Advertisement

ಫೇಕ್‌ ನ್ಯೂಸ್‌: ಮಾರ್ಗದರ್ಶಿ ಸೂತ್ರ ಹಿಂಪಡೆಯಲು ಪ್ರಧಾನಿ ಮೋದಿ ಸೂಚನೆ

04:06 PM Apr 03, 2018 | udayavani editorial |

ಹೊಸದಿಲ್ಲಿ : ಫೇಕ್‌ ನ್ಯೂಸ್‌ಗೆ ಅಂಕುಶ ಹಾಕುವ ಮಾರ್ಗದರ್ಶಿ ಸೂತ್ರಗಳನ್ನು ಒಳಗೊಂಡ ಪತ್ರಿಕಾ ಪ್ರಕಟನೆಯನ್ನು ಹಿಂಪಡೆಯುವಂತೆ ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ.

Advertisement

ಫೇಕ್‌ ನ್ಯೂಸ್‌ ನಿರ್ಬಂಧಿಸುವ ವಿಷಯವನ್ನು ಭಾರತದ ಪ್ರಸ್‌ ಕೌನ್ಸಿಲ್‌ ಮಾತ್ರವೇ ನಿಭಾಯಿಸಬೇಕಾಗುತ್ತದೆ ಎಂದವರು ಹೇಳಿದ್ದಾರೆ.

ವಾರ್ತಾ ಮತ್ತು ಪ್ರಸಾರ ಸಚಿವಾಲಯ ನಿನ್ನೆ ಸೋಮವಾ ರ ಫೇಕ್‌ ನ್ಯೂಸ್‌ಗಳನ್ನು ನಿಯಂತ್ರಿಸುವ ವಿಚಾರದಲ್ಲಿ ಅಕ್ರೆಡಿಟೇಶನ್‌ (ಮಾನ್ಯತೆ ನೀಡಲ್ಪಟ್ಟ) ಪತ್ರಕರ್ತರಿಗೆ ಮಾರ್ಗದರ್ಶಿ ಸೂತ್ರಗಳನ್ನು ಜಾರಿ ಮಾಡಿತ್ತು. 

ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಈಚಿನ ದಿನಗಳಲ್ಲಿ ಫೇಕ್‌ ನ್ಯೂಸ್‌ ಪ್ರಕರಣಗಳು ಒಂದೇ ಸಮನೆ ಹೆಚ್ಚುತ್ತಿರುವುದನ್ನು ಗಮನಿಸಿ ಸರಕಾರ ಮಾನ್ಯತೆ ಪಡೆದ ಪತ್ರಕರ್ತರ ಮಾರ್ಗದರ್ಶಿ ಸೂತ್ರಗಳಿಗೆ ತಿದ್ದುಪಡಿಯನ್ನು ತರಲು ಬಯಸಿದೆ ಎಂದು ವಾರ್ತಾ ಮತ್ತು ಪ್ರಸಾರ ಸಚಿವಾಲಯ ತನ್ನ ಪತ್ರಿಕಾ ಪ್ರಕಟನೆಯಲ್ಲಿ ಹೇಳಿತ್ತು. 

ಫೇಕ್‌ ನ್ಯೂಸ್‌ ದೃಢಪಟ್ಟಲ್ಲಿ ಮೊದಲ ಉಲ್ಲಂಘನೆಗಾಗಿ ಅಕ್ರೆಡಿಟೇಶನ್‌ ಪತ್ರಕರ್ತರಿಗೆ ಆರು ತಿಂಗಳ ಅಮಾನತು ಶಿಕ್ಷೆ, ಎರಡನೇ ಉಲ್ಲಂಘನೆಗೆ ಒಂದು ವರ್ಷ ಅಮಾನತು ಮತ್ತು 3ನೇ ಉಲ್ಲಂಘನೆಗೆ ಶಾಶ್ವತ ಅಕ್ರೆಡಿಟೇಶನ್‌ ರದ್ದತಿಯ ಶಿಕ್ಷೆಯನ್ನು ಪ್ರಕಟಿಸಲಾಗಿತ್ತು. 

Advertisement
Advertisement

Udayavani is now on Telegram. Click here to join our channel and stay updated with the latest news.

Next