Advertisement

ವಿದ್ಯುತ್‌ ಸ್ಥಾವರ ನಿರ್ಮಾಣ ವಿರೋಧಿಸಿ ವಿಷ ಸೇವನೆಗೆ ಮುಂದಾದ ರೈತ ಮಹಿಳೆ

11:09 PM Feb 22, 2020 | Team Udayavani |

ವಿಜಯಪುರ: ತಮ್ಮ ಜಮೀನಿನಲ್ಲಿ ಸರ್ಕಾರ ಅಕ್ರಮವಾಗಿ ವಿದ್ಯುತ್‌ ಸ್ಥಾವರ ನಿರ್ಮಾಣ ಮಾಡುವುದನ್ನು ವಿರೋ ಧಿಸಿ ನಾಲತವಾಡ ಬಳಿ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿರುವ ರೈತ ಮಹಿಳೆಯರು, ಆತ್ಮಹತ್ಯೆ ಮಾಡಿ ಕೊಳ್ಳುವ ಬೆದರಿಕೆ ಹಾಕಿ ಶನಿವಾರ ವಿಷದ ಬಾಟಲಿ ಪ್ರದರ್ಶಿಸಿದ ಘಟನೆ ಜರುಗಿದೆ.

Advertisement

ಮುದ್ದೇಬಿಹಾಳ ತಾಲೂಕಿನ ಪೀರಾಪುರ-ಬೂದಿಹಾಳ ಏತ ನೀರಾವರಿ ಯೋಜನೆಗಾಗಿ ಸರ್ಕಾರ ವಿದ್ಯುತ್‌ ಸ್ಥಾವರ ನಿರ್ಮಾಣಕ್ಕೆ ಮುಂದಾಗಿರುವ ಜಮೀನು ತಮಗೇ ಸೇರಿದ್ದು. ಆದರೆ, ಸರ್ಕಾರ ಅಕ್ರಮವಾಗಿ ತಮ್ಮ ಜಮೀನಿನಲ್ಲಿ ಸ್ಥಾವರ ನಿರ್ಮಿಸುತ್ತಿದೆ ಎಂದು ರೈತರು ಪ್ರತಿಭಟನೆಗೆ ಮುಂದಾಗಿದ್ದರು. ಸರ್ಕಾರ ತಕ್ಷಣ ಕಾಮಗಾರಿ ಸ್ಥಗಿತಗೊಳಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಸಿದರು.

ನಾಲತವಾಡ ಬಳಿಯ ಧರಣಿ ಸ್ಥಳಕ್ಕೆ ಶನಿವಾರ ರೈತರು ವಿಷದ ಬಾಟಲಿ ಸಮೇತ ಬಂದಿದ್ದರು. ಇದರಲ್ಲಿ ರೈತ ಮಹಿಳೆಯೊಬ್ಬರು ವಿಷ ಸೇವನೆಗೆ ಯತ್ನಿಸಿದಾಗ ಸ್ಥಳದಲ್ಲಿದ್ದ ಪೊಲೀಸರು ವಿಷದ ಬಾಟಲಿ ಕಸಿದು, ರೈತರನ್ನು ಧರಣಿ ಸ್ಥಳದಿಂದ ಹೊರ ಹಾಕಿದರು.

ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ವಿಜಯಪುರ ಉಪ ವಿಭಾಗಾ ಧಿಕಾರಿ ಸೋಮಲಿಂಗ ಗೆಣ್ಣೂರ, ಕೆಬಿಜೆಎನ್ನೆಲ್‌ ಅಧಿಕಾರಿಗಳ ಸಮ್ಮುಖದಲ್ಲಿ ರೈತರೊಂದಿಗೆ ಚರ್ಚಿಸಿದರು. ಅಂತಿಮವಾಗಿ ರೈತರು ತಮ್ಮ ಜಮೀನು ಎನ್ನುವ ಕುರಿತು 15 ದಿನಗಳಲ್ಲಿ ನ್ಯಾಯಾಲಯದಿಂದ ತಡೆಯಾಜ್ಞೆ ಅಥವಾ ಆದೇಶ ತರಬೇಕು. ತಪ್ಪಿದಲ್ಲಿ ಕಾಮಗಾರಿ ಮುಂದುವರಿಸುವುದಾಗಿ ಅ ಧಿಕಾರಿಗಳು ತಿಳಿಸಿದರು. ಇದ್ದಕ್ಕೊಪ್ಪಿದ ರೈತರು ಧರಣಿ ಕೈಬಿಟ್ಟು, ಸ್ಥಳದಿಂದ ಕದಲಿದರು.

Advertisement

Udayavani is now on Telegram. Click here to join our channel and stay updated with the latest news.

Next