Advertisement

ನಾಲೆಯ ಪ್ರವಾಹದಲ್ಲಿ ಕೊಚ್ಚಿ ಹೋದ ಮಹಿಳೆ ಸಾವು, ಬಾಲಕಿ ನಾಪತ್ತೆ

10:46 AM Jul 11, 2019 | Team Udayavani |

ಬಂಡಾ, ಉತ್ತರ ಪ್ರದೇಶ : ಪ್ರವಾಹವಿದ್ದ ನಾಲೆಯೊಂದನ್ನು ದಾಟುತ್ತಿದ್ದ ಮಹಿಳೆ ನೀರಿನಲ್ಲಿ ಕೊಚ್ಚಿ ಹೋದರೆ ಆಕೆಯ ಅಪ್ರಾಪ್ತ ವಯಸ್ಸಿನ ಬಾಲಕಿ ನಾಪತ್ತೆಯಾದ ಘಟನೆ ಇಲ್ಲಿ ನಡೆದಿದೆ.

Advertisement

ರಾಜಾರಾಮ್‌ 50, ಆತನ ಪತ್ನಿ ಕುಸುಮಾ 45 ಮತ್ತು ಪುತ್ರಿ ಸಾಧನಾ 12 ಮತ್ತು ಅರ್ಚನಾ 10 ಇವರು ನಿನ್ನೆ ಮಂಗಳವಾರ ನೆರೆಯಿಂದ ಕೂಡಿದ ನಾಲೆಯನ್ನು ದಾಟಲು ಯತ್ನಿಸುತ್ತಿದ್ದಾಗ ಈ ದುರ್ಘ‌ಟನೆ ಸಂಭವಿಸಿತು.

ನೀರಲ್ಲಿ ಕೊಚ್ಚಿ ಹೋಗುತ್ತಿದ್ದಾಗ ಬೊಬ್ಬಿಟ್ಟ ರಾಜರಾಮ್‌ ಮತ್ತು ಸಾಧನಾ ಅವರನ್ನು ಗ್ರಾಮಸ್ಥರು ಪಾರು ಮಾಡಿದರು. ಆದರೆ ಪತ್ನಿ ಕುಸುಮಾ ಅದಾಗಲೇ ಪ್ರವಾಹದಲ್ಲಿ ಕೊಚ್ಚಿಹೋಗಿದ್ದರು. ಪೊಲೀಸರೀಗ ನಾಪತ್ತೆಯಾಗಿರುವ ಅರ್ಚನಾ ಅವರನ್ನು ಹುಡುಕಾಡುತ್ತಿದ್ದಾರೆ ಎಂದು ಸರ್ಕಲ್‌ ಆಫೀಸರ್‌ ರಾಘವೇಂದ್ರ ಸಿಂಗ್‌ ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next