Advertisement

ವೆಂಟಿಲೇಟರ್‌ ಬದಲಾವಣೆ ವೇಳೆ ಮಹಿಳೆ ಸಾವು-ಆರೋಪ

06:19 PM May 20, 2021 | Team Udayavani |

ಗದಗ: ವೆಂಟಿಲೇಟರ್‌ ಬದಲಾವಣೆ ವೇಳೆ ಕೋವಿಡ್‌ ಸೋಂಕಿತ ಮಹಿಳೆಯೊಬ್ಬರು ಮೃತಪಟ್ಟಿದ್ದು, ವೈದ್ಯರ ವಿರುದ್ಧ ನಿರ್ಲಕ್ಷé ಆರೋಪ ಕೇಳಿ ಬಂದಿದೆ. ನಗರದ ಅಂಬೇಡ್ಕರ್‌ ನಗರ ನಿವಾಸಿ ಸುಮಿತ್ರಾ ಮಣ್ಣೂರು (52) ಎಂಬವರು ಬುಧವಾರ ಬೆಳಗಿನ ಜಾವ ಮೃತಪಟ್ಟಿದ್ದಾರೆ.

Advertisement

ಸುಮಿತ್ರಾ ಮೇ 13ರಂದು ಸೋಂಕಿನಿಂದಾಗಿ ಜಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬುಧವಾರ ಬೆಳಗಿನ ಜಾವ ಏಕಾಏಕಿ ಆಸ್ಪತ್ರೆ ವೈದ್ಯರು ವೆಂಟಿಲೇಟರ್‌ ಬದಲಾವಣೆ ಮಾಡಿದ್ದಾರೆ. ಒಂದು ವೆಂಟಿಲೇಟರ್‌ನಿಂದ ಮತ್ತೂಂದು ವೆಂಟಿಲೇಟರ್‌ ಅವಳಡಿಸಲು ಸುಮಾರು 15 ನಿಮಿಷ ವಿಳಂಬವಾಗಿದೆ. ಇದಾದ ಕೇವಲ 10 ನಿಮಿಷಗಳಲ್ಲಿ ಕೊನೆಯುಸಿರೆಳೆದರು. ಈ ವೇಳೆ ರೋಗಿ ಸಾವು-ಬದುಕಿನ ಮಧ್ಯೆ ನರಳಾಡುತ್ತಿದ್ದರೂ, ಕರ್ತವ್ಯ ನಿರತ ವೈದ್ಯರು ಸ್ಪಂದಿಸಲಿಲ್ಲ. ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದ ವೆಂಟಿಲೇಟರ್‌ನ್ನು ಮತ್ತೂಂದು ರೋಗಿಗೆ ಅಳವಡಿಸಲು ಹಳೇ ಹಾಗೂ ಕಳಪೆ ಸಾಮರ್ಥ್ಯದ ವೆಂಟಿಲೇಟರ್‌ ಅಳವಡಿಸಿದ್ದರಿಂದ ಸುಮಿತ್ರಾ ಮೃತಪಟ್ಟಿದ್ದಾರೆ ಎಂದು ಮೃತರ ಸಂಬಂಧಿಕರು ಆರೋಪಿಸಿದ್ದಾರೆ. ಅಲ್ಲದೇ, ಕರ್ತವ್ಯಲೋಪ ಎಸಗಿರುವ ವೈದ್ಯರ ವೈದ್ಯಕೀಯ ಸೇವಾ ಪ್ರಮಾಣಪತ್ರ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.

ತನಿಖಾ ಸಮಿತಿ ರಚನೆ: ಈ ಕುರಿತು ಪ್ರತಿಕ್ರಿಯಿಸಿರುವ ಜಿಮ್ಸ್‌ ನಿರ್ದೇಶಕ ಡಾ|ಪಿ. ಎಸ್‌. ಭೂಸರೆಡ್ಡಿ, ಸಂಬಂಧಿ ಕರ ಆರೋಪ ತಳ್ಳಿ ಹಾಕಿದ್ದಾರೆ. ನಿರಂತರವಾಗಿ ಕಾರ್ಯ ನಿರ್ವಹಿಸುವ ವೆಂಟಿಲೇಟರ್‌ಗಳಲ್ಲಿ ಸಾಮಾನ್ಯವಾಗಿ ಸಣ್ಣ ಪುಟ್ಟ ತಾಂತ್ರಿಕ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಅಂತಹ ಸಂದರ್ಭದಲ್ಲಿ ವೆಂಟಿಲೇಟರ್‌ ಬದಲಾವಣೆ ಅಗತ್ಯ. ವಿನಾಕಾರಣ ಯಾವುದೇ ವೈದ್ಯರು ವೆಂಟಿಲೇಟರ್‌ ಬದಲಾವಣೆಗೆ ಸೂಚಿಸುವುದಿಲ್ಲ. ಅಲ್ಲದೇ, ರೋಗಿ ಸತತ 7 ದಿನಗಳಿಂದ ಒಂದೇ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಸುಮಿತ್ರಾ ಆಸ್ಪತ್ರೆಗೆ ದಾಖಲಾಗುವಾಗಲೇ ಆರೋಗ್ಯ ಸ್ಥಿತಿ ಬಿಗಡಾಯಿಸಿತ್ತು. ಅವರ ಸ್ಯಾಂಚುರೇಷನ್‌ ಮಟ್ಟ ಶೇ.75 ಇತ್ತು. ಹೀಗಾಗಿ ಅವರು ಕೊನೆಯುಸಿರೆಳೆದಿರಬಹುದು ಎಂದು ನಂಬಲಾಗಿದೆ. ಆದರೂ, ಮೃತಳ ಕುಟುಂಬಸ್ಥರು ನೀಡಿರುವ ಲಿಖೀತ ದೂರಿನನ್ವಯ ಸರ್ಕಾರಕ್ಕೆ ಮಾಹಿತಿ ಸಲ್ಲಿಸಲಾಗಿದೆ. ಜತೆಗೆ ಆಂತರಿಕ ವಿಚಾರಣೆಗಾಗಿ ಅಪರ ಜಿಲ್ಲಾಧಿಕಾರಿ ಸತೀಶಕುಮಾರ್‌ ಎಂ. ಅಧ್ಯಕ್ಷತೆಯಲ್ಲಿ 6 ಜನರ ತನಿಖಾ ಸಮಿತಿ ರಚಿಸಲಾಗಿದ್ದು, ಮೂರು ದಿನಗಳಲ್ಲಿ ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next