Advertisement
“ವಿಶ್ ಟ್ರೀ’ ಎಂಬುದು “ದೃಕ್ಷ್ಯಾ ಟ್ರಸ್ಟ್’ ಪ್ರಾರಂಭಿಸಿರುವ ಯೋಜನೆ. 4 ವರ್ಷಗಳ ಹಿಂದೆ, ಕೇರಳದ ಒಂದು ಮಾಲ್‌ನಲ್ಲಿ ಪ್ರಾರಂಭವಾಯ್ತು. ಟ್ರಸ್ಟ್‌ನವರು, ವಿವಿಧ ಅನಾಥಾಶ್ರಮಗಳಿಗೆ ಹೋಗಿ ಮಕ್ಕಳಿಗೆ ಏನು ಗಿಫ್ಟ್ ಬೇಕೆಂದು ಕೇಳಿದರು. ಆಗ 60 ಮಕ್ಕಳು ತಮ್ಮ ಬೇಡಿಕೆಗಳನ್ನು ಮುಂದಿಟ್ಟರು. ನಂತರ ಮಾಲ್‌ನಲ್ಲಿ “ವಿಶ್ ಟ್ರೀ’ ಹೆಸರಿನಲ್ಲಿ, ಕ್ರಿಸ್‌ಮಸ್ ಗಿಡ ನೆಟ್ಟು, ಅದರ ರೆಂಬೆ- ಕೊಂಬೆಗಳಿಗೆ ಮಕ್ಕಳ ಬೇಡಿಕೆಗಳಿದ್ದ ಚೀಟಿಗಳನ್ನು ಅಂಟಿಸಲಾಯ್ತು. ಕ್ರಿಸ್‌ಮಸ್ ವೇಳೆ ಗಿಜಿಗಿಡುವ ಮಾಲ್‌ಗೆ ಬಂದ ಜನರು, ಆ ಬೇಡಿಕೆಗಳನ್ನು ಓದಿದರು. ತಮ್ಮ ಕೈಲಾದ ಗಿಫ್ಟ್ ಅನ್ನು ಖರೀದಿಸಿ, ಟ್ರಸ್ಟ್‌ನ ಸ್ವಯಂ ಸೇವಕರಿಗೆ ನೀಡಿದರು. ಹೀಗೆ ಆ ವರ್ಷದ ಕ್ರಿಸ್‌ಮಸ್‌ನಲ್ಲಿ 60 ಮಕ್ಕಳಿಗೂ ಗಿಫ್ಟ್ ಸಿಕ್ಕಿತು.
Related Articles
ಕಳೆದ 4 ವರ್ಷಗಳಲ್ಲಿ, ಕೇರಳದ ಸಾವಿರಾರು ಅನಾಥ ಮಕ್ಕಳ ಬೇಡಿಕೆಗಳನ್ನು ಪೂರೈಸಿರುವ ವಿಶ್ ಟ್ರೀ, ಮೊದಲ ಬಾರಿಗೆ ಬೆಂಗಳೂರಿಗೆ ಕಾಲಿಟ್ಟಿದೆ. ದೃಕ್ಷ್ಯಾ ಟ್ರಸ್ಟ್, ಸದ್ಯಕ್ಕೆ ತನ್ನ ವೆಬ್‌ಸೈಟ್ ಮೂಲಕವೇ ದಾನಿಗಳಿಂದ ಗಿಫ್ಟ್ಗಳನ್ನು ಸಂಗ್ರಹಿಸುತ್ತಿದೆ. ಈಗಾಗಲೇ ವಿವಿಧ ಅನಾಥಾಲಯಗಳ, 750 ಮಕ್ಕಳ ಬೇಡಿಕೆಗಳನ್ನು ಸಂಗ್ರಹಿಸಿದ್ದು, ದಾನಿಗಳಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಒಂದು ವಾರದಲ್ಲಿಯೇ 200 ಬೇಡಿಕೆಗಳನ್ನು ಜನ ಪೂರೈಸಿದ್ದಾರೆ. ಮೊದಲಿಗೆ ಟ್ರಸ್ಟ್, ಕೇವಲ 75 ಮಕ್ಕಳ ಬೇಡಿಕೆಗಳನ್ನು ಸಂಗ್ರಹಿಸಿ, ಅದನ್ನು 3 ವಾರದಲ್ಲಿ ಪೂರೈಸುವ ಗುರಿ ಹೊಂದಿತ್ತು. ಆದರೆ, ಫೇಸ್‌ಬುಕ್ ಪೇಜ್ ಮೂಲಕ, ಜನರಿಂದ ಜನರಿಗೆ ಮಾಹಿತಿ ಸಿಕ್ಕಿ, ಕೇವಲ 7 ಗಂಟೆಗಳಲ್ಲಿ ಅಷ್ಟೂ ಮಕ್ಕಳ ಆಸೆಗಳು ಈಡೇರಿದವು. ನಂತರ, ಹೆಚ್ಚೆಚ್ಚು ಅನಾಥಾಲಯಗಳಿಗೆ ಭೇಟಿ ನೀಡಿ, ಬೇಡಿಕೆಗಳನ್ನು ಸಂಗ್ರಹಿಸಲಾಗಿದೆ. ಈಗಾಗಲೇ 500 ಮಕ್ಕಳ ಆಶಯ ಈಡೇರಿದೆ.
