Advertisement

ATM Express ನನ್ನು ಬಿಡುಗಡೆಗೊಳಿಸಿದೆ ಎಂಸ್ವೈಪ್..! ಏನಿದು..? ಪೂರ್ಣ ಮಾಹಿತಿ ಇಲ್ಲಿದೆ

11:27 AM Mar 16, 2021 | Team Udayavani |

ನವ ದೆಹಲಿ : ಹಣಕಾಸು ಸೇವೆಗಳ ಪ್ಲ್ಯಾಟ್ ಫಾರ್ಮ್ ಆದ ಎಂಸ್ವೈಪ್ ಎಟಿಎಂ ಎಕ್ಸ್‌ಪ್ರೆಸ್ ಎಂಬ ಸೇವೆಯನ್ನು ಪ್ರಾರಂಭಿಸಿದೆ. ಈಗ, ನೀವು ವ್ಯಾಪಾರಿ ಅಂಗಡಿಯಲ್ಲಿ ಹಣವನ್ನು ಹಿಂಪಡೆಯಬಹುದು. ಪಾಯಿಂಟ್-ಆಫ್-ಸೇಲ್ (ಪಿಒಎಸ್) ಟರ್ಮಿನಲ್ ಅನ್ನು ಬಳಸಿಕೊಂಡು ಗ್ರಾಹಕರಿಗೆ ಹಣವನ್ನು ಹಿಂಪಡೆಯಲು ಮತ್ತು ಬ್ಯಾಲೆನ್ಸ್ ನ್ನು ಪರಿಶೀಲಿಸಲು ಈ ಸೇವೆ ಅನುಮತಿಸುತ್ತದೆ.

Advertisement

ಕೆಲವು ಬ್ಯಾಂಕುಗಳು ಈಗಾಗಲೇ ಇಂತಹ ಮೈಕ್ರೋ ಎ ಟಿ ಎಮ್ ಸೇವೆಗಳನ್ನು ನೀಡಿದ್ದು. ಆದರೆ ಎಂಸ್ವೈಪ್ ಬಳಸುವ ವ್ಯಾಪಾರಿಗಳಿಗೆ, ಸೇವೆಯು ಬ್ಯಾಂಕ್ ಆಗ್ನೋಸ್ಟಿಕ್ ಆಗಿರುತ್ತದೆ.

ಈ ಸೇವೆಯು ಪ್ಯಾನ್-ಇಂಡಿಯಾದಲ್ಲಿ ಕಾರ್ಯನಿರ್ವಹಿಸಲಿದ್ದು, ಎಂಸ್ವೈಪ್ ಶ್ರೇಣಿ -2, ಶ್ರೇಣಿ -3 ಮತ್ತು ಶ್ರೇಣಿ -4 ನಗರಗಳ ಮೇಲೆ ಸೀಮಿತ ಎಟಿಎಂ ಸೌಲಭ್ಯಗಳು ಮತ್ತು ಬ್ಯಾಂಕ್ ಶಾಖೆಗಳನ್ನು ಕೇಂದ್ರೀಕರಿಸಿದೆ.

ಓದಿ : ಕಳೆದ ಎರಡು ವರ್ಷಗಳಿಂದ 2000 ರೂ. ನೋಟು ಮುದ್ರಿಸಿಲ್ಲ: ಕೇಂದ್ರ ಸರ್ಕಾರ

ಜೂನ್ 2020 ರವರೆಗೆ, ಭಾರತದಲ್ಲಿ ಅಂದಾಜು 84 ಕೋಟಿ ಡೆಬಿಟ್ ಕಾರ್ಡ್‌ದಾರರು ಮತ್ತು ಸುಮಾರು 2.10 ಲಕ್ಷ ಆನ್‌ ಸೈಟ್ ಮತ್ತು ಆಫ್‌ ಸೈಟ್ ಎ ಟಿ ಎಮ್ ಗಳು ಇದ್ದವು. ಸರಾಸರಿ, 4,000+ ಡೆಬಿಟ್ ಕಾರ್ಡುದಾರರಿಗೆ ಒಂದು ಎಟಿಎಂ ಇದೆ ಎಂದು ಆರ್ ಬಿ ಐ ಹೇಳಿದೆ.

