Advertisement
ನಗರದ ದೇವರಾಜ ಅರಸು ಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿ ಕಾರ, ನ್ಯಾಯವಾದಿಗಳ ಸಂಘ, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಸರ್ಕಾರೇತರ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ಸಾಗಾಣಿಕೆ ಹಾಗೂ ವಾಣಿಜ್ಯಿಕ ಲೈಂಗಿಕ ಶೋಷಣೆ ಸಂತ್ರಸ್ತರ ಯೋಜನೆ-2015’ ಕುರಿತ ಕಾರ್ಯಕ್ರಮ ಹಾಗೂ ಪೊಲೀಸ್ ದೂರು ಪ್ರಾಧಿಕಾರ ಮತ್ತು ಸಂತ್ರಸ್ತರ ಪರಿಹಾರ ಯೋಜನೆ ಕುರಿತು ಕಾನೂನು ಸಾಕ್ಷರತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
Related Articles
Advertisement
ಇದೊಂದು ಹೀನ ಕೃತ್ಯವಾಗಿದ್ದು, ಪೊಲೀಸ್ ಠಾಣೆಗಳಲ್ಲಿ ದಾಖಲಾಗುವ ದೂರುಗಳಲ್ಲಿ ಶೇ. 60 ರಷ್ಟು ಹೆಣ್ಣು ಮಕ್ಕಳ ಸಾಗಾಣಿಕೆ ಪ್ರಕರಣಗಳಾಗಿವೆ. ಲೈಂಗಿಕ ಶೋಷಣೆಗೊಳಗಾದಾಗ ಮಹಿಳೆಯರು ಮತ್ತು ಮಕ್ಕಳು ಘಟನೆ ನಡೆದ 24 ತಾಸಿನಲ್ಲಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದರೆ ಅಂಥವರಿಗೆ ನ್ಯಾಯ ಒದಗಿಸಲಾಗುವುದು. ಇದು ಕೇವಲ ಸರ್ಕಾರದ ಕಾರ್ಯ ಮಾತ್ರವಲ್ಲದೇ ಸಮಾಜದ ಎಲ್ಲರೂ ಇಂತಹ ಘಟನೆ ವಿರುದ್ಧ ಹೋರಾಡಬೇಕು. ಜಾಗೃತಿ ಮೂಡಿಸಲು ಕೈಜೋಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅಶೋಕ ಸಿ. ನೀರಲಗಿ, ಕಾರ್ಯದರ್ಶಿ ದೇವರಾಜ ನಾಯ್ಡು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಂ.ಎನ್. ಮಾಳಗೇರ, ಎಎಸ್‌ಐ ಉದಯ ಕುಲಕರ್ಣಿ ಇದ್ದರು.ಶಿಶು ಅಭಿವೃದ್ಧಿ ಯೋಜನಾ ಧಿಕಾರಿ ಉಮಾ ಕೆ.ಎಸ್. ಸ್ವಾಗತಿಸಿದರು. ವಿನಯ ಗುಡಗೂರ ನಿರೂಪಿಸಿದರು.
ವೇಶ್ಯಾವಾಟಿಕೆ ಅಂತಾರಾಷ್ಟ್ರೀಯ ಮಟ್ಟದ ವೃತ್ತಿಯಾಗಿ ಬೆಳೆದಿದೆ. ತಿಳಿದೋ ತಿಳಿಯದೆಯೋ ಈ ವೃತ್ತಿಯಲ್ಲಿ ತೊಡಗಿಕೊಂಡವರು ಮರಳಿ ಆ ಜಗತ್ತಿನಿಂದ ಹೊರಬರುವುದು ಕಷ್ಟಸಾಧ್ಯ. ಲೈಂಗಿಕ ದೌರ್ಜನ್ಯ ಹಾಗೂ ಶೋಷಣೆಗೆ ಒಳಗಾದವರನ್ನು ಸಮಾಜದ ಮುಖ್ಯವಾಹಿನಿಗೆ ತಂದು, ಸಮಾಜದಲ್ಲಿ ಗೌರಯುತವಾಗಿ ಬಾಳಲು ಅವಕಾಶ ನೀಡುವುದು ಕಾನೂನು ಸೇವೆಗಳ ಪ್ರಾಧಿ ಕಾರದ ಉದ್ದೇಶ.ವೈ.ಎಲ್. ಲಾಡಖಾನ್, ನ್ಯಾಯಾಧೀಶರು ಉಪನ್ಯಾಸ
ವಕೀಲರಾದ ಎಂ.ಎಚ್. ವಾಲಿಕರ ಕಲಂ-357ಎ, ಪಿಸಿ ಮತ್ತು ಸಂತ್ರಸ್ತರ ಪರಿಹಾರಧನ ಯೋಜನೆ ಕುರಿತು, ಆಶಾಕಿರಣ ಸಂಸ್ಥೆಯ ಅಧ್ಯಕ್ಷ ಮುತ್ತುರಾಜ ಮಾದರ ಸಾಗಾಣಿಕೆ ಹಾಗೂ ವಾಣಿಜ್ಯಿಕ ಲೈಂಗಿಕ ಶೋಷಣೆ ಸಂತ್ರಸ್ತರ ಕಾಯಿದೆ-2015ರ ಕುರಿತು ಹಾಗೂ ಪಿಎಸ್‌ಐ ಮಾಲತೇಶ, ಪೊಲೀಸ್ ದೂರು ಪ್ರಾಧಿಕಾರ ರಚನೆ, ಮಹತ್ವ ಮತ್ತು ಅದರ ಕಾರ್ಯ ಚಟುವಟಿಕೆ ಕುರಿತು ಉಪನ್ಯಾಸ ನೀಡಿದರು.