Advertisement
ಯುನೆಸ್ಟೋ ಪಟ್ಟಿಗೆ ಸೇರಿರುವ ಹಂಪಿ, ಕಣ್ಮನ ಸೆಳೆ ಯುವ ಪ್ರಸಿದ್ಧ ದೂದ್ ಸಾಗರ್ ಜಲಪಾತ, ರಾಮ ನಗರ ಬೆಟ್ಟ ಹಾಗೂ ಆಸುಪಾಸು ಇರುವ 70ರ ದಶಕ ದಲ್ಲಿ ಶೋಲೆ ಚಿತ್ರೀಕರಣವೂಗೊಂಡಿದ್ದ ಜಾಗ ಸೇರಿದಂತೆ ಹಲವು ಕಡೆಗಳಲ್ಲಿ ವಿಸ್ಟಾಡೋಮ್ ಬೋಗಿ ಗಳನ್ನು ಪರಿಚಯಿಸಲು ನೈರುತ್ಯ ರೈಲ್ವೆ ಯೋಜನೆ ರೂಪಿಸಿದೆ. ಈ ಸಂಬಂಧ ನೈರುತ್ಯ ರೈಲ್ವೆಯು ಕೇಂದ್ರಕ್ಕೆ ಸುಮಾರು 20ಕ್ಕೂ ಅಧಿಕ ವಿಸ್ಟಾಡೋಮ್ ಬೋಗಿಗಳಿ ಗಾಗಿ ಪ್ರಸ್ತಾವನೆ ಕೂಡ ಸಲ್ಲಿಸಲಾಗಿದೆ.
Related Articles
Advertisement
ಅಲ್ಲದೆ, ರಾಮನಗರ ಆಸುಪಾಸು ಮನಸ್ಸಿಗೆ ಮುದ ನೀಡುವ ದೃಶ್ಯಗಳೂ ಇವೆ. ಈ ಎಲ್ಲ ಕಾರಣಗಳಿಂದ ಅಲ್ಲಿ ಪರಿಚಯಿಸುವ ಯೋಚನೆ ಇದೆ. ಆದರೆ, ಇದೆಲ್ಲವೂ ಅಷ್ಟು ಸುಲಭವಾಗಿಯೂ ಇಲ್ಲ. ಯಾಕೆಂದರೆ, ಕೆಲವೆಡೆ ಐಸಿಎಫ್ (ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ) ಬೋಗಿಗಳಿವೆ. ಅವುಗಳನ್ನು ಎಲ್‌ಎಚ್‌ಬಿ (ಲಿಂಕೆ ಹಾಫ್¾ನ್ ಬುಷ್ )ಗೆ ಪರಿವರ್ತಿಸಬೇಕಿದೆ.
ಹೀಗೆ ಪರಿವರ್ತಿಸುವುದರ ಜತೆಗೆ ಉಳಿದ ವಲಯಗಳೊಂದಿಗೆ ಸಮನ್ವಯ ಸಾಧಿಸಬೇಕಾಗುತ್ತದೆ ಎಂದು ಬೆಂಗಳೂರು ರೈಲ್ವೆ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದರು. ಪ್ರಸ್ತುತ ಯಶವಂತಪುರ- ಮಂಗಳೂರು ನಡುವೆ ಕಾರ್ಯಾಚರಣೆ ಮಾಡುವ ವಿಸ್ಟಾಡೋಮ್ ಬೋಗಿಗಳ ಆಸನಗಳು ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ನೂರರಷ್ಟು ಭರ್ತಿಯಾಗಿವೆ. ತಲಾ ಬೋಗಿ 44 ಸೀಟುಗಳನ್ನು ಒಳಗೊಂಡಿದ್ದು ಪ್ರಯಾಣ ದರ ಪ್ರತಿ ಸೀಟಿಗೆ 1,395 ರೂ. ಇದೆ.
ವಿಸ್ಟಾಡೋಮ್ ವಿಶೇಷತೆ ಏನು?
ಪಾರದರ್ಶಕ ಮೇಲ್ಛಾವಣಿವುಳ್ಳ ವಿಸ್ಟಾಡೋಮ್
ಬೋಗಿಗಳು ಹೈಟೆಕ್ ಆಗಿದ್ದು, ಪ್ರವಾಸಿ ರೈಲುಗಳಿಗೆಂದೇ ರೂಪಿಸಲಾಗಿದೆ. ಆಕರ್ಷಕ ಒಳಾಂಗಣ ವಿನ್ಯಾಸ, ಹಗುರ ಬೋಗಿಗಳು ಹಾಗೂ ಅಪ್ರತಿಮ ವೇಗ ಹೊಂದಿರುತ್ತವೆ. ಪ್ರತಿ ಬೋಗಿಯಲ್ಲಿ ಸಿಸಿಟಿವಿ ಕಣ್ಗಾವಲು ವ್ಯವಸ್ಥೆ ಇದೆ. 44 ಸೀಟುಗಳ ಪ್ರತಿ ಬೋಗಿಯು ವೈ-ಫೈ ಆಧಾರಿತ ಪ್ರಯಾಣಿಕರ ಮಾಹಿತಿ ವ್ಯವಸ್ಥೆ ಹೊಂದಿದೆ. ಸಂಗೀತ ಪ್ರಿಯರಿಗಾಗಿ ಡಿಜಿಟಲ್ ಪರದೆ ಮತ್ತು ಸ್ಪೀಕರ್ ಗಳೊಂದಿಗೆ ಸಂಯೋಜಿಸಲಾದ ಮನರಂಜನಾ ವ್ಯವಸ್ಥೆ ಇದೆ.
ಪ್ರಯಾಣಿಕರ ಗ್ಯಾಜೆಟ್‌ಗಳಿಗೆ ವೈಫೈ ಸೌಲಭ್ಯ ಸಿಗಲಿದೆ. ಪ್ರತಿಯೊಂದು ಸೀಟಿಗೆ ಪ್ರತ್ಯೇಕ ಮೊಬೈಲ್ ಚಾರ್ಜಿಂಗ್ ಪಾಯಿಂಟ್ ನೀಡಲಾಗಿದೆ. ಆಸನಗಳು 180 ಡಿಗ್ರಿಗಳವರೆಗೆ ತಿರುಗಬಲ್ಲವು. ಹೊಸ ಬೋಗಿಗಳಲ್ಲಿ ಜಿಪಿಎಸ್ ಆಧಾರಿತ ಪ್ರಯಾಣಿಕ ಮಾಹಿತಿ ವ್ಯವಸ್ಥೆ, (ಪಿಎಪಿಐಎಸ್), ಎಲ್ ಇಡಿ ಡೆಸ್ಟಿನೇಶನ್ ಬೋರ್ಡ್,ಪ್ರಯಾಣಿಕರಿಗೆ ಉಪಾಹಾರ ಒದಗಿಸಲು ಮಿನಿ ಪ್ಯಾಂಟ್ರಿ ಇವೆ. ಸರ್ವಿಸ್ ಸ್ಥಳವು ಮೈಕ್ರೊವೇವ್ ಓವನ್, ಕಾಫಿ ತಯಾರಿಕಾ ಯಂತ್ರ, ರೆಫ್ರಿಜರೇಟರ್ ಮತ್ತು ವಾಷ್‌ಬೇಸಿನ್ ಅನ್ನು ಒಳಗೊಂಡಿರುತ್ತದೆ.
– ವಿಜಯಕುಮಾರ್ ಚಂದರಗಿ