Advertisement
ಕಣ್ವತೀರ್ಥ ಕುಂಡುಕೊಳಕೆ ಕಡಪ್ಪುರದಲ್ಲಿ ಸುಮಾರು ಐದು ವರ್ಷಗಳಿಂದ ಅಕ್ರಮ ಮರಳು ಸಾಗಾಟ ನಡೆಯುತ್ತಿದ್ದು, ಇದರ ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆಂದು ಆರೋಪಿಸಿ ಕುಂಡುಕೊಳಕೆ ಫೆಲಿಕ್ಸ್ ಡಿ’ಸೋಜಾ ಅವರ ಪತ್ನಿ ರೀಟಾರಿಗೆ ಐವರ ತಂಡ ಮನೆಗೆ ನುಗ್ಗಿ ಹಲ್ಲೆ ಮಾಡಿದ ಬಗ್ಗೆ ದೂರು ನೀಡಲಾಗಿದೆ. ಆಹಾರ ಸೇವಿಸುತ್ತಿದ್ದಾಗ ನುಗ್ಗಿದ ಐವರ ಪೈಕಿ ಇಬ್ಬರು ರೀಟಾರಿಗೆ ಕಲ್ಲಿನಿಂದ ಗುದ್ದಿರುವುದಾಗಿ ಆರೋಪಿಸಲಾಗಿದೆ. ತಡೆಯಲು ಬಂದ ಪತಿ ಮೇಲೂ ತಂಡ ಹಲ್ಲೆ ಮಾಡಿದೆ.
Related Articles
Advertisement
ಇಗರ್ಜಿಗೆ ಕಲ್ಲುಸೋಮವಾರ ಮುಂಜಾನೆ 3 ಗಂಟೆಗೆ ಬೈಕಿನಲ್ಲಿ ಬಂದ ಇಬ್ಬರು ಮಂಜೇಶ್ವರ ಇನ್‌ಫಂಟ್ ಜೀಸಸ್ ಇಗರ್ಜಿಗೆ ಕಲ್ಲೆಸೆದಿದ್ದು,ಕಿಟಕಿಯ ಗಾಜು ಹಾನಿಗೀಡಾಗಿದೆ. ಇವರು ತಲವಾರು ಸಹಿತ ಬೈಕಿನಲ್ಲಿ ಸಂಚರಿಸುವುದು ಹಾಗೂ ಆವರಣ ಗೋಡೆ ಹಾರಿ ಇಗರ್ಜಿಗೆ ಕಲ್ಲೆಸೆಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಂಜೇಶ್ವರ ಎಸ್‌ಐ ಅನೂಪ್, ಎಎಸ್‌ಐ ರಾಜೀವನ್, ಕಾನ್‌ಸ್ಟೆಬಲ್ ಸುನಿಲ್ ಕುಮಾರ್ ಅವರು ಇಗರ್ಜಿಯ ಫಾದರ್ ವಿನೋದ್ ವಿನ್ಸೆಂಟ್ ಸಲ್ದಾನ ಅವರಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಎಎಸ್‌ಪಿ ಡಿ.ಶಿಲ್ಪಾ ನೇತೃತ್ವದಲ್ಲಿ ಪೊಲೀಸ್ ತಂಡ ಕುಂಡುಕೊಳಕೆಗೆ ಆಗಮಿಸಿದ್ದು, ಪರಿ ಸ್ಥಿತಿಯ ಬಗ್ಗೆ ನಿಗಾ ಇರಿಸಿದೆ. ದಂಪತಿ ವಿರುದ್ಧವೂ ಹಲ್ಲೆ ದೂರು
ಈ ನಡುವೆ ತನ್ನ ತಾಯಿಯನ್ನು ಅಪಹಾಸ್ಯಗೈದ ಬಗ್ಗೆ ಪ್ರಶ್ನಿಸಲು ತೆರಳಿದಾಗ ರೀಟಾ ಸೌದೆಯಿಂದ ಹಲ್ಲೆ ಮಾಡಿರುವುದಾಗಿ ನೌಫಲ್ ನೀಡಿದ ದೂರಿನಂತೆ ರೀಟಾ ಹಾಗೂ ಫೆಲಿಕ್ಸ್ ವಿರುದ್ಧವೂ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಚರ್ಚ್‌ಗೆ ಕಲ್ಲೆಸೆತ ಖಂಡಿಸಿ ಸರ್ವಪಕ್ಷ ರ್ಯಾಲಿ
ಮಂಜೇಶ್ವರ: ಇಲ್ಲಿನ ಮಂಜೇಶ್ವರ ಮರ್ಸಿ ಅಮ್ಮನವರ ದೇವಾಲಯದ ಮೇಲಿನ ದಾಳಿಯನ್ನು ಖಂಡಿಸಿ ವಿವಿಧ ರಾಜಕೀಯ ಪಕ್ಷಗಳ ನೇತೃತ್ವದಲ್ಲಿ ಸೌಹಾರ್ದ ರ್ಯಾಲಿ ಹಾಗೂ ಪ್ರತಿಭಟನೆ ಜರಗಿತು. ಮಂಜೇಶ್ವರದಿಂದ ಪ್ರಾರಂಭ ಗೊಂಡ ಜಾಥಾವು ಮಂಜೇಶ್ವರ ಚರ್ಚ್ ಪರಿಸರದಲ್ಲಿ ಸಮಾಪ್ತಿಗೊಂ ಡಿತು. ಮಂಜೇಶ್ವರ ಬ್ಲಾಕ್ ಪಂಚಾ ಯತ್ ಅಧ್ಯಕ್ಷ ಎ.ಕೆ.ಎಂ.ಅಶ್ರಫ್ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ಕಾಸರಗೋಡು ಶಾಸಕ ಎನ್.ಎ. ನೆಲ್ಲಿಕುನ್ನು, ಮಂಜೇ ಶ್ವ ರದ ಮಾಜಿ ಶಾಸಕ ಸಿ.ಎಚ್. ಕುಂಞಂಬು, ಕಾಸರಗೋಡು ಜಿ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ.ವಿ. ಬಾಲಕೃಷ್ಣನ್ ಮಾಸ್ತರ್, ಬಿಜೆಪಿ ಮುಖಂಡ ಹರಿಶ್ಚಂದ್ರ ಮಂಜೇ ಶ್ವರ, ಸಿಪಿಐ ಮುಖಂಡ ಬಿ.ವಿ. ರಾಜನ್, ಯೂತ್ ಲೀಗ್ ಮುಖಂಡ ಸೈಫುಲ್ಲಾ ತಂಙಳ್, ಪಿಡಿಪಿ ಮುಖಂಡ ಎಸ್.ಎಂ.ಬಶೀರ್, ವೆಲ್ಫೆàರ್ ಪಾರ್ಟಿ ಮುಖಂಡ ಅಮ್ಮುಂಞಿ ಮುಂತಾದವರು ಮಾತನಾಡಿ ದರು. ಬ್ಲಾ. ಪಂ. ಸದಸ್ಯ ಕೆ.ಆರ್. ಜಯಾ ನಂದ ಸ್ವಾಗತಿಸಿದರು. ಮಂಜೇಶ್ವರ ಪಂ. ಅಧ್ಯಕ್ಷ ಅಬ್ದುಲ್ ಅಝೀಝ್ ವಂದಿಸಿದರು. ಚರ್ಚಿನ ಧರ್ಮ ಗುರು ರೆ| ಫಾ| ವಿನ್ಸೆಂಟ್ ವಿನೋದ್ ಸಲ್ದಾನ ಕೃತಜ್ಞತೆ ಸಲ್ಲಿಸಿದರು.