Advertisement

ಜರ್ಮನಿ ಏರ್‌ಪೋರ್ಟ್‌ನಲ್ಲಿ ಕನ್ನಡತಿಯನ್ನು ವಿವಸ್ತ್ರಗೊಳಿಸಿ ತಪಾಸಣೆ!

11:29 AM Apr 02, 2017 | |

 ಹೊಸದಿಲ್ಲಿ: ಭದ್ರತಾ ಪರಿಶೀಲನೆ ಹೆಸರಲ್ಲಿ  ಜರ್ಮನಿಯ ಪ್ರಾಂಕ್‌ಫ‌ರ್ಟ್‌ ವಿಮಾನ ನಿಲ್ದಾಣದಲ್ಲಿ  ಕನ್ನಡತಿ ಮಹಿಳೆಯೊಬ್ಬರನ್ನು ಭದ್ರತಾ ಸಿಬಂದಿಗಳು ವಿವಸ್ತ್ರಗೊಳಿಸಿ ತಪಾಸಣೆ 
ನಡೆಸಿದ ಅಮಾನವೀಯ ಘಟನೆ ನಡೆದಿದೆ.  ಈ ಬಗ್ಗೆ ತಕ್ಷಣ ವಿವರ ನೀಡುವಂತೆ ವಿದೇಶಾಂಗ
 ಸಚಿವೆ ಸುಷ್ಮಾ ಸ್ವರಾಜ್‌ ಅವರು ಭಾರತೀಯ ರಾಯಭಾರಿಗೆ ನಿರ್ದೇಶಿಸಿದ್ದಾರೆ. 

Advertisement

ಉದರ ಚಿಕಿತ್ಸೆಗೆಂದು ಜರ್ಮನಿಗೆ ತೆರಳಿದ್ದ  ಕನ್ನಡತಿ ಶೃತಿ ಬಸಪ್ಪ ಹೀನಾಯವಾಗಿ ಪರಿಶೀಲನೆಗೊಳಗಾದವರು. ಶೃತಿ  ಫೇಸ್‌ಬುಕ್‌ನಲ್ಲಿ ತನಗಾದ ಅವಮಾನವನ್ನು ಬಹಿರಂಗಪಡಿಸಿದ್ದರು. ದೇಹದ ಸ್ಕ್ಯಾನ್‌ ಆದ ಬಳಿಕವೂ ತನ್ನನ್ನು  ಯಾವ ದಾಖಲೆಗಳನ್ನು ತೋರಿಸಿದರೂ ಬಿಡದ ಭದ್ರತಾ ಸಿಬಂದಿಗಳು ಕೋಣೆಯೊಂದಕ್ಕೆ ಕರೆದೊಯ್ದು,ಮಗಳ ಎದುರೇ ವಿವಸ್ತ್ರಗೊಳಿಸಿ ತಪಾಸಣೆ  ನಡೆಸಿರುವುದಾಗಿ ಬರೆದಿದ್ದರು.

ನನ್ನನ್ನು  ಒಬ್ಬಳನ್ನೇ ಜನಾಂಗೀಯವಾಗಿ ಗುರುತಿಸಿ ಒಳಗೆ ಕರೊದೊಯ್ದು ಪರಿಶೀಲನೆ ನಡೆಸಿ ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ನನ್ನ ಪತಿಯನ್ನು ಒಳಗೆ ಕರೆಯಲೂ ಅವಕಾಶ ನೀಡಲಿಲ್ಲ ಎಂದಿದ್ದಾರೆ.

ಸಚಿವೆ ಸುಷ್ಮಾ ಸ್ವರಾಜ್‌ ಅವರು ಈ ಸುದ್ದಿಯನ್ನು ಟ್ಯಾಗ್‌ ಮಾಡಿ ರಾಯಭಾರಿ ಜನರಲ್‌ ರವೀಶ್‌ ಕುಮಾರ್‌ಗೆ ಟ್ವೀಟ್‌ ಮಾಡಿ ದಯವಿಟ್ಟು ಈ ಬಗ್ಗೆ ನನಗೆ ವರದಿ ನೀಡುವಂತೆ ಕೇಳಿಕೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next