ಕುಂದಾಪುರ: ಅಮಾಸೆಬೈಲು ಶೇಡಿಮನೆ ಗ್ರಾಮದ ಯುವತಿಗೆ ನಿರಂತರ ಕಿರುಕುಳ ನೀಡಿ ಆಕೆ ಆತ್ಮಹತ್ಯೆಗೆ ಯತ್ನಿಸುವಂತೆ ಮಾಡಿರುವ ಹಿನ್ನೆಲೆಯಲ್ಲಿ ಮೂವರು ಆರೋಪಿಗಳ ವಿರುದ್ಧ ದಾಖಲಾಗಿರುವ ಪೋಕೊÕà ಪ್ರಕರಣದಲ್ಲಿ ಓರ್ವ ಆರೋಪಿ ವಿನಯ ಶೆಟ್ಟಿಯನ್ನು ಪೊಲೀಸರು ಬಂಧಿಸಿದ್ದು, ಆತನನ್ನು ಕುಂದಾಪುರ ನ್ಯಾಯಾಲಯಕ್ಕೆ ಬುಧವಾರ ಹಾಜರುಪಡಿಸಿದ್ದಾರೆ.
ಆತನಿಗೆ 15 ದಿನಗಳ ನ್ಯಾಯಾಂಗ ಬಂಧನವನ್ನು ನ್ಯಾಯಾಧೀಶರು ವಿಧಿಸಿದ್ದಾರೆ.ವಿನಯ ಶೆಟ್ಟಿಯು ಬೆಂಗಳೂರಿನಲ್ಲಿರುವ ಮಾಹಿತಿ ಪಡೆದ ಪೊಲೀಸರು ಅಲ್ಲಿಂದ ಬಂಧಿಸಿ ಕರೆತಂದಿದ್ದಾರೆ. ಆತ ಅಲ್ಲಿ ಸಹೋದರನ ಜತೆ ಬೇಕರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎಂದು ಹೇಳಲಾಗಿದೆ.
ಉಳಿದ ಇಬ್ಬರು ಆರೋಪಿಗಳ ಬಂಧನಕ್ಕಾಗಿ ನಮ್ಮ ವಿಶೇಷ ತಂಡ ನಿರಂತರ ಕಾರ್ಯಾಚರಣೆ ನಡೆಸುತ್ತಿದೆ. ಅವರ ಬಂಧನವೂ ಶೀಘ್ರದಲ್ಲೇ ಆಗಲಿದೆ ಎಂದು ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧಿಧೀಕ್ಷಕ ಎನ್. ವಿಷ್ಣುವರ್ಧನ್ ಅವರು ತಿಳಿಸಿದ್ದಾರೆ.
ಯುವತಿ ಚೇತರಿಕೆ
ಸಂತ್ರಸ್ತ ಯುವತಿಯು ಮಣಿಪಾಲ ಆಸ್ಪತ್ರೆಯ ಲ್ಲಿದ್ದು, ತುಸು ಚೇತರಿಕೆ ಕಂಡಿದ್ದಾರೆ. ಬುಧವಾರ ಉಡುಪಿ ಜಿಲ್ಲಾ ಬಿಲ್ಲವರ ಯುವ ವೇದಿಕೆಯ ನಿಯೋಗವು ಸಂತ್ರಸ್ತ ಯುವತಿಯನ್ನು ಭೇಟಿ ಮಾಡಿ ತುರ್ತು ನೆರವನ್ನು ನೀಡಿ ಯುವತಿ ಹಾಗೂ ಆಕೆಯ ಕುಟುಂಬಕ್ಕೆ ಸಾಂತ್ವನ ಹೇಳಿದೆ.
ತಪ್ಪಿತಸ್ಥ ಇನ್ನುಳಿದ ಇಬ್ಬರು ಆರೋಪಿಗಳಾದ ಶೇಡಿಮನೆ ಪ್ರಸಾದ್ ಹೆಗ್ಡೆ ಮತ್ತು ಪ್ರಶಾಂತ್ ಹೆಗ್ಡೆ ಅವರನ್ನು ಕೂಡ ಪೊಲೀಸರು ಕೂಡಲೇ ಬಂಧಿಸಿ ಕಾನೂನು ರೀತಿ ಕ್ರಮ ಕೈಗೊಂಡು ಯುವತಿಗೆ ನ್ಯಾಯ ಒದಗಿಸಿಕೊಡಬೇಕು. ಇಲ್ಲವಾದರೆ ಬೀದಿಗಿಳಿದು ಪ್ರತಿಭಟನೆ ನಡೆಸಲಾಗುವುದು ಎಂದು ಬಿಲ್ಲವರ ಯುವ ವೇದಿಕೆ ಅಧ್ಯಕ್ಷ ಪ್ರವೀಣ್ ಎಂ. ಪೂಜಾರಿ ಅವರು ತಿಳಿಸಿದ್ದಾರೆ.