Advertisement

ಯುವ ಬ್ರಿಗೇಡ್‌ನಿಂದ ವಿವೇಕ ಮಾಲಾಧಾರಣೆ 

12:07 PM Dec 28, 2017 | |

ಮಹಾನಗರ: ಯುವ ಬ್ರಿಗೇಡ್‌ ವತಿಯಿಂದ ರಾಕ್‌ ಡೇ ಆಚರಣೆ ಮತ್ತು ವಿವೇಕಮಾಲೆ ಅಭಿಯಾನದ ಪ್ರಯುಕ್ತ ವಿವೇಕಮಾಲೆ ಧಾರಣೆ ಗೋಪಿ ಭಟ್‌ ಅವರ ನೇತೃತ್ವದಲ್ಲಿ ಕಾತ್ಯಾಯಿನಿ ಮಠದಲ್ಲಿ ನಡೆಯಿತು.

Advertisement

ಬಳಿಕ ಮಾತನಾಡಿದ ಅವರು, ವ್ರತದ ಸಮಯದಲ್ಲಿ ಶ್ರದ್ಧೆ ಅಗತ್ಯ. ಈ ಸಮಯದಲ್ಲಿ ಅನ್ಯ ಯೋಚನೆ ಮಾಡದೆ ಸದಾ ವಿವೇಕಾನಂದರ ಚಿಂತನೆಯಲ್ಲಿ ತೊಡಗಿಕೊಳ್ಳೋಣ. ಇಂದಿನಿಂದ ವಿವೇಕಮಾಲೆಯ ವಿಸರ್ಜನೆಯ ತನಕ ಯಾವುದೇ ವಿಘ್ನ ಎದುರಾಗದೆ ಕನ್ಯಾ ಕುಮಾರಿ ಯಾತ್ರೆ ಯಶಸ್ವಿ ಯಾಗಲಿ ಎಂದರು. ಸ್ವಾಮಿ ವಿವೇಕಾನಂದರಿಗೆ ಈವೇಳೆ ಪೂಜೆ ಸಲ್ಲಿಸಲಾಯಿತು.

ವಿವೇಕಮಾಲೆ ಅಭಿಯಾನದ ಬಗ್ಗೆ ವಿವರಿಸಿದ ಜಿಲ್ಲಾ ಸಂಚಾಲಕ ತಿಲಕ್‌ ಶಿಶಿಲ, ವಿವೇಕಮಾಲೆ ಅಭಿಯಾನವು ಇಂದಿನಿಂದ ಆರಂಭವಾಗಿ ಪ್ರತಿದಿನ ವಿವೇಕಮಾಲೆ ವಾಟ್ಸಾಪ್‌ ಗ್ರೂಪ್‌ನಲ್ಲಿ ಬರುವಂತಹ ವ್ಯಾಯಾಮ, ಯೋಗಾಸನ ಮತ್ತು ವಿವೇಕಾನಂದರ ಚಿಂತನೆಗಳ ಅಧ್ಯಯನ ನಡೆಯುತ್ತದೆ. ಈ ಸಂದರ್ಭದಲ್ಲಿ ವಿವೇಕಮಾಲೆ ಧಾರಣೆ ಮಾಡಿದ ಪ್ರತಿ ಕಾರ್ಯಕರ್ತನೂ ದೇಶದ ಬಗ್ಗೆ ಚಿಂತನೆ ನಡೆಸುತ್ತಾ ಜ. 13ರಂದು ಕನ್ಯಾಕುಮಾರಿಗೆ ತೆರಳಿ ವಿವೇಕ ಸ್ಮಾರಕದ ಬಳಿ ಮಾಲೆ ವಿಸರ್ಜನೆ ಮಾಡಲಿರುವರು ಎಂದರು. ಜಿಲ್ಲೆಯ ವಿವಿಧೆಡೆಗಳಲ್ಲಿ ಸುಮಾರು 30ಕ್ಕೂ ಹೆಚ್ಚು ಕಾರ್ಯಕರ್ತರು ವಿವೇಕ ಮಾಲೆ ಧಾರಣೆ ಮಾಡಿದರು. ಜಿಲ್ಲಾ ಸಂಚಾಲಕ ತಿಲಕ್‌ ಶಿಶಿಲ, ನಗರ ಸಂಪರ್ಕ ಪ್ರಮುಖ ವಿನೋದ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next