Advertisement

WIvsAFG; ಒಂದೇ ಓವರ್ ನಲ್ಲಿ 36 ರನ್ ಚಚ್ಚಿದ ನಿಕೋಲಸ್ ಪೂರನ್; ವಿಡಿಯೋ ನೋಡಿ

03:41 PM Jun 18, 2024 | Team Udayavani |

ಗ್ರಾಸ್ ಐಲೆಟ್: ಐಸಿಸಿ ಟಿ20 ವಿಶ್ವಕಪ್ 2024ರ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಭರ್ಜರಿ ಗೆಲುವು ಸಾಧಿಸಿದೆ. ನಿಕೋಲಸ್ ಪೂರನ್ ಅವರ ಬ್ಯಾಟಿಂಗ್ ಆರ್ಭಟಕ್ಕೆ ಬೆಚ್ಚಿದ ಅಫ್ಘಾನಿಸ್ತಾನ ತಂಡವು ಹೀನಾಯ ಸೋಲನುಭವಿಸಿದೆ.

Advertisement

ವಿಂಡೀಸ್ ವಿಕೆಟ್ ಕೀಪರ್ ಬ್ಯಾಟರ್ ಪೂರನ್ ಅವರು 98 ರನ್ ಗಳಿಸಿದರು. 53 ಎಸೆತ ಎದುರಿಸಿದ ಪೂರನ್ ಎಂಟು ಸಿಕ್ಸರ್ ಚಚ್ಚಿದರು. ಶತಕದ ಅಂಚಿನಲ್ಲಿದ್ದ ಪೂರನ್ ರನೌಟ್ ಗೆ ಬಲಿಯಾದರು.

ಅಫ್ಘಾನ್ ಬೌಲರ್ ಗಳನ್ನು ಬೆಂಡೆತ್ತಿದ ಪೂರನ್ ಮೈದಾನದ ಮೂಲೆ ಮೂಲೆಗೆ ಚೆಂಡನ್ನು ಅಟ್ಟಿದರು. ಅದರಲ್ಲೂ ವೆಸ್ಟ್ ಇಂಡೀಸ್ ನ ನಾಲ್ಕನೇ ಓವರ್ ನಲ್ಲಿ ಭರ್ಜರಿ ಬ್ಯಾಟ್ ಬೀಸಿದ ಪೂರನ್ ಆ ಓವರ್ ನಲ್ಲಿ 36 ರನ್ ಗಳಿಸಿದರು.

ಅಜ್ಮತುಲ್ಲಾ ಓಮರ್ ಝೈ ಎಸೆದ ಓವರ್ ನಲ್ಲಿ ನೋ ಬಾಲ್, ವೈಡ್ ಬೌಂಡರಿ ಸೇರಿ ಒಟ್ಟು 36 ರನ್ ಹರಿದು ಬಂತು. ಮೊದಲ ಎಸೆತಕ್ಕೆ ಸಿಕ್ಸರ್ ಬಂದರೆ, ಮುಂದಿನ ಎಸೆತ ನೋ ಬಾಲ್+ ಬೌಂಡರಿ, ಮುಂದಿನ ಎಸೆತ ವೈಡ್ ಬೌಂಡರಿ, ಮುಂದಿನ ಎಸೆತ ಡಾಟ್, ಮೂರು ಮತ್ತು ನಾಲ್ಕನೇ ಎಸೆತದಲ್ಲಿ ಬೌಂಡರಿ, ಐದು ಮತ್ತು ಆರನೇ ಎಸೆತಕ್ಕೆ ಸಿಕ್ಸರ್ ಗಳು ಬಂದವು. ಒಟ್ಟು ಈ ಓವರ್ ನಲ್ಲಿ 36 ರನ್ ವಿಂಡೀಸ್ ಖಾತೆಗೆ ಸೇರಿದವು.

Advertisement

ಇದಲ್ಲದೆ ಟಿ20 ವಿಶ್ವಕಪ್ ಇತಿಹಾಸಲ್ಲಿ ಅತಿ ಹೆಚ್ಚು ಪವರ್ ಪ್ಲೇ ರನ್ ಗಳಿಸಿದ ದಾಖಲೆಯನ್ನು ವೆಸ್ಟ್ ಇಂಡೀಸ್ ಬರೆಯಿತು. ವಿಂಡೀಸ್ ಈ ಪಂದ್ಯದಲ್ಲಿ ಮೊದಲ ಆರು ಓವರ್ ಗಳ್ಲಿ 92 ರನ್ ಕಲೆ ಹಾಕಿತು. ಈ ಹಿಂದೆ 2014ರ ವಿಶ್ವಕಪ್ ನಲ್ಲಿ ಐರ್ಲೆಂಡ್ ವಿರುದ್ದ ನೆದರ್ಲ್ಯಾಂಡ್ 91 ರನ್ ಗಳಿಸಿದ್ದು ದಾಖಲೆಯಾಗಿತ್ತು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ 20 ಓವರ್ ಗಳಲ್ಲಿ ಐದು ವಿಕೆಟ್ ಗೆ 218 ರನ್ ಗಳಿಸಿತು. ಗುರಿ ಬೆನ್ನತ್ತಿದ ಅಫ್ಘಾನ್ 16.2 ಓವರ್ ಗಳಲ್ಲಿ 114 ರನ್ ಮಾತ್ರ ಗಳಿಸಲು ಶಕ್ತವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next