ತುಮಕೂರು: ತಾಯಿಯೇ ಮೊದಲ ಗುರುವೆನ್ನುತ್ತೇವೆ. ಇತ್ತೀಚೆಗೆ ಹೆಣ್ಣಿನ ಸಬಲೀಕರಣವಾಗುತ್ತಿದ್ದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ತುಮಕೂರಿನ ಜಿಲ್ಲಾ ಆಸ್ಪತ್ರೆಯ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞ ವೈದ್ಯೆ ಡಾ. ಸೌಮ್ಯ ತಿಳಿಸಿದರು.
ತಾಲೂಕಿನ ಮಲ್ಲಸಂದ್ರ ಗ್ರಾಮದಲ್ಲಿರುವ ಮಹಾಲಕ್ಷ್ಮೀ ದೇವಸ್ಥಾನದ ಸಭಾಂಗಣದಲ್ಲಿ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮದ ಅಡಿ ಆಯೋಜಿಸಿದ್ದ ಬೆಂಗಳೂರಿನ ಕೃಷಿ ವಿವಿ ಆಹಾರ ವಿಜ್ಞಾನ ಹಾಗೂ ಪೋಷಣೆ ವಿಭಾಗ ಮತ್ತು ಬೆಂಗಳೂರಿನ ಇನ್ನರ್‌ವೀಲ್ ಕ್ಲಬ್ ಹಾಗೂ ತುಮಕೂರಿನ ಇನ್ನರ್ ವೀಲ್ ಕ್ಲಬ್ ಇವರ ಸಹಯೋಗದಲ್ಲಿ ನಡೆದ ಗರ್ಭಿಣಿ ಮಹಿಳೆಯರು ಹಾಲುಣಿಸುವ ತಾಯಂದಿರು ಹಾಗೂ ಶಿಶುಗಳ ಆರೋಗ್ಯ ತಪಾಸಣಾ ಶಿಬಿರ ದಲ್ಲಿ ಮಾತನಾಡಿದರು.
ತಾಯಿತನ ವಿಲ್ಲದೆ ಹೆಣ್ಣುತನ ಅಪೂರ್ಣವಾಗುತ್ತದೆ. ಈ ಕಾರಣದಿಂದಲೇ ಪ್ರತಿಯೊಂದು ಹೆಣ್ಣಿಗೆ ತಾಯಿಯಾಗಬೇಕೆಂದು ತುಂಬಾ ಆಸೆ ಇರುತ್ತದೆ. ಗರ್ಭಿಣಿಯಾ ದಾಗ ಹಲವಾರು ಉಪಯುಕ್ತ ವಿಷಯಗಳನ್ನು ತಿಳಿದುಕೊಂಡಿರಬೇಕು. ಗರ್ಭವತಿಯಾದ ಹೆಣ್ಣು ತನ್ನ ಆರೋಗ್ಯದ ಬಗ್ಗೆ ಗಮನ ಕೊಡಬೇಕು. ಗರ್ಭಿಣಿಯು ಪ್ರತಿದಿನ ಪೌಷ್ಟಿಕ ಆಹಾರವನ್ನು ಸೇವಿಸಬೇಕು ಎಂದರು. ಪೌಷ್ಟಿಕಾಂಶಯುಕ್ತ 300 ಕ್ಯಾಲೋರಿಯುಳ್ಳ ಆಹಾರಗಳನ್ನು ಸೇವಿಸಬೇಕು. ಅಂದರೆ ಗರ್ಭಿಣಿಯು ದಿನಕ್ಕೆ 4 ಸಲ ಊಟ ಮಾಡಬೇಕು. ಗರ್ಭಿಣಿಯರಲ್ಲಿ ಸಾಮಾನ್ಯವಾಗಿ ರಕ್ತ ಹೀನತೆ ಕಡಿಮೆಯಾಗುತ್ತದೆ. ರಕ್ತಹೀನತೆಯಿಂದ ಗರ್ಭಿಣಿ, ಶಿಶುವಿಗೆ ತೊಂದರೆಯಾಗುತ್ತದೆ. ಆದ್ದರಿಂದ ಗರ್ಭಿಣಿಯರು ಪ್ರತಿ ತಿಂಗಳು ಸ್ತ್ರೀ ರೋಗ ತಜ್ಞ ವೈದ್ಯರನ್ನು ಭೇಟಿ ಮಾಡಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಬೆಂಗಳೂರಿನ ಕೃಷಿ ವಿವಿ (ಜಿಕೆವಿಕೆ) ಪ್ರಾಧ್ಯಾಪಕರೂ ಹಾಗೂ ಈ ಶಿಬಿರದ ನಿರ್ದೇಶಕ ಡಾ. ಉಷಾ ರವೀಂದ್ರ ಮಾತನಾಡಿ, ಗರ್ಭಿಣಿಯರು, ಬಾಣಂತಿಯರು ಹಾಗೂ ಶಿಶುಗಳ ಆರೈಕೆ ಹಾಗೂ ಒಂದು ದಿನದ ಆರೋಗ್ಯ ತಪಾಸಣಾ ಶಿಬಿರ ನಡೆಸುವುದು. ಕಾರಣ ನಮ್ಮ ದೇಶದ ಬಹುತೇಕ ಶಿಶುಗಳು ಹಾಗೂ ಮಹಿಳೆಯರಲ್ಲಿ ಕಾಡುವ ರಕ್ತಹೀನತೆ ಮತ್ತು ರೋಗ ನಿರೋಧಕ ಶಕ್ತಿಯ ಕೊರತೆ ಕಂಡುಬರುತ್ತಿದ್ದು, ಆರೋಗ್ಯಕರ ಆಹಾರವನ್ನು ಮನೆಯಲ್ಲೆ ತಯಾರಿಸಬೇಕು ತಾಯಂದಿರು ಆರೋಗ್ಯ ವಾಗಿದ್ದರೆ ಮಕ್ಕಳೂ ಆರೋಗ್ಯವಾಗಿರುತ್ತಾರೆ ಎಂದರು. ಬೆಂಗಳೂರಿನ ಸೃಷ್ಟಿ ಆಯುರ್ವೆàದಾಲಯದ ವೈದ್ಯೆ ಡಾ. ಮೇಘ ಸಮಾರಂಭ ಉದ್ಘಾಟಿಸಿದರು.
ಇದನ್ನೂ ಓದಿ:ವರಿಷ್ಠರ ನಿರ್ಲಕ್ಷ್ಯದಿಂದ ಕೈ ತಪ್ಪಿದ ಗ್ರಾಪಂ ಸ್ಥಾನ
ಭಾಗವಹಿಸಿದ್ದ 60 ಮಹಿಳೆಯರಿಗೆ ಪೌಷ್ಟಿಕತೆಯ ಕಿಟ್ ಮತ್ತು ಮಾಹಿತಿಯ ಕೈಪಿಡಿಯನ್ನು ವಿತರಿಸಲಾಯಿತು. ಡಾ. ಉಷಾ ರವೀಂದ್ರ ಆಯೋಜಿಸಿದ್ದರು. ಇನ್ನರ್‌ವೀಲ್ ತುಮಕೂರಿನ ಕಾರ್ಯದರ್ಶಿ ಭಾಗ್ಯಲಕ್ಷ್ಮೀ ನಾಗರಾಜ್, ಇನ್ನರ್‌ವೀಲ್ ತುಮ ಕೂರಿನ ಅಧ್ಯಕ್ಷ ವೀಣಾ ಉಮಾಶಂಕರ್, ಆರ್. ವೈ ವಿನುತಾ. ಬೆಂಗಳೂರಿನ ಇನ್ನರ್ ವೀಲ್‌ನ ಎನ್.ಸೌಂದರ್ಯ, ಡಾ. ನಸ್ರಿàನ್, ಮಲ್ಲಸಂದ್ರ ಗ್ರಾ.ಪಂ. ಸದಸ್ಯ ಶಿವದಾನಪ್ಪ ಇತರರಿದ್ದರು