Advertisement
ನೀವೂ ಸಾಂತಾ ಆಗಬಹುದು…ನಿಮಗೂ ಸೀಕ್ರೆಟ್ ಸಾಂತಾ ಆಗೋ ಇಚ್ಛೆಯಿದ್ದರೆ, drikshya.com ಭೇಟಿ ಕೊಟ್ಟು, ನಿಮ್ಮ ವಿವರಗಳನ್ನು ನೀಡಿ. ನೀವು ಯಾವ ವಯಸ್ಸಿನ ಮಗುವಿಗೆ, ಏನನ್ನು ಕಳಿಸಬೇಕು ಮತ್ತು ಯಾವ ವಿಳಾಸಕ್ಕೆ ಕಳಿಸಬೇಕು ಎಂಬ ಮಾಹಿತಿಯನ್ನು ಟ್ರಸ್ಟ್ ನೀಡುತ್ತದೆ. ಹೀಗೆ ದಾನಿಗಳು ಆನ್‌ಲೈನ್ ಮೂಲಕ ಕಳಿಸಿದ ಗಿಫ್ಟ್ಗಳನ್ನು ಸಂಗ್ರಹಿಸಿ, ವಸ್ತುಗಳು ಗಿಫ್ಟ್ ಕೊಡಲು ಸೂಕ್ತವಾಗಿದೆಯೇ ಎಂದು ಪರಿಶೀಲಿಸಿ, ಬಣ್ಣದ ಪೇಪರ್‌ನಲ್ಲಿ ಪ್ಯಾಕ್ ಮಾಡಿ, ಸ್ವಯಂ ಸೇವಕರು ಅನಾಥಾಲಯದ ಮಕ್ಕಳಿಗೆ ತಲುಪಿಸುತ್ತಾರೆ. ಯಾವ ದಿನ ನಿಮ್ಮ ಗಿಫ್ಟ್, ಮಗುವಿನ ಕೈ ಸೇರುತ್ತದೆ ಎಂಬ ಮಾಹಿತಿಯನ್ನೂ ನೀಡುತ್ತಾರೆ. ಸಮಯವಿದ್ದರೆ ನೀವೂ ಆ ದಿನ ಖುದ್ದಾಗಿ ಹೋಗಿ, ಮಗುವಿನ ಕಣಿ¾ಂಚನ್ನು ನೋಡಬಹುದು. ಮಕ್ಕಳು ಏನೆಲ್ಲಾ ಕೇಳ್ತಾರೆ?
ಫ್ರಾಕ್, ವಾಚ್, ಸ್ಪೈಡರ್‌ಮ್ಯಾನ್ ಮ್ಯಾನ್ ದಿರಿಸು, ಬಾರ್ಬಿ ಗೊಂಬೆ, ಉಗುರು ಬಣ್ಣ, ನೆಚ್ಚಿನ ಆಟಗಾರನ ಹೆಸರಿರೋ ಫುಟ್‌ಬಾಲ್ ಜೆರ್ಸಿ, ಕಲರಿಂಗ್ ಬುಕ್, ಶೂಗಳು… ಹೀಗೆ ತಮ್ಮ ಕನಸಿನ ವಸ್ತುಗಳಿಗಾಗಿ ಮಕ್ಕಳು ಬೇಡಿಕೆ ಇಟ್ಟಿದ್ದಾರೆ. ಕೆಲ ಮಕ್ಕಳು, “ನಂಗೆ ಇಂಥ ಬಣ್ಣದ್ದು, ಹೀಗೇ ಇರುವ ಫ್ರಾಕ್ ಕೊಡಿಸಿ’ ಅಂತ ಕೇಳಿದ್ದಾರೆ. ನಿಮ್ಮ ಗಿಫ್ಟ್ ಎಲ್ಲೆಲ್ಲಿಗೆ ತಲುಪುತ್ತೆ?
ಬಾಣಸವಾಡಿ ಸ್ಲಂ ಏರಿಯಾ, ಆಶಾನಿಲಯ, ಸೇಂಟ್ ಪ್ಯಾಟ್ರಿಕ್ ಬಾಯ್ಸ… ಹೋಂ, ಗುಡ್ ಶೆಫರ್ಡ್ ಹೋಂ ಫಾರ್ ಗರ್ಲ್ಸ್, ಎಲಿಜಬೆತ್ ಟ್ರಸ್ಟ್ ಮುಂತಾದ ಸಂಸ್ಥೆಗಳ, 6-18 ವರ್ಷದ ಮಕ್ಕಳಿಗೆ. ಹುಡುಗರ ವಾಚ್ ಕೇಳಿದ ಹುಡುಗಿ!
