Advertisement

ದೀಪಾವಳಿಗೆ ಮಹಿಳೆಯಿಂದ ಮನೆ ಸ್ವಚ್ಛತೆ ; ವಿಡಿಯೋ ವೈರಲ್

07:25 PM Oct 21, 2022 | Team Udayavani |

ದೀಪಾವಳಿ ಹಬ್ಬಕ್ಕಾಗಿ ಮನೆಗಳನ್ನು ಶುಚಿಗೊಳಿಸುವ ರೂಢಿ ಸಾಮಾನ್ಯ ಪ್ರತಿಯೊಬ್ಬರೂ ಕಿಟಕಿಗಳು ಮತ್ತು ಬಾಗಿಲುಗಳನ್ನು ಸಹ ಸ್ವಚ್ಛಗೊಳಿಸಲು ಬಯಸುತ್ತಾರೆ. ಮನೆ ಸ್ವಚ್ಛವಾಗಿದ್ದಾಗ ಮಾತ್ರ ಲಕ್ಷ್ಮಿ ಬರುತ್ತಾಳೆ ಎಂಬ ನಂಬಿಕೆ ಇದೆ. ಏತನ್ಮಧ್ಯೆ, ದೀಪಾವಳಿಗೆ ಮುಂಚಿತವಾಗಿ ಮಹಿಳೆಯೊಬ್ಬರು ಮಾಡಿರುವ ಸ್ವಚ್ಛತೆಯ ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

Advertisement

ಮಹಿಳೆ ತನ್ನ ಬಹುಮಹಡಿ ಫ್ಲಾಟ್‌ನ ಕಿಟಕಿಯನ್ನು ಸ್ವಚ್ಛಗೊಳಿಸುತ್ತಿರುವುದನ್ನು ಕಾಣಬಹುದು. ವೈರಲ್ ಆಗಿರುವ ಈ ವಿಡಿಯೋ ಬಗ್ಗೆ ಜನರಿಂದ ವಿವಿಧ ರೀತಿಯ ಕಾಮೆಂಟ್‌ಗಳು ಬರುತ್ತಿವೆ. ಲಕ್ಷ್ಮಿ ಜೀ ಮನೆಗೆ ಬರದಿದ್ದರೆ ಅವಳು ಎಲ್ಲಿಗೂ ಹೋಗುವುದಿಲ್ಲ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ.

ಮಹಿಳೆ ನಿಂತು ಸ್ವಚ್ಛಗೊಳಿಸುತ್ತಿರುವ ಸ್ಥಳದಿಂದ ಸ್ವಲ್ಪ ಕಾಲು ಜಾರಿದರೆ, ಹಲವಾರು ಮಹಡಿಗಳಿಂದ ಕೆಳಗೆ ಬೀಳುವ ಅಪಾಯವಿದ್ದ ಹೊರತಾಗಿಯೂ ಆಕೆ ಸಂಪೂರ್ಣ ಮಗ್ನಳಾಗಿ ಸ್ವಚ್ಛಗೊಳಿಸುವುದನ್ನು ಕಾಣಬಹುದು.

ಈ ವಿಡಿಯೋ ಸುಮಾರು ಒಂದು ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಇಷ್ಟೊಂದು ಅಪಾಯದ ಜಾಗದಲ್ಲಿ ನಿಂತರೂ ಮಹಿಳೆ ಸಂಪೂರ್ಣ ಕಾಳಜಿಯಿಂದ ಸ್ವಚ್ಛತೆ ಮಾಡುತ್ತಿರುವುದು ಹೇಗೆ ಎಂದು ಜನರು ಬೆರಗು ವ್ಯಕ್ತಪಡಿಸುತ್ತಿದ್ದಾರೆ.

ಒಟ್ಟಿನಲ್ಲಿ ಈ ವಿಡಿಯೋ ದೀಪಾವಳಿಗೂ ಮುನ್ನವೇ ಹೆಚ್ಚು ಚರ್ಚೆಯಾಗುತ್ತಿದ್ದು, ಸ್ವಚ್ಛತೆಯ ಕ್ರೇಜ್ ಅನ್ನು ಜನರು ಆನಂದಿಸುತ್ತಿದ್ದಾರೆ. ಈ ವೀಡಿಯೋ ಹೊಸದಲ್ಲವಾದರೂ ಈ ವರ್ಷದ ಫೆಬ್ರವರಿಯಲ್ಲಿ ಬಿಡುಗಡೆಯಾಗಿದ್ದು, ಈಗ ವೈರಲ್ ಆಗಿದೆ ಎಂದು ತಿಳಿದು ಬಂದಿದೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next