Advertisement

ಸ್ನೇಹಿತನ ಮನೆಯಲ್ಲಿ ವಿವಾಹಿತೆಯ ಮೃತ ದೇಹ ಪತ್ತೆ, ಸ್ನೇಹಿತ ನಾಪತ್ತೆ

12:22 PM Aug 30, 2018 | udayavani editorial |

ಥಾಣೆ, ಮಹಾರಾಷ್ಟ್ರ : 29ರ ಹರೆಯದ ವಿವಾಹಿತ ಮಹಿಳೆ ಹರ್ಷದಾ ಸೋಮವಂಶಿ ಎಂಬಾಕೆಯ ಮೃತ ದೇಹ ಆಕೆಯ ಸ್ನೇಹಿತನ ಅಪಾರ್ಟ್‌ಮೆಂಟ್‌ನಲ್ಲಿ  ಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

Advertisement

ಕ್ಯಾಟರಿಂಗ್‌ ಉದ್ಯಮದಲ್ಲಿ ತೊಡಗಿಕೊಂಡಿದ್ದ  ಹರ್ಷದಾ ಅವರು ಮೊನ್ನೆ ಮಂಗಳವಾರದಿಂದ ನಾಪತ್ತೆಯಾಗಿದ್ದರು. ಆಕೆಯ ಮನೆಯವರು ಆ ಬಗ್ಗೆ  ಡೊಂಬಿವಿಲಿಯ ಮನಪಾಡಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ದೂರನ್ನು ಆಧರಿಸಿ ಶೋಧ ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ, ಹರ್ಷದಾ ಅವರ ಮೃತ ದೇಹ ತಾವು ವಾಸವಾಗಿರುವ ಅಪಾರ್ಟ್‌ಮೆಂಟ್‌ನಲ್ಲೇ ಇರುವ ತನ್ನ ಪುರುಷ ಸ್ನೇಹಿತರೊಬ್ಬರ ಮನೆಯಲ್ಲಿ ಕಂಡು ಬಂದಿತು. 

ನಿನ್ನೆ ಬುಧವಾರ ಸಂಜೆಯಿಂದ ಮೃತ ಹರ್ಷದಾ ಅವರ ಪುರುಷ ಸ್ನೇಹಿತ ನಾಪತ್ತೆಯಾಗಿದ್ದು ಆತನಿಗಾಗಿ ಪೊಲೀಸರೀಗ ಹುಡುಕಾಡುತ್ತಿದ್ದಾರೆ. 

ಹರ್ಷದಾ ಅವರ ದೇಹದ ಮೇಲೆ ಯಾವುದೇ ಗಾಯದ ಗುರುತುಗಳು ಕಂಡು ಬಂದಿಲ್ಲ. ಆಕೆಯ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next