ಅಲಿಯಾಸ್ ವಸಂತಿ ಎಂದು ಗುರುತಿಸಲಾಗಿದೆ. ಈ ಮಹಿಳೆಯು ನಿಗೂಢ ಆಚರಣೆಗಳನ್ನು ಮಾಡುತ್ತಿದ್ದು, ಅದರಲ್ಲಿ ಒತ್ತಾಯಪೂರ್ವಕವಾಗಿ ಮಕ್ಕಳನ್ನು ಭಾಗವಹಿಸುವಂತೆ ಮಾಡುತ್ತಿದ್ದಳು. ಇದರ ವೀಡಿಯೊ ಅಂತರ್ಜಾಲದಲ್ಲಿ ವೈರಲ್ ಆಗಿದೆ.
ಇದರ ಬಳಿಕ ಸ್ಥಳೀಯರು ಶೋಭನಾ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಪೊಲೀಸರು ಶೋಭನಾ ಮತ್ತು ಆಕೆಯ ಸ್ನೇಹಿತ ಉನ್ನಿಕೃಷ್ಣನ್ ರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ:ರೋಹಿತ್ ಅಭಿಮಾನಿಯನ್ನು ಹತ್ಯೆಗೈದ ವಿರಾಟ್ ಕೊಹ್ಲಿ ಫ್ಯಾನ್: ಏನಿದು ‘ಫ್ಯಾನ್ಸ್ ವಾರ್’?
ಇದೇ ವೇಳೆ ಪಟ್ಟಣಂತಿಟ್ಟದಲ್ಲಿ ನಡೆದ ನರಬಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಈ ಪ್ರಕರಣದಲ್ಲಿ ಮೂವರು ಆರೋಪಿ ದಂಪತಿಗಳಾದ ಭಗವಲ್ ಸಿಂಗ್ ಮತ್ತು ಲೈಲಾ ಹಾಗೂ ಮುಹಮ್ಮದ್ ಶಫಿ ಅವರನ್ನು ಮಂಗಳವಾರ ಬಂಧಿಸಲಾಗಿದೆ.