Advertisement

ಮೂರನೇ ಬಾರಿಗೆ ಗರ್ಭಪಾತ : ಇನ್ಸ್‌ಪೆಕ್ಟರ್ ವಿರುದ್ಧ ಮಹಿಳಾ ಕಾನ್ಸ್‌ಟೇಬಲ್‌ ಆರೋಪ

12:00 PM Mar 11, 2022 | Team Udayavani |

ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿ ವಂಚಿಸಿದ ರಾಜ್ಯಗುಪ್ತಚರ ದಳ ವಿಭಾಗದ ಇನ್‌ಸ್ಪೆಕ್ಟರ್‌ ಆರ್‌. ಮಧುಸೂದನ್‌ ವಿರುದ್ಧ ಮಹಿಳಾ ಕಾನ್ಸ್‌ಟೇಬಲ್‌ವೊಬ್ಬರು ಗೋವಿಂದರಾಜನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Advertisement

2017ರಲ್ಲಿ ಪರಿಚಯವಾದ ಪಿಐ ಮಧುಸೂದನ್‌, ಮದುವೆಯಾಗುವುದಾಗಿ ನಂಬಿಸಿದ್ದರು. ಬಳಿಕ ಬಿಡದಿ ರೆಸಾರ್ಟ್‌ಗೆ ಕರೆದೊಯ್ದು ಬಲವಂತವಾಗಿ ಲೈಂಗಿಕ ಸಂಪರ್ಕ ಬೆಳೆಸಿದ್ದಾರೆ. ನಂತರ ಐದಾರು ಬಾರಿ ಕರೆದಯೊಯ್ದು ಲೈಂಗಿಕ ಸಂಪರ್ಕ ಬೆಳೆಸಿದ್ದು, 2019ರಲ್ಲಿ ಗರ್ಭಿಣಿಯಾಗಿದ್ದೆ. ನಂತರ ಕೋಲಾರದ ಜಾಲಪ್ಪ ಆಸ್ಪತ್ರೆಗೆ ಕರೆದೊಯ್ದು ಗರ್ಭಪಾತ ಮಾಡಿಸಿದ್ದಾರೆ.

“ಈ ವಿಷಯವನ್ನು ಯಾರಿಗೂ ಹೇಳಬೇಡ, ನಿನ್ನನ್ನು ಮದುವೆಯಾಗುತ್ತೇನೆ’ ಎಂದು ಭರವಸೆ ನೀಡಿ ಮೂಡಲ ಪಾಳ್ಯ ವೃತ್ತದ ಬಳಿ ಬಾಡಿಗೆ ಮನೆಯೊಂದರಲ್ಲಿ ಇರಿಸಿದ್ದರು. ಅಲ್ಲದೇ, ಇಲ್ಲಿಯೂ ಆಗಾಗ್ಗೆ ಬಂದು ದೈಹಿಕ ಸಂಪರ್ಕ ಮಾಡುತ್ತಿದ್ದರು. ಅದರಿಂದ ಮತ್ತೂಮ್ಮೆ ಗರ್ಭಿಣಿಯಾಗಿದ್ದೆ. ಈ ವೇಳೆ ಮದುವೆಯಾಗುವಂತೆ ಕೇಳಿಕೊಂಡಾಗ ಹೊಟ್ಟೆ ಮೇಲೆ ಹಲ್ಲೆ ನಡೆಸಿದ್ದಾರೆ. ಮೂರನೇ ಬಾರಿಗೆ ಗರ್ಭಪಾತವಾಗಿದೆ. ಅದನ್ನು ಪ್ರಶ್ನಿಸಿ ದಕ್ಕೆ ಪದೇ ಪದೆ ಕರೆ ಮಾಡಿ ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ ಎಂದು ಸಂತ್ರಸ್ತೆ ದೂರಿ ನಲ್ಲಿ ಆರೋಪಿಸಿದ್ದಾರೆ.

ಯುವತಿ ಜತೆ ದುರ್ವರ್ತನೆ: ಕ್ಯಾಬ್‌ ಚಾಲಕ ಬಂಧನ

ಯುವತಿ ಜತೆ ಅಸಭ್ಯ ವಾಗಿ ವರ್ತಿಸಿದ ಆರೋಪದಡಿ ಕ್ಯಾಬ್‌ ಚಾಲಕನೊಬ್ಬನನ್ನು ಜೀವನ ಭೀಮಾ ನಗರ ಪೊಲೀಸರು ಬಂಧಿಸಿದ್ದಾರೆ. ಕಾಕೋಳು ನಿವಾಸಿ ಕ್ಯಾಬ್‌ ಚಾಲಕ ಮಂಜುನಾಥ್‌ (31) ಬಂಧಿತ.

Advertisement

ಬುಧ ವಾರ ಮಧ್ಯರಾತ್ರಿ ಯುವತಿಯೊಬ್ಬರು ಪಾರ್ಟಿ ಮುಗಿಸಿಕೊಂಡು ಮನೆಗೆ ತೆರಳಲು ಕ್ಯಾಬ್‌ ಬುಕ್‌ ಮಾಡಿದ್ದಾರೆ. ಮದ್ಯದ ಅಮಲಿನಲ್ಲಿದ್ದ ಯುವತಿ ಹಾಗೂ ಆಕೆಯ ಇಬ್ಬರು ಗೆಳತಿಯರು ಕ್ಯಾಬ್‌ನಲ್ಲಿ ಕುಳಿತುಕೊಂಡಿದ್ದಾರೆ.ಮನೆ ಸಮೀಪದಲ್ಲಿ ಇಳಿಯುವಾಗ ಯುವತಿ ಕ್ಯಾಬ್‌ ಚಾಲಕನ ಸಹಾಯ ಕೇಳಿದ್ದಾರೆ. ಅದನ್ನೇ ದುರುಪಯೋಗ ಪಡಿಸಿಕೊಂಡ ಕ್ಯಾಬ್‌ ಚಾಲಕ, ಆಕೆಯ ಅಂಗಾಂಗಗಳನ್ನು ಮುಟ್ಟಿ ದುರ್ವತನೆ ತೋರಿದ್ದಾನೆ. ಅದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಯುವತಿ, ಆತನನ್ನು ದೂರ ತಳ್ಳಿದ್ದಾಳೆ. ಗುರುವಾರ ಬೆಳಗ್ಗೆ ಜೆ.ಬಿ.ನಗರ ಪೊಲೀಸ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿ ಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next