ಬಲಿಯಾ: ಇಲ್ಲಿ ಮಂಗಳವಾರ ನಡೆದ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಅವರ ರ‍್ಯಾಲಿಯಲ್ಲಿ ಮುಸ್ಲಿಂ ಬಿಜೆಪಿ ಕಾರ್ಯಕರ್ತೆಯೊಬ್ಬರಿಗೆ ಪೊಲೀಸರು ಬುರ್ಖಾ ತೆಗೆಯಲು ಹೇಳಿದ ಘಟನೆ ನಡೆದಿದ್ದು, ಹೊಸದೊಂದು ವಿವಾದ ಹುಟ್ಟಿಕೊಂಡಿದೆ.
ಪೊಲೀಸರ ಕ್ರಮದ ವಿಡಿಯೋ ಚಿತ್ರೀಕರಣಗೊಂಡಿದ್ದು, ಬುರ್ಖಾ ಧರಿಸಿದ್ದ ಮಹಿಳೆಗೆ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಬುರ್ಖಾ ತೆಗೆಯುವಂತೆ ಸೂಚಿಸಿದ್ದಾರೆ. ಮಹಿಳೆ ಮತ್ತು ಆಕೆಯ ಪತಿ ಇಬ್ಬರೂ ಬಿಜೆಪಿ ಕಾರ್ಯಕರ್ತರು.
ಈ ಬಗ್ಗೆ ಎಸ್‌ಪಿ ಪ್ರತಿಕ್ರಿಯೆ ನೀಡಿದ್ದು ‘ಯಾರೊಬ್ಬರೂ ಸಿಎಂಗೆ ಕಪ್ಪು ಬಟ್ಟೆ ಪ್ರದರ್ಶಿಸಬಾರದು ಎಂದು ಪೊಲೀಸರು ಹೀಗೆ ಮಾಡಿರಬಹುದು. ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ’ಎಂದಿದ್ದಾರೆ.
‘ನನಗೆ ಪೊಲೀಸರು ಯಾಕೆ ಬುರ್ಖಾ ತೆಗೆಯಲು ಹೇಳಿದರು ಎಂದು ತಿಳಿಯಲಿಲ್ಲ’ ಎಂದು ಮಹಿಳೆ ಹೇಳಿಕೊಂಡಿದ್ದಾರೆ.
ಭಾನುವಾರ ಸಿಎಂ ಯೋಗಿ ಆದಿತ್ಯನಾಥ್‌ಗೆ ಮೀರತ್‌ನಲ್ಲಿ ಕಪ್ಪು ಬಾವುಟ ಪ್ರದರ್ಶಿಸಲಾಗಿದ್ದು, ಆ ಬಳಿಕ ಪೊಲೀಸರು ಬಿಗಿ ಕ್ರಮಗಳನ್ನು ಕೈಗೊಂಡಿದ್ದರು.