Advertisement

ಪಿ ಒ ಎಸ್(point of sale) ಟರ್ಮಿನಲ್ ಗಳನ್ನು ನಗದು ಹಿಂಪಡೆಯಲು ಬಳಸಬಹುದು ಎಂದು ಕೇಂದ್ರ ಬ್ಯಾಂಕ್ ಕಳೆದ ಮೇ ನಲ್ಲಿ ಪುನರುಚ್ಚರಿಸಿತ್ತು. ಇದು ಡೆಬಿಟ್ ಕಾರ್ಡ್‌ಗಳು ಮತ್ತು ಪ್ರಿಪೇಯ್ಡ್ ಉಪಕರಣಗಳ ಮೂಲಕ ಹಣವನ್ನು ಹಿಂಪಡೆಯಲು ಅವಕಾಶ ಮಾಡಿಕೊಟ್ಟಿತ್ತು. ಕ್ರೆಡಿಟ್ ಕಾರ್ಡ್‌ನಿಂದ ನಗದು ಹಿಂಪಡೆಯಲು ಅನುಮತಿ ಇಲ್ಲ. ಪಿ ಒ ಎಸ್ ಟರ್ಮಿನಲ್ ನಿಂದ ಉತ್ಪತ್ತಿಯಾದ ಮುದ್ರಿತ ರಶೀದಿಯನ್ನು ವ್ಯಾಪಾರಿ ಒದಗಿಸಬೇಕು ಎಂದು ಆರ್ ಬಿ ಐ ಹೇಳಿದೆ.

ಈ ವಿಚಾರದಲ್ಲಿ ಯಾವುದೇ ಸಮಸ್ಯೆಗಳಿದ್ದಲ್ಲಿ, ಕಾರ್ಡ್‌ಹೋಲ್ಡರ್ ಕಾರ್ಡ್ ನೀಡುವವರೊಂದಿಗೆ ದೂರು ನೀಡಬೇಕು. ಒಂದು ವೇಳೆ ಕಾರ್ಡ್ ನೀಡುವವರು(card issuer) ನಿಗದಿತ ಸಮಯದೊಳಗೆ ಪ್ರತಿಕ್ರಿಯಿಸದಿದ್ದಲ್ಲಿ ಅಥವಾ ಸ್ವೀಕರಿಸಿದ ಉತ್ತರ ತೃಪ್ತಿಕರವಾಗಿಲ್ಲದಿದ್ದರೆ, ಆರ್‌ ಬಿ ಐನ ಅಧಿಸೂಚನೆಯ ಪ್ರಕಾರ, ಕಾರ್ಡ್‌ಹೋಲ್ಡರ್ ಡಿಜಿಟಲ್ ವಹಿವಾಟುಗಳಿಗಾಗಿ ಬ್ಯಾಂಕಿಂಗ್ ಒಂಬುಡ್ಸ್ಮನ್ ಯೋಜನೆ ಅಥವಾ ಓಂಬುಡ್ಸ್ಮನ್ ಯೋಜನೆಗೆ ದೂರು ನೀಡಬಹುದಾಗಿದೆ.

ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಗ್ರಾಹಕರು ಎಟಿಎಂ ಎಕ್ಸ್‌ಪ್ರೆಸ್‌ನಿಂದ ದಿನಕ್ಕೆ ಎರಡು ಬಾರಿ ಗರಿಷ್ಠ ₹ 10,000 ಹಿಂಪಡೆಯಬಹುದು ಎಂದು ಎಂ ಸ್ವೈಪ್ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಓದಿ : ಹೆಚ್ಚುತ್ತಿದೆ ಕೋವಿಡ್ ಭೀತಿ: ಪ್ರೇಕ್ಷಕರಿಲ್ಲದೆ ನಡೆಯಲಿದೆ ಇಂಗ್ಲೆಂಡ್ ವಿರುದ್ಧದ ಸರಣಿ!

Advertisement

Udayavani is now on Telegram. Click here to join our channel and stay updated with the latest news.

Next