ಚಡಚಣ: ಹೊರ್ತಿ ಗ್ರಾಮ ರಾಷ್ಟ್ರೀಯ ಹೆದ್ದಾರಿ-52ರ ಪಕ್ಕದಲ್ಲಿದ್ದು ತಾಲೂಕಿನಲ್ಲಿಯೇ ದೊಡ್ಡ ಗ್ರಾಮ ಹಾಗೂ ಸುಕ್ಷೇತ್ರವಾಗಿದೆ. ವ್ಯಾಪಾರ ಶಿಕ್ಷಣದಲ್ಲಿ ಹೊರ್ತಿ ಮುಂಚೂಣಿಯಲ್ಲಿದೆ. ವಿಜಯಪುರದಿಂದ ಸೊಲ್ಲಾಪುರದವರೆಗೆ ಚತುಷ್ಪಥ ರಸ್ತೆ ಕಾಮಗಾರಿ ಆರಂಭವಾಗಿದ್ದು ಮುಗಿಯುವ ಹಂತದಲ್ಲಿದೆ. ಆದರೆ ರಸ್ತೆ ಗ್ರಾಮಕ್ಕೆ ಹೊಂದಿಕೊಂಡಿದ್ದು ಸುಸಜ್ಜಿತ ಬಸ್ ನಿಲ್ದಾಣ ಇಲ್ಲದಿರುವುದು ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಸಂಕಟ ತಂದಿದೆ.
ಪ್ರತಿ ಸೋಮವಾರದ ಬೃಹತ್ ಸಂತೆ ನಡೆಯುತ್ತಿದ್ದು ಭರ್ಜರಿ ವ್ಯಾಪಾರ ವಹಿವಾಟು ನಡೆಯುತ್ತಿದೆ. ಗ್ರಾಮದ ಅರ್ಧ ಭಾಗವನ್ನು ರಸ್ತೆ ನುಂಗಿದ್ದು. ಸಂತೆಗೆ ಅಡೆ-ತಡೆಯಾಗುತ್ತಿದೆ. ಜನ ನಿಬಿಡ ಪ್ರದೇಶವಾಗಿದ್ದು ಇಲ್ಲಿ ದಿನಂ ಪ್ರತಿ ಸಣ್ಣ-ಪುಟ್ಟ ಅಪಘಾತಗಳು ಜರುಗುತ್ತಿವೆ. ಗ್ರಾಮದ ಮುಂದಿನ ಭಾಗದಲ್ಲಿ ಬೃಹದಾಕಾರದ ಸೇತುವೆ ನಿರ್ಮಿಸಲಾಗಿದೆ. ಮೊದ ಮೊಲದು ಸೇತುವೆ ಕೆಳಗೆ ಬಸ್ ಸಂಚರಿಸುತ್ತಿದ್ದು ಈಗ ಸೇತುವೆ ಮೇಲೆ ಸಂಚರಿಸತೊಡಗಿವೆ. ಆದರೆ ವಿದ್ಯಾರ್ಥಿಗಳಿಗೆ ಸೇತುವೆ ಮೇಲೆ ಸಂಚರಿಸಲು ಸಾಧ್ಯವಾಗದೇ ರಸ್ತೆಯ ಮೇಲೆಯೇ ನಿಲ್ಲುವ ಪರಿಸ್ಥಿತಿ ಬಂದಿದೆ. ದಿನಂ ಪ್ರತಿ ಇದೇ ತೊಂದರೆಯಾಗುತ್ತಿದ್ದು. ಜನಪ್ರತಿನಿ ಧಿಗಳು, ಮೇಲಧಿ ಕಾರಿಗಳು ಗಮನ ಹರಿಸದಿರುವುದು ಸೋಜಿಗದ ಸಂಗತಿಯಾಗಿದೆ.
ಬಸ್ ನಿಲ್ದಾಣಕ್ಕೆ ಒತ್ತಾಯ
ಗ್ರಾಮಕ್ಕೆ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣವಾಗಬೇಕು. ಸಾರ್ವಜನಿಕರು, ವ್ಯಾಪಾರಿಗಳು, ವಿದ್ಯಾರ್ಥಿಗಳು ಈ ತೊಂದರೆಯಿಂದ ಮುಕ್ತರಾಗಬೇಕು. ಗ್ರಾಮವು ಇನ್ನೂವರೆಗೆ ನೂತನ ಬಸ್ ನಿಲ್ದಾಣವನ್ನು ಕಂಡಿಲ್ಲ. ಸಾರ್ವಜನಿಕರ ಸಮಸ್ಯೆಯನ್ನರಿತು ಸರಕಾರ ಬೇಗನೆ ಬಸ್ ನಿಲ್ದಾಣದ ವ್ಯವಸ್ಥೆ ಮಾಡಬೇಕೆಂದು ಗ್ರಾಮಸ್ಥರಾದ ಲಕ್ಷ್ಮಣ ಮಸಳಿಕೇರಿ, ಆನಂದ ಕಾಂಬಳೆ, ರಾಜು ವಡ್ಡರ, ಸಂಜು ಭೋಸ್ಲೆ, ಅಭಿಜಿತ ನಿರಾವರಿ, ರಮೇಶ ಲೋಣಿ ಆಗ್ರಹಿಸಿದ್ದಾರೆ.
ಹೊರ್ತಿ ಗ್ರಾಮದಲ್ಲಿ ಸುಸಜ್ಜಿತ ಬಸ್ ನಿಲ್ದಾಣವಿಲ್ಲದ ಕಾರಣ ಸಾರ್ವಜನಿಕರು, ವಿದ್ಯಾರ್ಥಿಗಳು ದಿನಂಪ್ರತಿ ಬಸ್‌ಗಾಗಿ ರಸ್ತೆಯಲ್ಲೇ ಕಾಯುವಂತಾಗಿದೆ. ಬಸ್‌ಗಾಗಿ ಕಾಯುತ್ತಿರುವ ವೇಳೆ ಅಪಘಾತಗಳು ನಡೆದಿವೆ. ಈ ಬಗ್ಗೆ ಜನಪ್ರತಿನಿಧಿ ಗಳಿಗೆ ಹಾಗೂ ಅಧಿಕಾರಿಗಳು ಬಸ್ ನಿಲ್ದಾಣ ನಿರ್ಮಿಸಲು ಕ್ರಮ ಕೈಗೊಂಡಿಲ್ಲ. ಕೂಡಲೇ ಇಲ್ಲಿ ಬಸ್ ನಿಲ್ದಾಣ ನಿರ್ಮಿಸದಿದ್ದರೆ ಉಗ್ರ ಹೋರಾಟ ಅನಿವಾರ್ಯ.
-ಶರಣಬಸು ಡೋಣಗಿ, ಗ್ರಾಮಸ್ಥ
-ಶಿವಯ್ಯ ಮಠಪತಿ