ಹರ್ಯಾಣ: ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು, ಸಿಬ್ಬಂದಿಗಳು ರೋಗಿಗಳನ್ನು ನಿರ್ಲಕ್ಷಿಸುವ ಪ್ರಕರಣಗಳು ಇನ್ನೂ ಜೀವಂತವಾಗಿದೆ ಇದಕ್ಕೆ ಪ್ರಮುಖ ಉದಾಹರಣೆಯೇ ಹರಿಯಾಣ ಗೃಹ ಮತ್ತು ಆರೋಗ್ಯ ಸಚಿವ ಅನಿಲ್ ವಿಜ್ ಅವರ ತವರು ಜಿಲ್ಲೆಯಲ್ಲಿರುವ ಸರಕಾರಿ ಆಸ್ಪತ್ರೆ.
ಹರ್ಯಾಣದ ಅಂಬಾಲಾದ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರು ಹಾಗು ಆಸ್ಪತ್ರೆಯ ಸಿಬ್ಬಂದಿಗಳು ತೋರಿದ ನಿರ್ಲಕ್ಷಕ್ಕೆ ಗರ್ಭಿಣಿಯೊಬ್ಬರು ಕೊರೆವ ಚಳಿಯಲ್ಲಿ ಆಸ್ಪತ್ರೆಯ ಆವರಣದಲ್ಲಿರುವ ತರಕಾರಿ ಗಾಡಿಯಲ್ಲೇ ಮಗುವಿಗೆ ಜನ್ಮ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಹೆರಿಗೆ ನೋವಿನಿಂದ ಬಳಲುತ್ತಿದ್ದ ಪತ್ನಿಯನ್ನು ಆಸ್ಪತ್ರೆವರೆಗೂ ಕರೆ ತಂದು ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿಗಳ ಬಳಿ ದಾಖಲು ಮಾಡುವಂತೆ ಬೇಡಿಕೊಂಡರು ಯಾರು ಕೂಡ ವ್ಯಕ್ತಿಯ ಮಾತಿಗೆ ಬೆಲೆ ಕೊಡಲೇ ಇಲ್ಲ ಕೊನೆಗೆ ಗರ್ಭಿಣಿ ವಿಧಿಯಿಲ್ಲದೆ ಅಲ್ಲೇ ಆಸ್ಪತ್ರೆಯ ಆವರಣದಲ್ಲಿ ನಿಲ್ಲಿಸಿದ್ದ ತರಕಾರಿ ಗಾಡಿಯಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ ಸದ್ಯ ಮಗು ಹಾಗೂ ತಾಯಿ ಆರೋಗ್ಯವಾಗಿದ್ದು ಆಸ್ಪತ್ರೆಯ ಆಡಳಿತ ವಿರುದ್ಧ ಮಹಿಳೆಯ ಪತಿ ಕಿಡಿಕಾರಿದ್ದಾರೆ.
ಸ್ಟ್ರೆಚರ್ ತರಲು ಯಾರೂ ಬರಲಿಲ್ಲ:
ಪಂಜಾಬ್‌ನ ಡಪ್ಪರ್ ನಗರದಿಂದ ಅಂಬಾಲಾದಲ್ಲಿರುವ ಆಸ್ಪತ್ರೆವರೆಗೆ ಪತ್ನಿಯನ್ನು ಕರೆದು ಬಂದಿದ್ದೆ ಆದರೆ ಆಸ್ಪತ್ರೆಯಲ್ಲಿ ಯಾರು ನಮ್ಮ ಸಹಾಯಕ್ಕೆ ಬರಲಿಲ್ಲ ಅಲ್ಲದೆ ಒಬ್ಬ ಸಿಬ್ಬಂದಿಯೂ ಸ್ಟ್ರೆಚರ್ ತರಲು ಮುಂದಾಗಲಿಲ್ಲ, ಬಳಿಕ ಸಹಾಯಕ್ಕಾಗಿ ಆಸ್ಪತ್ರೆಯ ವೈದ್ಯರ ಬಳಿ ಬೇಡಿಕೊಂಡರು ಅವರು ಇತ್ತ ಗಮನವೇ ಹರಿಸಲಿಲ್ಲ, ನನ್ನ ಪತ್ನಿ ಮತ್ತು ಮಗುವನ್ನು ದೇವರೇ ಕಾಪಾಡಿದ್ದಾರೆ. ಈ ಮೊದಲು ವೈದ್ಯರನ್ನು ದೇವರೆಂದು ನಂಬಿದ್ದೆ ಆದರೆ ಈ ಘಟನೆಯ ಬಳಿಕ ವೈದ್ಯರ ಮೇಲಿನ ನಂಬಿಕೆಯೇ ಇಲ್ಲದಾಗಿದೆ ಎಂದು ಹೇಳಿದ್ದಾರೆ.
ಇತ್ತ ಈ ಸುದ್ದಿ ಹರಡುತ್ತಿದ್ದಂತೆಯೇ ಇಡೀ ಆಸ್ಪತ್ರೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಪರಿಸ್ಥಿತಿಯನ್ನು ಗ್ರಹಿಸಿದ ಆಸ್ಪತ್ರೆ ಆಡಳಿತ ಮಂಡಳಿ ಕೂಡಲೇ ಮಹಿಳೆ ಮತ್ತು ಮಗುವನ್ನು ಆಸ್ಪತ್ರೆಗೆ ದಾಖಲಿಸಿಕೊಂಡು ಚಿಕಿತ್ಸೆಗೆ ಮುಂದಾಗಿದೆ, ಜೊತೆಗೆ ಘಟನೆಯ ವಿವರ ಪಡೆದುಕೊಂಡ ಹರಿಯಾಣದ ಆರೋಗ್ಯ ಸಚಿವ ಅನಿಲ್ ವಿಜ್, “ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಗಿದ್ದು ಕೂಲಂಕುಷವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: Tragedy: ರಾತ್ರಿ ಮಲಗಿದ್ದ 7ಮಂದಿಯಲ್ಲಿ ಬೆಳಗಾಗುತ್ತಲೇ ಐವರು ಶವವಾಗಿ ಪತ್ತೆ, ಇಬ್ಬರು ಗಂಭೀರ