ನೋಯ್ಡ: ಬಹುಮಹಡಿ ಕಟ್ಟಡವೊಂದರಲ್ಲಿ ಲಿಫ್ಟ್ ಕೇಬಲ್ ತುಂಡಾದ ಪರಿಣಾಮ ಲಿಫ್ಟ್ ನೊಳಗೆ ಇದ್ದ ಮಹಿಳೆಯೊಬ್ಬರು ಹೃದಯಾಘಾತಕ್ಕೊಳಗಾಗಿ ಮೃತಪಟ್ಟ ಘಟನೆ ಗುರುವಾರ ನಡೆದಿದೆ.
ಮೃತರನ್ನು ಸುಶೀಲಾ ದೇವಿ (70) ಎನ್ನಲಾಗಿದೆ.
ನೊಯ್ಡಾ ಸೆಕ್ಟರ್ -137 ರ ಪ್ಯಾರಾಸ್ ಟಿಯೆರಾ ಅಪಾರ್ಟ್ಮೆಂಟ್ ನಲ್ಲಿ ಘಟನೆ ನಡೆದಿದ್ದು ಸುಶೀಲಾ ಅವರು ಗುರುವಾರ ಸುಮಾರು ಎಂಟು ಅಂತಸ್ಥಿನ ಕಟ್ಟಡದ ಮೇಲಿಂದ ಲಿಫ್ಟ್ ಮೂಲಕ ಕೆಳಗೆ ಇಳಿಯುವ ವೇಳೆ ಲಿಫ್ಟ್ ಕೇಬಲ್ ತುಂಡಾಗಿದೆ ಈ ವೇಳೆ ಲಿಫ್ಟ್ ಒಳಗೆ ಇದ್ದ ಸುಶೀಲಾ ಅವರು ಹೃದಯಾಘಾತಕ್ಕೆ ಒಳಗಾಗಿದ್ದಾರೆ ಬಳಿಕ ಮಹಿಳೆಯನ್ನು ಸುಮಾರು ಒಂದು ಗಂಟೆಗಳ ಕಾರ್ಯಾಚರಣೆ ನಡೆಸಿ ಲಿಫ್ಟ್ ನಿಂದ ಹೊರತೆಗೆದಾಗ ಪ್ರಜ್ಞಾಹೀನರಾಗಿದ್ದರು ಕೊಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಮಹಿಳೆ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ ಬಳಿಕ ವೈದ್ಯರ ತಂಡ ಪರೀಕ್ಷೆ ನಡೆಸಿದಾಗ ಮಹಿಳೆ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಹೇಳಿದ್ದಾರೆ.
ಎಂಟನೇ ಮಹಡಿಯಲ್ಲಿ ಘಟನೆ ನಡೆದಿದ್ದು ಮಹಿಳೆ ಒಬ್ಬರೇ ಲಿಫ್ಟ್ ನಲ್ಲಿ ಇದ್ದುದರಿಂದ ಕೇಬಲ್ ತುಂಡಾದಾಗ ಎಲ್ಲಿ ಕೆಳಗೆ ಬಿದ್ದು ಬಿಡುತ್ತೇನೋ ಎಂಬ ಭಯದಲ್ಲಿ ಮಹಿಳೆಗೆ ಹೃದಯಾಘಾತವಾಗಿರಬಹುದು ಎಂದು ವೈದ್ಯರು ಹೇಳಿದ್ದಾರೆ.
ಕೇಬಲ್ ತುಂಡಾದ ವೇಳೆ ಲಿಫ್ಟ್ ಕೆಳಗೆ ಬೀಳದೆ ಕೆಳಗಿನ ಅಂತಸ್ಥಿನಲ್ಲಿ ಸಿಲುಕಿಕೊಂಡಿತ್ತು ಎಂದು ರಕ್ಷಣಾ ತಂಡ ಮಾಹಿತಿ ನೀಡಿದೆ ಕೆಳಗೆ ಬೀಳುವ ವೇಳೆ ಮಹಿಳೆಯ ಕೈ ಕಾಲಿಗೆ ಗಾಯಗಳಾಗಿವೆ ಎಂದು ಹೇಳಿದ್ದಾರೆ.
ಘಟನೆ ನಡೆದ ಬಳಿಕ ಕಟ್ಟಡದಲ್ಲಿ ವಾಸಿಸುವ ಇತರ ನಿವಾಸಿಗಳು ಕಟ್ಟಡದ ನಿರ್ವಹಣೆಯ ಕುರಿತು ಕಿಡಿಕಾರಿದ್ದಾರೆ, ಅಲ್ಲದೆ ಸಮರ್ಪಕ ರೀತಿಯಲ್ಲಿ ಲಿಫ್ಟ್ ನಿರ್ವಹಣೆ ಮಾಡಲಾಗುತ್ತಿಲ್ಲ ಎಂದು ದೂರಿದ್ದಾರೆ.
ಇದನ್ನೂ ಓದಿ: ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ; ಶ್ರೀ ಮಂಜುನಾಥ ಸ್ವಾಮಿ ಭಕ್ತ ವೃಂದದಿಂದ ಬೃಹತ್ ಸಮಾವೇಶ