ನವದೆಹಲಿ:ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 39,796 ನೂತನ ಕೋವಿಡ್ 19 ಸೋಂಕು ಪ್ರಕರಣ ವರದಿಯಾಗಿದ್ದು, ದೇಶದಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 4.82ಲಕ್ಷಕ್ಕೆ ಇಳಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸೋಮವಾರ(ಜುಲೈ 05) ಬಿಡುಗಡೆಗೊಳಿಸಿದ ಅಂಕಿಅಂಶದಲ್ಲಿ ತಿಳಿಸಿದೆ.
ಇದನ್ನೂ ಓದಿ:ಡೀಲ್ ನಡೆಯುವುದು ಕಾವೇರಿ ನಿವಾಸದ ಹಿಂಭಾಗದಲ್ಲಿ: ವಿಜಯೇಂದ್ರ ವಿರುದ್ದ ಗುಡುಗಿದ ಯತ್ನಾಳ್
ದೇಶದಲ್ಲಿ ವಾರದ ಪಾಸಿಟಿವಿಟಿ ದರ 2.40ರಷ್ಟಿದ್ದು, ದಿನಂಪ್ರತಿ ಪಾಸಿಟಿವಿಟಿ ದರ 2.61ಕ್ಕೆ ಇಳಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ವಿವರಿಸಿದೆ. ಕಳೆದ 24ಗಂಟೆಯಲ್ಲಿ 723 ಮಂದಿ ಕೋವಿಡ್ 19 ಸೋಂಕಿನಿಂದ ಮೃತಪಟ್ಟಿದ್ದು, ಏತನ್ಮಧ್ಯೆ 42,352 ಮಂದಿ ಕೋವಿಡ್ ನಿಂದ ಚೇತರಿಸಿಕೊಂಡಿದ್ದಾರೆ.
ಈವರೆಗೆ ಭಾರತದಲ್ಲಿ ಒಟ್ಟು ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 4,02,728ಕ್ಕೆ ಏರಿಕೆಯಾಗಿದೆ. ಅಲ್ಲದೇ ಕೋವಿಡ್ ನಿಂದ 2,97,00,430 ಮಂದಿ ಗುಣಮುಖರಾಗಿದ್ದಾರೆ. ದೇಶಾದ್ಯಂತ ಭಾನುವಾರದವರೆಗೆ 35.28 ಕೋಟಿ ಡೋಸ್ ಗಳಷ್ಟು ಲಸಿಕೆ ನೀಡಲಾಗಿದೆ ಎಂದು ತಿಳಿಸಿದೆ.
ಕೋ ವಿನ್ ಆ್ಯಪ್ ವಿದೇಶಗಳಲ್ಲಿಯೂ ಲಸಿಕೆ ಕಾರ್ಯಕ್ರಮ ನಿರ್ವಹಿಸುವ ನಿಟ್ಟಿನಲ್ಲಿ ಯಾವ ದೇಶಗಳಲ್ಲಿ ಬೇಕಾದರು ಲಭ್ಯವಾಗುವಂತೆ ಮಾಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಿರ್ಧರಿಸಿರುವುದಾಗಿ ವರದಿ ಹೇಳಿದೆ.