Advertisement

ಕಾರುಗಳ ನೇರ ಢಿಕ್ಕಿ : ಮಹಿಳೆ ಸಾವು, 8 ಮಂದಿಗೆ ಗಾಯ

09:02 AM Mar 25, 2019 | udayavani editorial |

ಮಥುರಾ, ಉತ್ತರ ಪ್ರದೇಶ : ಯಮುನಾ ಎಕ್ಸ್‌ಪ್ರೆಸ್‌ ವೇಯಲ್ಲಿ ಇಂದು ಶನಿವಾರ ಎರಡು ಕಾರುಗಳು ಮುಖಾಮುಖೀ ಢಿಕ್ಕಿ ಹೊಡೆದುಕೊಂಡ ಅಪಘಾತದಲ್ಲಿ ಓರ್ವ ಮಹಿಳೆ ಮೃತಪಟ್ಟು ಇತರ ಎಂಟು ಮಂದಿ ಗಾಯಗೊಂಡರೆಂದು ಪೊಲೀಸರು ತಿಳಿಸಿದ್ದಾರೆ.

Advertisement

ಕಾರೊಂದನ್ನು ಓವರ್‌ ಟೇಕ್‌ ಮಾಡುವ ಭರದಲ್ಲಿದ್ದ ಹಿಂಬದಿಯ ಕಾರು ಎದುರುಗಡೆಯಿಂದ ವೇಗವಾಗಿ ಧಾವಿಸಿ ಬರುತ್ತಿದ್ದ ಕಾರಿಗೆ ನೇರ ಢಿಕ್ಕಿ ಹೊಡೆಯಿತು.

ಗಾಯಾಳುಗಳನ್ನು ಆಗ್ರಾ – ಮಥುರಾ ಹೈವೇಯಲ್ಲಿನ ನಯತಿ ಆಸ್ಪತ್ರೆಗೆ ಸೇರಿಸಲಾಗಿದೆ. ನಾಲ್ವರು ಗಾಯಾಳುಗಳ ಸ್ಥಿತಿ ಚಿಂತಾಜನಕವಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next