Advertisement

ರಾಮ್ ರಹೀಂ ದೋಷಿಯೋ, ಖುಲಾಸೆಯೋ? 200 ಕಾರುಗಳ ಬೆಂಗಾವಲು ಪಡೆ

11:36 AM Aug 25, 2017 | Sharanya Alva |

ನವದೆಹಲಿ: ದೇಶದ ಖ್ಯಾತ ಧಾರ್ಮಿಕ ನಾಯಕ, ಸ್ವಘೋಷಿತ ದೇವಮಾನವ, ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್‌ ರಾಮ್‌ ರಹೀಂ ಸಿಂಗ್‌ ವಿರುದ್ಧದ ಅತ್ಯಾಚಾರ ಪ್ರಕರಣದ ತೀರ್ಪನ್ನು ಶುಕ್ರವಾರ ಹರ್ಯಾಣದ ಪಂಚಕುಲಾ ಸಿಬಿಐ ವಿಶೇಷ ನ್ಯಾಯಾಲಯ ಪ್ರಕಟಿಸಲಿರುವ ಹಿನ್ನೆಲೆಯಲ್ಲಿ ರಾಮ್ ರಹೀಂ ಸಿಂಗ್ ಸುಮಾರು 200ಕ್ಕೂ ಅಧಿಕ ಬೆಂಗಾವಲು ಕಾರುಗಳ ಭದ್ರತೆಯೊಂದಿಗೆ ನ್ಯಾಯಾಲಯಕ್ಕೆ ತೆರಳುತ್ತಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

Advertisement

ಹರ್ಯಾಣ, ಪಂಜಾಬ್‌ ರಾಜ್ಯಾದ್ಯಂತ ಕೋಟ್ಯಂತರ ಅನುಯಾಯಿಗಳನ್ನು ಹೊಂದಿರುವ ರಾಮ್‌ ರಹೀಂ ವಿರುದ್ಧ ತೀರ್ಪು ಪ್ರಕಟವಾದಲ್ಲಿ ಭಾರೀ ಹಿಂಸಾಚಾರ ಆಗುವ ಸಾಧ್ಯತೆಗಳಿದ್ದು, ಮುಂಜಾಗ್ರತಾ ಕ್ರಮವಾಗಿ ಎರಡೂ ರಾಜ್ಯಗಳಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿ ಸ ಲಾ ಗಿದೆ. ಸೂಕ್ಷ್ಮಪ್ರದೇ ಶಗಳಲ್ಲಿ ಒಟ್ಟಾರೆ 18 ಸಾವಿರ ಅರೆ ಸೇನಾ ಪಡೆ  ಯೋಧರನ್ನು ಹಾಗೂ 53 ಸಾವಿರ ಪೊಲೀಸರನ್ನು ನಿಯೋ ಜಿ ಸ ಲಾ ಗಿ ದೆ ಎಂದು ವರದಿ ತಿಳಿಸಿದೆ.

ರಾಮ್ ರಹೀಂ ಸಿಂಗ್ ಅನುಯಾಯಿಗಳ ಗೋಳಾಟ, ಕಿರುಚಾಟ ಮುಗಿಲು ಮುಟ್ಟಿದೆ, ತೀರ್ಪು ಹೊರಬೀಳುವವರೆಗೂ ತಾವು ಪಂಚಕುಲ ಬಿಟ್ಟು ತೆರಳುವುದಿಲ್ಲ ಎಂದು ಲಕ್ಷಾಂತರ ಅನುಯಾಯಿಗಳು ಪಟ್ಟು ಹಿಡಿದಿದ್ದಾರೆ. ಭಕ್ತರು ಶಾಂತಿ, ಸುವ್ಯವಸ್ಥೆ ಕಾಪಾಡಬೇಕೆಂದು ರಾಮ್ ರಹೀಮ್ ವಿಡಿಯೋ, ಸಾಮಾಜಿಕ ಜಾಲತಾಣಗಳ ಮೂಲಕ ಮನವಿ ಮಾಡಿಕೊಂಡರು ಯಾವುದೇ ಪ್ರಯೋಜನವಾಗಿಲ್ಲ. 

ಮಧ್ಯಾಹ್ನ 2.30ರ ಹೊತ್ತಿಗೆ ತೀರ್ಪು ಹೊರಬೀಳುವ ನಿರೀಕ್ಷೆ ಇದೆ. ಹಾಗಾಗಿ ಡೇರಾ ಬಾಬಾ ರಾಮ್ ರಹೀಂಗೆ ಜೈಲಾ ಅಥವಾ ಖುಲಾಸೆಯೋ ಎಂಬುದು ಬಹಿರಂಗವಾಗಲಿದೆ. ಮಧ್ಯಾಹ್ನ 1.30ಕ್ಕೆ ಡೇರಾ ಬಾಬಾ ಕೋರ್ಟ್ ತಲುಪುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next