ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿಕೊಡುವ ರೇಡಿಯೊ ಕಾರ್ಯಕ್ರಮ “ಮನ್ ಕಿ ಬಾತ್’ನ 100ನೇ ಸಂಚಿಕೆ ಏ.30ರಂದು ಪ್ರಸಾರವಾಗಲಿದೆ.
Advertisement
ಈ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮದಿಂದ ದೇಶದಲ್ಲಿ ಆಗುವ ಪರಿರ್ವತೆಯ ಬಗ್ಗೆ ಆಲ್ ಇಂಡಿಯಾ ರೇಡಿಯೊ ಬುಧವಾರ ವಿಶೇಷ ಅಭಿಯಾನ ಆರಂಭಿಸಲಿದೆ.
ಮಾ.15ರಿಂದ ಏ.29ರವರೆಗೆ ಈ ಅಭಿಯಾನ ನಡೆಯಲಿದೆ. “ಮನ್ ಕಿ ಬಾತ್’ನ ಪ್ರತಿ ಸಂಚಿಕೆಯ ಪ್ರಧಾನಿ ನರೇಂದ್ರ ಮೋದಿ ಅವರ ಸಂಬಂಧಿತ ಧ್ವನಿ ಬೈಟ್‌ಗಳನ್ನು ಬುಲೆಟಿನ್‌ಗಳು ಮತ್ತು ಆಲ್ ಇಂಡಿಯಾ ರೇಡಿಯೊ ಜಾಲದ ಇತರೆ ಕಾರ್ಯಕ್ರಮಗಳಲ್ಲಿ ಪ್ರಸಾರ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.