Advertisement

ವಿಶೇಷ ಸ್ಥಾನ ಹಿಂತೆಗೆತ “ದೊಡ್ಡ ತಪ್ಪು’: ಪಾಕ್‌ ಪ್ರಧಾನಿ

09:28 AM Feb 06, 2020 | Sriram |

ಇಸ್ಲಾಮಾಬಾದ್‌: ಜಮ್ಮು ಮತ್ತು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ಹಿಂಪಡೆಯುವ ಮೂಲಕ ಪ್ರಧಾನಿ ನರೇಂದ್ರ ಮೋದಿ “ದೊಡ್ಡ ತಪ್ಪು’ ಮಾಡಿದ್ದಾರೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಹೇಳಿದ್ದಾರೆ.

Advertisement

ಪಾಕ್‌ ಆಕ್ರಮಿತ ಕಾಶ್ಮೀರದ ಮುಜಾಫ‌ರಾಬಾದ್‌ ವಿಧಾನಸಭೆಯಲ್ಲಿ ಮಾತನಾಡಿದ ಖಾನ್‌, ಚುನಾವಣೆ ಸಂದರ್ಭದಲ್ಲಿ ಪಾಕಿಸ್ತಾನವನ್ನು ಹರಕೆಯ ಕುರಿಯಂತೆ ಬಳಸಿಕೊಂಡು ಭಾರೀ ಗೆಲುವು ದಾಖಲಿಸಿದ ಮೋದಿ, ಈಗ ತಿದ್ದಿಕೊಳ್ಳಲಾಗದಂತಹ ತಪ್ಪು ಮಾಡಿದ್ದಾರೆ.

ಹಾಗೇ ಈಗ ಹಿಂದೂ ರಾಷ್ಟ್ರೀಯವಾದದ “ಜೀನಿ’ ಬಾಟಲಿಯಿಂದ ಹೊರಬಂದಿದ್ದು, ಅದನ್ನು ಮತ್ತೆ ಬಾಟಲಿಯೊಳಗೆ ಹಾಕಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಭಾರತದ ಇಂತಹ ತಪ್ಪುಗಳೇ “ಕಾಶ್ಮೀರ ಸ್ವತಂತ್ರಗೊಳ್ಳಲು ಕಾರಣವಾಗಲಿವೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next