ಮಹಿಳೆಯ ಗುರುತೂ ಪತ್ತೆಯಾಗಿಲ್ಲ. ಕೆಲವರು ಮಹಿಳೆಯನ್ನು ದೂರ ಓಡಿಸಿದರೂ, ಆಕೆ ಹೋಗದೆ ಶವ ಪಕ್ಕದಲ್ಲೇ ಕುಳಿತು ಅಳುತ್ತಿದ್ದಳು. ಆಕೆ ಮಾನಸಿಕ ಅಸ್ವಸ್ಥೆಯಾಗಿದ್ದು, ರೈಲು ನಿಲ್ದಾಣದಲ್ಲಿ ಭಿಕ್ಷೆ ಬೇಡಿಕೊಂಡು ಜೀವಿಸುತ್ತಿದ್ದಳು. ಮೃತ ವ್ಯಕ್ತಿ ಮತ್ತು ಈ ಮಹಿಳೆ ರೈಲು ನಿಲ್ದಾಣದ ಸಂದಿಗಳಲ್ಲೇ ಸಹಜೀವನ ಮಾಡುತ್ತಿದ್ದರು. ಮಂಗಳವಾರ ರಾತ್ರಿ ವ್ಯಕ್ತಿ
ಮೃತಪಟ್ಟಿದ್ದಾನೆ. ಇದರಿಂದ ಆಘಾತಕ್ಕೊಳಗಾಗಿ ಆಕೆ ಹೀಗೆ ವರ್ತಿಸಿರಬಹುದು ಎನ್ನಲಾಗುತ್ತಿದೆ. ಮಹಿಳೆಯ ವರ್ತನೆ ಕುರಿತು ಸಾರ್ವಜನಿಕರು ಮಕ್ಕಳ ಸಹಾಯವಾಣಿಗೆ ತಿಳಿಸಿದರು. ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ
ಸಿ.ವಿ.ರಾಮನ್, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ವಿಠuಲ ಚಿಕಣಿ, ಡಾನ್ ಬಾಸ್ಕೋದ ಜ್ಯೋತಿ ಆಕೆಯ ಮಕ್ಕಳನ್ನು ರಕ್ಷಣೆ ಮಾಡಿ, ಬಾಲ ಮಂದಿರದ ಸುಪರ್ದಿಗೆ ಒಪ್ಪಿಸಿದ್ದಾರೆ.
Advertisement
ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಆ ಮಹಿಳೆಯೂ ಮಕ್ಕಳನ್ನು ಬಿಟ್ಟು ಶವ ಪರೀಕ್ಷೆ ಸ್ಥಳಕ್ಕೆ ಹೋಗಿದ್ದಾಳೆ ಎಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ವಿಠuಲ ಚಿಕಣಿ ತಿಳಿಸಿದ್ದಾರೆ.