ಶಿಲ್ಲಾಂಗ್ : ಭಾರಿ ಮಳೆಯಿಂದಾಗಿ ಭೂ ಕುಸಿತ ಸಂಭವಿಸಿದ ಪರಿಣಾಮ ರಾಷ್ಟ್ರೀಯ ಮಟ್ಟದ ಮಹಿಳಾ ಕ್ರಿಕೆಟ್ ಆಟಗಾರ್ತಿ ಸಾವನ್ನಪ್ಪಿದ್ದು ಜೊತೆಗೆ ಐದು ಮಂದಿ ಮಣ್ಣಿನಡಿ ಸಿಲುಕಿದ ಘಟನೆ ಗುರುವಾರ ಮುಂಜಾನೆ ಸಂಭವಿಸಿದೆ.
ಮೇಘಾಲಯದ ಮಾವ್ನಿಯಲ್ಲಿರುವ ಪರ್ವತ ಪ್ರದೇಶದಲ್ಲಿ ಶುಕ್ರವಾರ ಮುಂಜಾನೆ ಆರು ಗಂಟೆಯ ಸುಮಾರಿಗೆ ಭೂ ಕುಸಿತ ಸಂಭವಿಸಿದೆ ಪರಿಣಾಮ ಗುಡ್ಡದ ತಳ ಭಾಗದಲ್ಲಿ ವಾಸಿಸುತ್ತಿರುವ ಮನೆಗಳ ಮೇಲೆ ಗುಡ್ಡ ಕುಸಿದ ಪರಿಣಾಮ ಹಲವರು ಮಣ್ಣಿನಡಿ ಸಿಲುಕಿದ್ದು ರಕ್ಷಣಾ ಕಾರ್ಯಾಚರಣೆ ನಡೆಸಿದ ಸಂದರ್ಭ ಕ್ರಿಕೆಟ್ ಆಟಗಾರ್ತಿ ರಜಿಯಾ ಅಹ್ಮದ್ (30) ಅವರ ಮೃತ ದೇಹ ಪತ್ತೆಯಾಗಿದೆ. ಉಳಿದವರ ಪತ್ತೆಗಾಗಿ ಸ್ಥಳದಲ್ಲಿ ಶೋಧ ಕಾರ್ಯ ಮುಂದುವರೆಸಿದ್ದಾರೆ.
ಕಳೆದ ಕೆಲವು ದಿನಗಳಲ್ಲಿ ಮೇಘಾಲಯದ ಪರ್ವತ ಸಾಲುಗಳಲ್ಲಿ ಹಲವು ಕಡೆ ಬೆಟ್ಟ ಕುಸಿತಗೊಂಡಿದ್ದು ಹಲವರು ಗಾಯಗೊಂಡಿದ್ದರು. ಇಂದು ಬೆಳಿಗ್ಗೆ ಕೂಡಾ ಇದೆ ರೀತಿ ಭೂ ಕುಸಿತ ಸಂಭವಿಸಿದ್ದು ಪರಿಣಾಮ ಕ್ರಿಕೆಟ್ ಆಟಗಾರ್ತಿಯೊಬ್ಬರು ಜೀವಕಳೆದುಕೊಂಡಿದ್ದಾರೆ.
ಇದನ್ನೂ ಓದಿ :ಭಾರತದ ಹೊಸ ಕ್ರಶ್: ಕ್ರಿಕೆಟ್ ತಾರೆ ಪ್ರಿಯಾ ಪೂನಿಯಾ ಪಯಣದ ಹಿಂದಿದೆ ರೋಚಕ ಕಹಾನಿ
ಮೇಘಾಲಯ ಕ್ರಿಕೆಟ್ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಗಿಡಿಯಾನ್ ಖಾರ್ಕೊಂಗೋರ್ ಮಾತನಾಡಿ, ರಜಿಯಾ ಅವರು 2011-12 ರಿಂದ ಹಲವಾರು ರಾಷ್ಟ್ರಮಟ್ಟದ ಪಂದ್ಯಾವಳಿಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದಾರೆ ಎಂದ ಅವರು ಕಳೆದ ವರ್ಷ ಬಿಸಿಸಿಐ ಆಯೋಜಿಸಿದ್ದ ಪಂದ್ಯಾವಳಿಯಲ್ಲಿ ರಜಿಯಾ ಮೇಘಾಲಯ ಪರ ಆಡಿದ್ದರು ಎಂದು ಖಾರ್ಕೊಂಗೋರ್ ಹೇಳಿದ್ದಾರೆ.
ನೈಸರ್ಗಿಕ ವಿಕೋಪದಿಂದ ಆದ ರಜಿಯಾ ಅವರ ನಿಧನಕ್ಕೆ ತಂಡದ ಸಹ ಆಟಗಾರರು ಸಂತಾಪ ಸೂಚಿಸಿದ್ದಾರೆ.