ನವದೆಹಲಿ: ಇತ್ತೀಚೆಗೆ ಉಚಿತವಾಗಿ ಇಂಟರ್ನೆಟ್ ಲಭ್ಯವಾಗುವ ಮೂಲಕ ಬಹುತೇಕ ಮಂದಿ ಪೋರ್ನ್ ವೆಬ್ ಸೈಟ್ ನೋಡುವ ಚಟಕ್ಕೆ ದಾಸರಾಗಿಬಿಟ್ಟಿದ್ದಾರೆ. ಇದರಿಂದ ವೈವಾಹಿಕ ಜೀವನಕ್ಕೆ ಧಕ್ಕೆ ಬರುವಂತಾಗಿದೆ. ಹಾಗಾಗಿ ಇಂತಹ ಪೋರ್ನ್ ವೆಬ್ ಸೈಟ್ ನಿಷೇಧಿಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಮಹಿಳೆಯೊಬ್ಬರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.
ಸೆಕ್ಸ್ ವಿಡಿಯೋ ನೋಡೋದೇ ಚಟವಾಗಿಬಿಟ್ಟಿದೆ!
ಮುಂಬೈ ಮೂಲದ ಮಹಿಳೆಯೊಬ್ಬರು ಸುಪ್ರೀಂಕೋರ್ಟ್ ಸಲ್ಲಿಸಿರುವ ದೂರಿನ ಪ್ರಕಾರ, ತನ್ನ ಗಂಡ ಆನ್ ಲೈನ್ ನಲ್ಲಿ ಅಶ್ಲೀಲ ವಿಡಿಯೋಗಳನ್ನು ನೋಡುವ ಚಟಕ್ಕೆ ಬಿದ್ದ ಮೇಲೆ ನಮ್ಮ ದಾಂಪತ್ಯ ಜೀವನ ಹಾಳಾಗಿ ಹೋಗಿದೆ. ಆ ನಿಟ್ಟಿನಲ್ಲಿ ಅಂತಹ ಅಶ್ಲೀಲ ಜಾಲತಾಣಗಳನ್ನು ನಿಷೇಧಿಸಲು ಸೂಚನೆ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಇತ್ತೀಚೆಗಿನ ವರ್ಷಗಳಲ್ಲಿ ಅಕ್ಷರಸ್ಥರು, ಹೆಚ್ಚಿನ ವಿದ್ಯಾವಂತರು ಅದರಲ್ಲೂ ಯುವಕರು ಹೆಚ್ಚಾಗಿ ಅಶ್ಲೀಲ ಚಿತ್ರದ ವಿಡಿಯೋ ನೋಡುವ ಚಟಕ್ಕೆ ಬಿದ್ದಿದ್ದಾರೆ. ನನ್ನ ಪತಿಯೂ ಇತ್ತೀಚೆಗೆ ಸೆಕ್ಸ್ ವಿಡಿಯೋ ನೋಡುವ ಚಟ ಹತ್ತಿಸಿಕೊಂಡಿದ್ದಾರೆ. ತಮ್ಮ ಹೆಚ್ಚಿನ ಸಮಯವನ್ನು ಅವರು ಸೆಕ್ಸ್ ವಿಡಿಯೋ ನೋಡುವುದರಲ್ಲೇ ಕಳೆಯುತ್ತಾರೆ. ಇತ್ತೀಚೆಗೆ ಉಚಿತವಾಗಿ ಇಂಟರ್ನೆಟ್ ಕೂಡಾ ಸಿಗುತ್ತಿದೆ. ಅದರ ಪರಿಣಾಮ ನನ್ನ ಪತಿಯೂ ಸೆಕ್ಸ್ ವಿಡಿಯೋ ಮತ್ತು ಚಿತ್ರ ನೋಡುವ ಗೀಳು ಹತ್ತಿಸಿಕೊಂಡಿದ್ದಾರೆ. ಇದರಿಂದಾಗಿ ನಮ್ಮ ದಾಂಪತ್ಯ ಜೀವನದ ಸಂಬಂಧ ಹದಗೆಟ್ಟು ಹೋಗಿದೆ ಎಂದು ವಿವರಿಸಿದ್ದಾರೆ.