ಮುಜಫರನಗರ : ಮೂವರು ಕಾಮಾಂಧರು 22ರ ಹರೆಯದ ತರುಣಿಯನ್ನು ಆಕೆಯ ಮನೆಯಿಂದ ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ನಿನ್ನೆ ಬುಧವಾರ ಈ ಘಟನೆ ನಡೆದಿದೆ. ತರುಣಿಯು ತನ್ನ ಮನೆಯಲ್ಲಿ ಒಬ್ಬಳೇ ಇದ್ದು ಆಕೆಯ ಹೆತ್ತವರು ಹೊರಗೆ ಹೋಗಿದ್ದರು.
ಮನೆ ಸಮೀಪದ ಹೊಲವೊಂದರಲ್ಲಿ ಅತ್ಯಾಚಾರಕ್ಕೆ ಗುರಿಯಾಗಿ ಬಿದ್ದಿದ್ದ ತರುಣಿಯನ್ನು ಸ್ಥಳೀಯರು ಮನೆಗೆ ತಲುಪಿಸಿದರು. ತನ್ನ ಮೇಲಾದ ಅತ್ಯಾಚಾರವನ್ನು ಆಕೆಯ ಹೆತ್ತವರಿಗೆ ತಿಳಿಸಿದಳು. ಒಡನೆಯೇ ಅವರು ಪೊಲೀಸರಿಗೆ ದೂರು ನೀಡಿದರು ಎಂದು ಎಸ್‌ಎಚ್‌ಓ ಸಂತೋಷ್ ಕುಮಾರ್ ತಿಳಿಸಿದ್ದಾರೆ.
ಅತ್ಯಾಚಾರದ ಕೃತ್ಯವನ್ನು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದ ದುರುಳರು, ವಿಷಯವನ್ನು ಪೊಲೀಸರಿಗೆ ತಿಳಿಸಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಬೆದರಿಕೆ ಹಾಕಿದ್ದರು.
Related Articles
ಪೊಲೀಸರು ಕೇಸು ದಾಖಲಿಸಿಕೊಂಡು, ಪರಾರಿಯಾಗಿರುವ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಮನೆಯಲ್ಲಿ ಒಂಟಿ ತರುಣಿ, ಅಪಹರಣ, ಗ್ಯಾಂಗ್ ರೇಪ್, UP, Woman gang raped