Advertisement

2 ಲಕ್ಷಕ್ಕೆ ತನ್ನ ಗಂಡು ಮಗು ಮಾರಿದ ಮಹಿಳೆ ಸಹಿತ ನಾಲ್ವರು ಅರೆಸ್ಟ್‌

11:31 AM Apr 07, 2018 | udayavani editorial |

ಪಣಜಿ : ತನ್ನ 11 ತಿಂಗಳ ಗಂಡು ಮಗುವನ್ನು ಎರಡು ಲಕ್ಷ ರೂ.ಗಳಿಗೆ ಮಾರಿದ 32ರ ಹರೆಯದ ಮಹಿಳೆಯನ್ನು ಗೋವೆಯ ಪೊಲೀಸರು ಬಂಧಿಸಿದ್ದಾರೆ.

Advertisement

ಮಗುವನ್ನು  ಮಾರಿದ  ಮಹಿಳೆಯನ್ನು ಶೈಲಾ ಪಾಟೀಲ್‌ ಎಂದು ಗುರುತಿಸಲಾಗಿದೆ. ಮಗುವನ್ನು ಖರೀದಿಸಿದ ಅಮ್‌ ಮೋರ್ಜೆ 32, ಶೈಲಾ ಪಾಟೀಲಳ ಸ್ನೇಹಿತ ಯೋಗೇಶ್‌ ಗೊಸಾವಿ 42 ಮತ್ತು ಅನಂತ ದಾಮಾಜಿ 34 ಎಂಬವರನ್ನು ಕೂಡ ಪೊಲೀಸರು ಮಗು ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಿದ್ದಾರೆ.

ಶೈಲಾ ಪಾಟೀಲಳ ಪತಿ ಪೊಲೀಸರಿಗೆ ಈ ಪ್ರಕರಣದ ಬಗ್ಗೆ ದೂರು ನೀಡಿದ್ದರು. ತಾನು ಊರಿಂದ ದೂರ ಹೋಗಿದ್ದಾಗ ಪತ್ನಿ ಈ ಕೃತ್ಯ ಎಸಗಿದ್ದಾಗಿ ಅವರು ದೂರಿನಲ್ಲಿ ಹೇಳಿದ್ದಾರೆ. ಅರೋಪಿಗಳೆಲ್ಲರೂ ಪೆರ್ನೆ ಪ್ರದೇಶದ ನಿವಾಸಿಗಳಾಗಿದ್ದಾರೆ. 

ಹಣದ ಆವಶ್ಯಕತೆ ಇದ್ದ ಶೈಲಾ ಪಾಟೀಲ್‌ ತನ್ನ ಪತಿಗೆ ಗೊತ್ತಾಗದಂತೆ ತನ್ನ 11 ತಿಂಗಳ ಗಂಡು ಮಗುವನ್ನು ಮಾರಿದ್ದಳು ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಪೋಂಡಾ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ಹರೀಶ್‌ ಮದಕಾಯಿಕರ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next