Advertisement

ಅಗತ್ಯ ವಸ್ತುಗಳ ಮೇಲಿನ ಜಿಎಸ್‌ಟಿ ಹಿಂಪಡೆಯಲಿ

03:47 PM Jul 23, 2022 | Team Udayavani |

ರಾಯಚೂರು: ಆಹಾರ ಪದಾರ್ಥ ಹಾಗೂ ಅಗತ್ಯ ವಸ್ತುಗಳ ಮೇಲೆ ಜಿಎಸ್‌ಟಿ ವಿ ಧಿಸಿರುವ ಕ್ರಮವನ್ನು ಖಂಡಿಸಿ ಶುಕ್ರವಾರ ಎಸ್‌ಯುಸಿಐ(ಸಿ) ಸಂಘಟನೆ ಕಾರ್ಯಕರ್ತರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

Advertisement

ಜಿಎಸ್‌ಟಿ ಪ್ರತಿಯ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಬಳಿಕ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು. ದಿನಬಳಕೆ ವಸ್ತುಗಳ ಮೇಲೆಯೂ ಶೇ.5ರಷ್ಟು ತೆರಿಗೆ ವಿಧಿಸಿದ ಕ್ರಮ ಸರಿಯಲ್ಲ. ಜನರಿಗೆ ಬೆಲೆ ಏರಿಕೆ ಸಮಸ್ಯೆಯಿಂದ ಹೊರಬರಲು ಆಗುತ್ತಿಲ್ಲ. ಜನರ ತಲಾದಾಯ ಮಾತ್ರ ಹೆಚ್ಚಾಗಿಲ್ಲ. ಪ್ರತಿ ವಸ್ತುವಿನ ಮೇಲೆ ಜಿಎಸ್‌ಟಿ ಹಾಕಿದರೆ ಬಡವರು ಏನಾಗಬೇಕು ಎಂದು ಪ್ರಶ್ನಿಸಿದರು.

ಕೇಂದ್ರ ಸರ್ಕಾರ ಆಹಾರ ಪದಾರ್ಥಗಳ ವ್ಯಾಪಾರದಲ್ಲೂ ಕಾರ್ಪೋರೇಟ್‌ ಕಂಪೆನಿಗಳ ಪರ ಯೋಚಿಸುತ್ತಿದೆ. ಕೂಡಲೇ ಈ ತೆರಿಗೆ ರದ್ದುಗೊಳಿಸಬೇಕು. ಇಲ್ಲವಾದರೆ ಇನ್ನೂ ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಂಘಟನೆ ಮುಖಂಡರಾದ ಮಹೇಶ ಚೀಕಲಪರ್ವಿ, ಎನ್‌.ಎಸ್‌. ವೀರೇಶ, ಅಣ್ಣಪ್ಪ, ಮಲ್ಲನಗೌಡ, ಕಾರ್ತಿಕ, ಹಯ್ನಾಳಪ್ಪ, ಪೀರಸಾಬ್‌, ವಿನೋದ ಸೇರಿ ಅನೇಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next