ಒಂದು ಹುಡುಗಿ ತನಗೆ, “ಬಾಯ್ಸ… ವಾಚ್ ಬೇಕು’ ಅಂತ ಕೇಳಿದ್ದಳು. ಆಕೆಗೆ 14 ವರ್ಷ. ಅವಳನ್ನು ಕರೆದು, “ನಿಂಗ್ಯಾಕೆ ಅದೇ ಗಿಫ್ಟ್ ಬೇಕು?’ ಅಂತ ಕೇಳಿದಾಗ, ಇದು ನನಗಲ್ಲ, ನನ್ನ ತಮ್ಮನಿಗೆ ಅಂದಳಂತೆ! ನಿನಗೆ ಏನೂ ಬೇಡವಾ ಅಂತ ಕೇಳಿದಾಗ, “ಉಹೂಂ, ತಮ್ಮನಿಗೇ ಕೊಡಿಸಿ’ ಅಂದಳು. ಕೊನೆಗೆ ಅವಳಿಗೆ ಮತ್ತು ಅವಳ ತಮ್ಮನಿಗೆ, ಇಬ್ಬರಿಗೂ ಗಿಫr… ಸಿಕ್ಕಿತು. ಆಕೆ ನ್ಪೋರ್ಟ್ಸ್ನಲ್ಲಿ ಮುಂದಿದ್ದು, ಅವಳ ಬಳಿ ನ್ಪೋರ್ಟ್ಸ್ ಶೂ ಇಲ್ಲ ಅಂತ ತಿಳಿದಾಗ, ವಿಶ್ ಟ್ರೀ ಮೂಲಕ ಒಂದು ಜೊತೆ ನ್ಪೋರ್ಟ್ಸ್ ಶೂ ನೀಡಲಾಗಿತ್ತು. ನೀವು ಗಮನಿಸಿರಬಹುದು, ತುಂಬಾ ಜನ ಅನಾಥಾಲಯಗಳಿಗೆ ದಾನ ನೀಡುತ್ತಾರೆ. ಹಬ್ಬ, ಹುಟ್ಟಿದ ಹಬ್ಬದ ದಿನಗಳಂದು ಬಟ್ಟೆ, ಸಿಹಿತಿಂಡಿ, ಆಟಿಕೆಗಳನ್ನು ಕಳಿಸುತ್ತಾರೆ. ಆದರೆ, ಯಾರೂ ನಾವು ಕಳಿಸಿರುವುದು ಅಲ್ಲಿನ ಮಕ್ಕಳಿಗೆ ಖುಷಿ ನೀಡುತ್ತದಾ ಎಂದು ಯೋಚಿಸುವುದಿಲ್ಲ. ಅನಾಥ ಮಕ್ಕಳಿಗೂ ಆಸೆಗಳಿರುತ್ತವೆ. ಇಂಥದ್ದೇ ಆಟಿಕೆ ಬೇಕು, ಇಂಥ ಬಣ್ಣದ ಡ್ರೆಸ್ ಹಾಕ್ಕೋಬೇಕು ಅಂತೆಲ್ಲಾ. ನಾವು ಚಿಕ್ಕವರಿ¨ªಾಗ ಅಪ್ಪ - ಅಮ್ಮನ ಬಳಿ ಹೋಗಿ, ನಂಗೆ ಇದೇ ಬೇಕು, ಅದೇ ಬೇಕು ಅಂತ ಹಠ ಮಾಡುತ್ತಿದ್ದೆವಲ್ಲಾ ಹಾಗೆ. ಆದರೆ, ಎಲ್ಲರ ಬದುಕಿನಲ್ಲೂ ಹೆತ್ತವರೆಂಬ ಸಾಂತಾ ಕ್ಲಾಸ್ ಇರುವುದಿಲ್ಲವಲ್ಲ? ಆ ಮಕ್ಕಳ ಸಣ್ಣ ಕನಸುಗಳನ್ನು ಈಡೇರಿಸುವ ಕಲ್ಪನೆಯೇ ಈ ವಿಶ್ ಟ್ರೀ.
– ಮೊಹಮ್ಮದ್ ಮುಸ್ತಾಫ, ದೃಕ್ಷ್ಯಾ ಸ್ಥಾಪಕ ಹೆಚ್ಚಿನ ಮಾಹಿತಿಗೆ: 9947721963, www.drikshya.com, Info@drikshya.com ಪ್ರಿಯಾಂಕ ಎನ್.