Advertisement

ವಿಮಾನದಲ್ಲಿ ಮಗುವಿಗೆ ಜನ್ಮ ನೀಡಿದ ತಾಯಿ

01:24 PM Mar 17, 2021 | Team Udayavani |

ಜೈಪುರ :  ಕೆಲವೊಂದು ಮಕ್ಕಳು ವಿಶೇಷ ಸಮಯದಲ್ಲಿ ಜನಿಸುತ್ತವೆ. ಇಂತಹದ್ದೇ ಒಂದು ಸಂದರ್ಭಕ್ಕೆ ಸಾಕ್ಷಿಯಾಯಿತು ಇಂಡಿಗೋ ವಿಮಾನ.

Advertisement

ಬೆಂಗಳೂರಿನಿಂದ ಜೈಪುರಕ್ಕೆ ಹೋಗುತ್ತಿದ್ದ ಇಂಡಿಗೋ ವಿಮಾನದಲ್ಲಿ ಗರ್ಭಣಿಯೊಬ್ಬರು ಪ್ರಯಾಣಿಸಿದ್ದಾರೆ. ಮಾರ್ಗಮಧ್ಯೆ ಆ ಮಹಿಳೆಗೆ ಹೆರಿಗೆ ನೋವು ಕಾಣಿಸಿದ್ದು, ತಕ್ಷಣ ವಿಮಾನ ಸಿಬ್ಬಂದಿಗೆ ಮಾಹಿತಿ ತಿಳಿಸಿದ್ದಾರೆ. ಅದೃಷ್ಟವೆಂಬಂತೆ ಅದೇ ವಿಮಾನದಲ್ಲಿ ವೈದ್ಯರೊಬ್ಬರು ಇದ್ದು ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದಾರೆ. ಮಹಿಳೆಯು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಇಂಡಿಗೋ ಏರ್ ಲೈನ್ಸ್ ಖಚಿತ ಪಡಿಸಿದೆ.

ಮಂಗಳವಾರ ಬೆಳಗ್ಗೆ ಬೆಂಗಳೂರಿನಿಂದ ಜೈಪುರಕ್ಕೆ ಹೋಗುತ್ತಿದ್ದ 8ಇ 469 ವಿಮಾನದಲ್ಲಿ ಘಟನೆ ನಡೆದಿದೆ. ಹೆರಿಗೆ ನೋವು ಕಾಣಿಸಿಕೊಳ್ಳುತ್ತಿದ್ದಂತೆ ವೈದ್ಯೆ ಡಾ.ಸುಬಹನ ಮತ್ತು ವಿಮಾನ ಸಿಬ್ಬಂದಿ ಧಾವಿಸಿ ಬಂದು ಸಹಾಯ ಮಾಡಿದ್ದಾರೆ.

ಘಟನೆ ನಡೆಯುತ್ತಿದ್ದಂತೆ ಜೈಪುರ ವಿಮಾನ ನಿಲ್ದಾಣಕ್ಕೆ ಮಾಹಿತಿ ತಿಳಿಸಿದ್ದು, ವಿಮಾನ ಲ್ಯಾಂಡ್ ಆಗುವಷ್ಟರಲ್ಲಿ ವೈದ್ಯರು ಮತ್ತು ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದ್ದು, ಸದ್ಯ ಮಹಿಳೆ ಮತ್ತು ಮಗು ಆರೋಗ್ಯವಾಗಿದ್ದಾರೆ.

ತುರ್ತು ಸ್ಥಿತಿಯಲ್ಲಿ ಸಹಾಯ ಮಾಡಿವ ವೈದ್ಯೆ ಸುಬಹನಗೆ ಇಂಡಿಗೋ ಸಂಸ್ಥೆಯು ಗೌರವಿಸಿದ್ದು, ಉಡುಗೊರೆ ನೀಡಿದೆ.

Advertisement

ಈ ಹಿಂದೆ ಅಕ್ಟೋಬರ್ 2020ರಲ್ಲಿ ದೆಹಲಿ-ಬೆಂಗಳೂರು ಇಂಡಿಗೋ ವಿಮಾನದಲ್ಲಿ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next